ಕಳ್ಳರಿಂದ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

Posted By:
Subscribe to Oneindia Kannada

ಗ್ರೇಟರ್ ನೊಯಿಡಾ, ನವೆಂಬರ್ 3; ನೊಯಿಡಾದ ಗ್ರಾಮವೊಂದರಲ್ಲಿ ಮೂರು ಮಹಿಳೆಯರ ಮೇಲೆ ಮನೆಗಳ್ಳರಿಂದ ಭಯಾನಕ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ.

ಈ ಕೃತ್ಯವು ನೊಯಿಡಾದ ಆಫ್ ಕರೋಲಿ ಗ್ರಾಮದಲ್ಲಿ ಜರುಗಿದ್ದು ಅತ್ಯಾಚಾರಕ್ಕೊಳಗಾದ ಮಹಿಳೆಯರು ಇಟ್ಟಿಗೆ ಗೂಡಿನ ಕಾರ್ಮಿಕರು ಎನ್ನಲಾಗಿದೆ.[ರೇಪ್ ಮಾಡಿ ವಾಟ್ಸಪ್ ನಲ್ಲಿ ವಿಡಿಯೋ ಹರಿಬಿಟ್ಟ ಬಾಲಕರು]

ಮನೆಗಳ್ಳರು ಬುಧವಾರ ಮಧ್ಯ ರಾತ್ರಿ 12;30 ಕ್ಕೆ ಇವರ ಮನೆಯನ್ನು ಹೊಡೆದು ನುಗ್ಗಿ ತಂಗಿದ್ದು ಮನೆಯನ್ನು ಲೂಟಿ ಮಾಡಿದ್ದಾರೆ. ಮನೆಯಲ್ಲಿ ಇದ್ದ ಮೂರು ಜನ ಮಹಿಳೆಯರ ಸಾಮೂಹಿಕ ಅತ್ಯಾಚಾರ ನಡೆಸಿದ್ದು ಇವರು ಆ ಮನೆಯಲ್ಲಿ ಗುರುವಾರವೂ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Robbers barge into house, three women gangraped

ಕಳ್ಳರು ನಿನ್ನೆ ಮಧ್ಯರಾತ್ರಿಯೇ ಮನೆಯನ್ನು ಒಡೆದು ಒಳನುಗ್ಗಿ ಮನೆಯಲ್ಲಿ ರಾಬರಿ ನಡೆಸಿದ್ದಾರೆ. ಮಹಿಳೆಯರ ಮೇಲೆ ಮನಬಂದಂತೆ ವರ್ತಿಸುತ್ತಾ ಅತ್ಯಾಚಾರ ವೆಸಿಗಿದರು ಎಂದು ಮಹಿಳೆಯರು ತಿಳಿಸಿದ್ದಾಗಿ ನೊಯಿಡಾದ ಪೊಲೀಸ್‌ ಆಫೀಸರ್ ತಿಳಿಸಿದ್ದಾರೆ.[ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]

ಈ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಅತ್ಯಾಚಾರಕ್ಕೊಳಗಾಗಿ ಬಳಲಿರುವ ಮಹಿಳೆಯರಿಗೆ ವೈಧ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗ್ರೇಟರ್ ನೊಯಿಡಾದ ಪೊಲೀಸ್‌ ಅಧೀಕ್ಷಕ ಸುಜಾತಾ ಸಿಂಗ್‌ ತಿಳಿಸಿದ್ದಾರೆ.

ಅತ್ಯಾಚಾರ ವೆಸಗಿದ ಕಳ್ಳರನ್ನು ಸೆರೆಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅಧೀಕ್ಷಕ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three women were allegedly gangraped by robbers who first looted their houses in Karoli village of Greater Noida.
Please Wait while comments are loading...