13 ಜೀವಗಳನ್ನು ಬಲಿತೆಗೆದುಕೊಂಡ ರಾಜಸ್ಥಾನದ ರಸ್ತೆ ಅಪಘಾತ

Posted By:
Subscribe to Oneindia Kannada

ಜೈಪುರ, ಜನವರಿ 03: ರಾಜಸ್ಥಾನದ ಜೈಪುರ ಮತ್ತು ಸಿಕಾರ್ ಎಂಬಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಟ್ಟು 13 ಜನ ಬಲಿಯಾಗಿದ್ದಾರೆ.

ಪೆರು: 100 ಅಡಿ ಪ್ರಪಾತಕ್ಕೆ ಬಿದ್ದ ಬಸ್, ಕನಿಷ್ಠ 46 ಮಂದಿ ಸಾವು

ಜ.02 ರ ರಾತ್ರಿ, ರಾಜಸ್ಥಾನದ ಜೈಪುರದಲ್ಲಿ ಲಾರಿ ಮತ್ತು ಟೆಂಪೋ ನಡುವೆ ಸಂಭವಿಸಿದ ಅಪಘಾತದಲ್ಲಿ 3 ಮಹಿಳೆಯರು, 2 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 8 ಜನ ಮೃತರಾಗಿದ್ದರು. ಘಟನೆಯಲ್ಲಿ 14 ನ ಮೃತರಾಗಿದ್ದರು. ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ವಾಪಸಾಗುವ ಸಮಯದಲ್ಲಿ ಈ ಘಟನೆ ಸಂಭವಿಸಿತ್ತು.

Road mishaps claim 13 lives in Rajasthan

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ಸಿಗೆ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ 5 ಜನ ಮೃತಪಟ್ಟಿದ್ದು 12 ಜನ ಗಾಯಗೊಂಡಿದ್ದಾರೆ. ಈ ಘಟನೆ ರಾಜಸ್ಥಾನದ ಸಿಕಾರ್ ಎಂಬಲ್ಲಿ ನಡೆದಿದೆ.
ಎರಡೂ ಪ್ರಕರಣಗಳನ್ನೂ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 13 people died and 14 others got injured in two separate road accidents in Rajasthan. In Jaipur, eight members of a family were killed including three women and two children after a tempo collided with a truck last night.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ