• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರ್ಯಾಣದಲ್ಲಿ ಹ್ಯಾಪಿ ನ್ಯೂ ಇಯರ್ ಭಾಗ-2ǃ

|

ನವದೆಹಲಿ: ಅ.29: ದರೋಡೆ ಕತೆ ಆಧರಿಸಿದ ಸಿನಿಮಾಗಳಿಗೆ ಭಾರತದಲ್ಲಿ ಕೊರತೆಯಿಲ್ಲ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಹ್ಯಾಪಿ ನ್ಯೂ ಇಯರ್, ಧೂಮ್ ಚಿತ್ರಗಳ ಸರಣಿ ಇವಕ್ಕೆ ಉತ್ತಮ ಉದಾಹರಣೆ. ಆದರೆ ಅಂತಹುದೇ ದರೋಡೆ ನಿಜವಾಗಿ ನಡೆದರೆ ಹೇಗೆ? ಅದೂ ಭಾರತದಲ್ಲಿ..

ಹೌದು ಅಲ್ಲಿ ಕೊರೆದಿದ್ದು ಸುಮಾರು 2.5 ಅಡಿ ಸುತ್ತಳತೆಯ 125 ಅಡಿ ದೂರದ ಸುರಂಗ, ಅಪಹರಿಸಿದ್ದು ಕೋಟ್ಯಂತರ ಮೌಲ್ಯದ ಚಿನ್ನಾಭರಣ. ಪಕ್ಕಾ ಸಿನಿಮೀಯ ಶೈಲಿಯ ಬೃಹತ್ ದರೋಡೆ ಹರ್ಯಾಣದ ಗೊಹಾನ ಜಿಲ್ಲೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದಿದೆ.[ಶಿವಮೊಗ್ಗ ಮಾಚೇನಹಳ್ಳಿ ಬ್ಯಾಂಕ್ ದರೋಡೆ]

ಬ್ಯಾಂಕ್ ಗೆ ಕನ್ನ ಕೊರೆದ ಕಳ್ಳರು 90 ಕ್ಕೂ ಹೆಚ್ಚು ಲಾಕರ್ ಗಳನ್ನು ಒಡೆದು ಚಿನ್ನಾಭರಣ ಹೊತ್ತು ಪರಾರಿಯಾಗಿದ್ದಾರೆ. ಬ್ಯಾಂಕ್ ನ ಸ್ಟ್ರಾಂಗ್ ರೂಮಿಗೇ ಕನ್ನಹಾಕಿ ಹಣ ಮತ್ತು ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾರೆ. ಬ್ಯಾಂಕ್ ನಲ್ಲಿದ್ದ 360 ಲಾಕರ್ ಗಳಲ್ಲಿ 90 ಲಾಕರ್ ಒಡೆದಿದ್ದಾರೆ.

ಬ್ಯಾಂಕ್‌ನಿಂದ ಸುಮಾರು ನೂರಾರು ಮೀಟರ್ ದೂರ ಇರುವ ಲಾಡ್ಜ್‌ನ ನೆಲಮಹಡಿಯ ಕೋಣೆಯೊಂದರ ನೆಲದಿಂದ ಸುರಂಗ ತೋಡಲಾಗಿದೆ. ಸುಮಾರು ಒಂದು ತಿಂಗಳಿಂದ ಈ ದರೋಡೆಗೆ ಸ್ಕೆಚ್ ಹಾಕಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.[ಮದುವೆಗಿತ್ತು ಕೆಲವೇ ಕ್ಷಣ, ಮಾಯವಾಗಿತ್ತು ಆಭರಣ!]

ಇಂತಹುದೇ ಪ್ರಕರಣ ತಿಂಗಳ ಹಿಂದೆ ಕೇರಳದಲ್ಲಿಯೂ ನಡೆದಿತ್ತು. ಕನ್ನ ಕೊರೆದು ಸುಮಾರು 8 ಕೋಟಿ ಮೌಲ್ಯದ 80 ಕೆಜಿ ಚಿನ್ನಾಭರಣ ಮತ್ತು ಹಣವನ್ನು ಲಪಟಾಯಿಸಿ ಕಳ್ಳರು ಪರಾರಿಯಾಗಿದ್ದರು. ತುರ್ತು ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಗ್ಯಾಂಗ್‌ನ ನಾಯಕ ಸಿಕ್ಕಿಬಿದ್ದು ಹಿಂದಿ ಸಿನಿಮಾವೊಂದರಿಂದ ಪ್ರೇರೇಪಿತನಾಗಿ ದರೋಡೆ ಮಾಡಿದ್ದೇವು ಎಂದು ತಪ್ಪು ಒಪ್ಪಿಕೊಂಡಿದ್ದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A gang of robbers pulled off a Hollywood-style heist in Haryana's Gohana town by digging a tunnel to a bank and looting cash and jewellery worth crores. The gang dug a 2.5 feet wide tunnel to the strong room of the Punjab National Bank from an abandoned building across the road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more