ಲಂಡನ್ ನಿವಾಸಕ್ಕೆ ಮುಖೇಶ್ ಅಂಬಾನಿ ಕುಟುಂಬ ಸ್ಥಳಾಂತರ ಸುದ್ದಿ ಸುಳ್ಳು: ರಿಲಾಯನ್ಸ್ ಸ್ಪಷ್ಟನೆ
ಮುಂಬೈ, ನವೆಂಬರ್ 5: ಭಾರತದ ಪ್ರಸಿದ್ಧ ಉದ್ಯಮಿ ಎನಿಸಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರು ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ ಭಾಗಶಃ ವಾಸಿಸುವ ಯೋಜನೆ ಹಾಕಿಕೊಂಡಿದ್ದಾರೆಯೇ, ಈ ಕುರಿತಾಗಿ ಪ್ರಕಟಿಸಲಾದ ವರದಿಗಳೆಲ್ಲ ಅಧಾರ ರಹಿತವಾದದ್ದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹವು ಶುಕ್ರವಾರ ಸ್ಪಷ್ಟಪಡಿಸಿದೆ.
ಲಂಡನ್ ನಿವಾಸಕ್ಕೆ ಮುಖೇಶ್ ಅಂಬಾನಿಯಾವರ ಇಡೀ ಕುಟುಂಬವೇ ಭಾಗಶಃ ಶಿಫ್ಟ್ ಆಗಲಿದೆ ಎಂಬ ಆಧಾರ ರಹಿತ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಹಿನ್ನೆಲೆ ರಿಲಯನ್ಸ್ ಇಂಡಸ್ಟ್ರೀಸ್ ಸಮೂಹ ಸ್ಪಷ್ಟೀಕರಣ ನೀಡಿದೆ.
2021ರ ದೇಶದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ ಫೋರ್ಬ್ಸ್
ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥರು ಮತ್ತು ಅವರ ಕುಟುಂಬದ ಸದಸ್ಯರು ಲಂಡನ್ ನಲ್ಲಾಗಲೀ ಅಥವಾ ವಿಶ್ವದ ಬೇರೆ ಯಾವ ದೇಶಕ್ಕೂ ಸ್ಥಳಾಂತರಗೊಳ್ಳುವ ಅಥವಾ ವಾಸಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಸ್ಟೋಕ್ ಪಾರ್ಕ್ ಎಸ್ಟೇಟ್ ಸ್ವಾಧೀನ:
ಇತ್ತೀಚೆಗೆ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ಸ್ವಾಧೀನಪಡಿಸಿಕೊಂಡಿರುವ ರಿಲಯನ್ಸ್ ಸಮೂಹದ ಕಂಪನಿ ಅಗಿರುವ ಆರ್ಐಐಎಚ್ಎಲ್, ತಾನು ಸ್ವಾಧೀನಪಡಿಸಿಕೊಳ್ಳುವಾಗ ಯೋಜನಾ ಮಾರ್ಗಸೂಚಿ ಮತ್ತು ಸ್ಥಳೀಯ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿ, ಪಾರಂಪರಿಕ ಆಸ್ತಿಯನ್ನು ಸ್ವಾಧೀನ ಮಾಡಿಕೊಂಡಿರುವುದಾಗಿ ಸ್ಪಷ್ಟಪಡಿಸಿದೆ. ಹೀಗೆ ಸ್ವಾಧೀನ ಪಡಿಸಿಕೊಂಡಿರುವ ಆಸ್ತಿಯನ್ನು ಪ್ರಮುಖ ಗಾಲ್ಫ್ ಮತ್ತು ಕ್ರೀಡಾ ರೆಸಾರ್ಟ್ ಆಗಿ ಉನ್ನತೀಕರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದೂ ತಿಳಿಸಿದೆ.
ಸ್ಟೋಕ್ ಪಾರ್ಕ್ ಎಸ್ಟೇಟ್ ಸ್ವಾಧೀನವು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ತ್ವರಿತವಾಗಿ ಬೆಳೆಯುತ್ತಿರುವ ಗ್ರಾಹಕ ವಲಯದ ವ್ಯಾಪಾರ ವರ್ಗಕ್ಕೆ ಸೇರಿಸುತ್ತದೆ. ಈ ಬೆಳವಣಿಗೆಯು ಜಾಗತಿಕ ಐಷಾರಾಮಿ ಆತಿಥ್ಯ ಉದ್ಯಮದಲ್ಲಿ ಭಾರತದ ಹೆಜ್ಜೆಗುರುತನ್ನು ವಿಸ್ತರಿಸುತ್ತದೆ ಎಂದೂ ತಿಳಿಸಿದೆ.