India: 2023 ಸೆಪ್ಟೆಂಬರ್‌ನಲ್ಲಿ ₹1.62 ಲಕ್ಷ ಕೋಟಿ ಒಟ್ಟು GST ಸಂಗ್ರಹ, ಈ ವರ್ಷ ಏರಿಕೆ ಆಗಿದ್ದೇಷ್ಟು?
ಬೆಂಗಳೂರು, ಅಕ್ಟೋಬರ್ 01: ಪ್ರಸಕ್ತ ಸಾಲಿನ 2023-24ರ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ ಸರಕು ಸೇವೆ ತೆರಿಗೆ (GST) ಸಂಗ್ರಹ ₹1.60 ಲಕ್ಷ ಕೋಟಿ ದಾಟಿದೆ. ಇದೇ ವರ್ಷದ (2023-24) ಮೊದಲಾರ್ಧದಲ್ಲಿ ₹9,92,508 ಕೋಟಿ ಒಟ್ಟು GST ರೂಪಾಯಿ ಸಂಗ್ರಹ ಆಗಿದೆ ಈ ಮೂಲಕ ಶೇಕಡಾ 11ರಷ್ಟು ಬೆಳವಣಿಗೆ ಸಾಧಿಸಿದೆ.
ಕಳೆದ ತಿಂಗಳ ಸೆಪ್ಟೆಂಬರ್ ನಲ್ಲಿ ಒಟ್ಟು ಜಿಎಸ್‌ಟಿ ಆದಾಯವು ₹1,62,712 ಕೋಟಿ ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್‌ಟಿ ₹29,818 ಕೋಟಿ, ಎಸ್‌ಜಿಎಸ್‌ಟಿ ₹37,657 ಕೋಟಿ, ಐಜಿಎಸ್‌ಟಿ ₹83,623 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹41,145 ಕೋಟಿ ಸೇರಿದಂತೆ) ಮತ್ತು ಸೆಸ್ ₹11,613 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹881 ಕೋಟಿ ಸೇರಿದಂತೆ) ಸಂಗ್ರಹಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಕೇಂದ್ರ ಸರ್ಕಾರ IGSTಯಿಂದ CGST ₹33,736 ಕೋಟಿ ಮತ್ತು SGSTಗೆ ₹27,578 ಕೋಟಿ ಇತ್ಯರ್ಥಪಡಿಸಿದೆ. ನಿಯಮಿತ ಇತ್ಯರ್ಥದ ನಂತರ ಸೆಪ್ಟೆಂಬರ್ 2023 ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು CGST ಗಾಗಿ ₹63,555 ಕೋಟಿ ಮತ್ತು SGST ಗಾಗಿ ₹65,235 ಕೋಟಿ ಬಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್, 2023 ರ ಆದಾಯವು ಕಳೆದ ವರ್ಷದ ಅದೇ ತಿಂಗಳ GST ಆದಾಯಕ್ಕಿಂತ 10% ಹೆಚ್ಚಾಗಿದೆ. ತಿಂಗಳಿನಲ್ಲಿ, ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 14% ಹೆಚ್ಚಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ನಾಲ್ಕನೇ ಬಾರಿಗೆ ₹1.60 ಲಕ್ಷ ಕೋಟಿ ದಾಟಿದೆ.
👉 ₹1,62,712 crore gross #GST revenue collected during September 2023; records 10% Year-on-Year growth
— Ministry of Finance (@FinMinIndia) October 1, 2023
👉 GST collection crosses ₹1.60 lakh crore mark for the fourth time in FY 2023-24
👉 ₹9,92,508 crore gross #GST collection for the first half of FY 2023-24 marks 11% Y-o-Y… pic.twitter.com/1C8QiSQcVw
ಸೆಪ್ಟೆಂಬರ್ 2023ಕ್ಕೆ ಕೊನೆಗೊಳ್ಳುವ 2023-24 ರ ಮೊದಲಾರ್ಧದ ಒಟ್ಟು ಜಿಎಸ್‌ಟಿ ಸಂಗ್ರಹವು (₹9,92,508 ಕೋಟಿ) ಕಳೆದ ಸಾಲಿನ (2022-23) ಮೊದಲಾರ್ಧದಲ್ಲಿ ಒಟ್ಟು GST ಸಂಗ್ರಹಕ್ಕಿಂತ ಶೇಕಡಾ 11% ರಷ್ಟು (₹8,93,334 ಕೋಟಿ) ಏರಿಕೆ ಆಗಿದೆ. ಈ ವರ್ಷ ಸರಾಸರಿ ಮಾಸಿಕ ಒಟ್ಟು ಸಂಗ್ರಹವು ₹1.65 ಲಕ್ಷ ಕೋಟಿಗಳಷ್ಟಿದೆ.












Click it and Unblock the Notifications