• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಟ್ರೋಲ್, ಡೀಸೆಲ್ ತುಮ್ ಆಗೇಬಡೋ ಎಲ್ಪಿಜಿ ತುಮಾರ ಸಾಥ್ ಹೇ..

|

"ಪೆಟ್ರೋಲ್, ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಯುಪಿಎ ಸರಕಾರದ ಕಾರ್ಯವೈಖರಿ. ತೈಲ ಉತ್ಪನ್ನಗಳ ಬೆಲೆ ಹೆಚ್ಚಳದಿಂದ ಇತರ ಪದಾರ್ಥಗಳ ಬೆಲೆಯೂ ಹೆಚ್ಚಾಗುತ್ತದೆ. ಜನಸಾಮಾನ್ಯರ ಸಮಸ್ಯೆಗಳನ್ನು ಪ್ರಧಾನಿಗಳು ಅರ್ಥಮಾಡಿಕೊಂಡು, ಬೆಲೆಯನ್ನು ಕಮ್ಮಿಮಾಡಲಿ"ಇದು ನರೇಂದ್ರ ಮೋದಿ, ಯುಪಿಎ ಸರಕಾರದ ಅವಧಿಯಲ್ಲಿ ಹೇಳಿದ್ದ ಮಾತು.

ಆದರೆ, ಮೇ 2014ರಲ್ಲಿ ಅಂದರೆ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರದಿಂದ ಇಂದಿನವರೆಗೆ ಹಲವು ಏರಿಳಿತ ಕಂಡ ಪೆಟ್ರೋಲ್ ಬೆಲೆ ಲೀಟರ್ ಒಂದಕ್ಕೆ 71.41 ರೂಪಾಯಿಯಿಂದ 92 ರೂಪಾಯಿಗೆ ಮತ್ತು ಡೀಸೆಲ್ ಬೆಲೆ 84 ರೂಪಾಯಿಗೆ ಬಂದು ನಿಂತಿದೆ.

ಶಾಕಿಂಗ್ ನ್ಯೂಸ್: LPG ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಪೈಪೋಟಿ ನೀಡುವಂತೆ ಅಡುಗೆ ಇಂಧನ (ಎಲ್ಪಿಜಿ) ಬೆಲೆಯೂ ಗಗನಕ್ಕೇರುತ್ತಿದೆ. ಇಂದಿನ ಎಲ್ಪಿಜಿ ಬೆಲೆ 769 ರೂಪಾಯಿ, ಇನ್ನು, ಸಿಲಿಂಡರ್ ತಂದು ಹಾಕುವವನಿಗೆ ಮೂವತ್ತು ರೂಪಾಯಿ ಕೊಟ್ಟರೆ, 800 ರೂಪಾಯಿಯಲ್ಲಿ ಐದು ಪೈಸೆ ಉಳಿಯುವುದಿಲ್ಲ.

ಇಂಥ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5ರೂ ತಗ್ಗಿಸಿದ ಸರ್ಕಾರ!

ಮೇ 2020ರಲ್ಲಿ 585 ರೂಪಾಯಿಯಿದ್ದ ಸಿಲಿಂಡರ್ ಬೆಲೆ ಈಗ 769 ರೂಪಾಯಿ ಆಗಿದೆಯೆಂದರೆ, ಕೇವಲ ಒಂಬತ್ತು ತಿಂಗಳಲ್ಲಿ ಶೇ. 31ರಷ್ಟು ಬೆಲೆ ಏರಿಕೆಯಾಗಿದೆ. ಅಂದು ಬೆಲೆ ಏರಿಕೆಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಜರಿದಿದ್ದ ಮೋದಿ ಈಗ ಏನು ಹೇಳುತ್ತಾರೆ?

ತೈಲ ಉತ್ಪನ್ನಗಳ ಬೆಲೆ ಸತತವಾಗಿ ಏಳು ದಿನದಿಂದ ಏರಿಕೆ

ತೈಲ ಉತ್ಪನ್ನಗಳ ಬೆಲೆ ಸತತವಾಗಿ ಏಳು ದಿನದಿಂದ ಏರಿಕೆ

ತೈಲ ಉತ್ಪನ್ನಗಳ ಬೆಲೆ ಸತತವಾಗಿ ಏಳು ದಿನದಿಂದ ಏರಿಕೆಯಾಗುತ್ತಲೇ ಇದೆ. ಮುಂಬೈ, ಜೈಪುರ ಮುಂತಾದ ನಗರಗಳಲ್ಲಿ ಪೆಟ್ರೋಲ್ ಬೆಲೆ 95, ಇನ್ನು, ಸಾಗಣೆ ಅಂತರ ಹೆಚ್ಚಿರುವ ಜಿಲ್ಲೆಗಳಲ್ಲಿ ಇದರ ಬೆಲೆ ಮೂರಂಕಿ ದಾಟಿದೆ. ಬಿಜೆಪಿಯವರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ವಿರೋಧ ಪಕ್ಷದವರು ಪ್ರತಿಭಟನೆ ನಡೆಸುತ್ತಿದ್ದರೂ, ಅದರ ಬಿಸಿ ಸರಕಾರಕ್ಕೆ ತಟ್ಟುತ್ತಿಲ್ಲ. ಅಲ್ಲಿಗೆ, ಜನಸಾಮಾನ್ಯರ ಪಾಡು ದೇವರಿಗೇ ಪ್ರೀತಿ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುವ ಸೆಸ್

ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುವ ಸೆಸ್

ಪೆಟ್ರೋಲ್ ಮತ್ತು ಡೀಸೆಲ್ ಮೂಲಬೆಲೆ ಕಮ್ಮಿಯಿದ್ದರೂ, ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುವ ಸೆಸ್ ಮಿತಿಮೀರಿದ್ದು. ಪೆಟ್ರೋಲ್ ಮೂಲ ಬೆಲೆಯ ಮೇಲೆ ಸೆಸ್ ಸುಮಾರು 33, ಡೀಸೆಲ್ ಮೇಲೆ 32 ರೂಪಾಯಿ ವಿಧಿಸಲಾಗುತ್ತದೆ. ಇದರ ಮೇಲೆ ಪೆಟ್ರೋಲ್ ಪಂಪ್ ಅವರ ಕಮಿಷನ್, ಇದರ ಮೇಲೆ ಮತ್ತೆ ರಾಜ್ಯದ ತೆರಿಗೆ. ಇನ್ನು ಅಡುಗೆ ಇಂಧನದ ಮೇಲೆ ಏಕಾಏಕಿ ಐವತ್ತು ರೂಪಾಯಿ ಫೆಬ್ರವರಿ 15ಕ್ಕೆ ಅನ್ವಯವಾಗುವಂತೆ ಏರಿಸಲಾಗಿದೆ. ಕೊರೊನಾ ಸಂಕಷ್ಟದ ನಡುವೆ ಜನಸಾಮಾನ್ಯರ ಮೇಲೆ ಭಾರೀ ಬರೆ ಇದಾಗಿದೆ.

ಬೆಲೆ ಇಳಿಕೆ ಸಾಧ್ಯವಿಲ್ಲ ಎಂದ ಕೇಂದ್ರ ಸರಕಾರ

ಬೆಲೆ ಇಳಿಕೆ ಸಾಧ್ಯವಿಲ್ಲ ಎಂದ ಕೇಂದ್ರ ಸರಕಾರ

ತೈಲ ಉತ್ಪನ್ನಗಳ ಮೂಲ ಬೆಲೆಗಿಂತ ತೆರಿಗೆ ಪ್ರಮಾಣವೇ ಹೆಚ್ಚಾಗಿರುವುದರಿಂದ, ಇದನ್ನು ತಗ್ಗಿಸಲು ಕೇಂದ್ರ ಸರಕಾರದ ಮೇಲೆ ಭಾರೀ ಒತ್ತಡವನ್ನು ವಿರೋಧ ಪಕ್ಷದವರು ಹಾಕುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ಜಗ್ಗದ ಕೇಂದ್ರ ಸರಕಾರ, ಬೆಲೆ ಇಳಿಕೆ ಸಾಧ್ಯವಿಲ್ಲ ಎಂದು ನೇರಾನೇರವಾಗಿ ಹೇಳಿದೆ. ಇತ್ತೀಚಿನ ಕೇಂದ್ರ ಬಜೆಟ್ ನಲ್ಲಿ ಪೆಟ್ರೋಲ್ ಮೇಲೆ 2.5 ಮತ್ತು ಡೀಸೆಲ್ ಮೇಲೆ 4 ರೂಪಾಯಿ ಕೃಷಿ ಸೆಸ್ ಎಂದು ವಿಧಿಸಲಾಗಿತ್ತು.

ಎಲ್ಪಿಜಿ ಬೆಲೆ ಏರಿಕೆ

ಎಲ್ಪಿಜಿ ಬೆಲೆ ಏರಿಕೆ

ಎಲ್ಪಿಜಿ ಬೆಲೆ ಏರಿಕೆಯ ನಂತರವಂತೂ ಕೇಂದ್ರ ಸರಕಾರ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಸಾರ್ವತ್ರಿಕ ಚುನಾವಣೆಯ ವೇಳೆ 'ಮೋದಿ ತುಮ್ ಆಗೇಬಡೋ, ದೇಶ್ ತುಮಾರ ಸಾಥ್ ಹೇ'ಎನ್ನುವ ಘೋಷ ವಾಕ್ಯ ಕೇಳಿ ಬರುತ್ತಿತ್ತು. ಈಗ 'ಪೆಟ್ರೋಲ್, ಡೀಸೆಲ್ ತುಮ್ ಆಗೇಬಡೋ ಎಲ್ಪಿಜಿ ತುಮಾರ ಸಾಥ್ ಹೇ' ಎನ್ನುವ ಅಣಕು ಘೋಷವಾಕ್ಯದ ಮೂಲಕ ಮೋದಿ ಸರಕಾರವನ್ನು ಸಾಮಾಜಿಕ ತಾಣದಲ್ಲಿ ಲೇವಡಿ ಮಾಡಲಾಗುತ್ತಿದೆ.

English summary
Burden of the fuel price hike has fallen on common people and farmers, whose lives have already been adversely hit by the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X