• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಕ್ಷಿಣ ಭಾರತದಲ್ಲಿ ಹೆಚ್ಚುತ್ತಿದೆ ಹಿಂದಿ, ಬೆಂಗಾಲಿ, ಒಡಿಯಾ ಭಾಷಿಕರ ಸಂಖ್ಯೆ

By Sachhidananda Acharya
|

ಬೆಂಗಳೂರು, ಜೂನ್ 28: ದಕ್ಷಿಣ ಭಾರತದತ್ತ ಉತ್ತರ ಭಾರತೀಯರ ವಲಸೆ ಹೆಚ್ಚಾಗಿದ್ದು ಹಿಂದಿ, ಬೆಂಗಾಲಿ, ಒಡಿಯಾ ಮಾತನಾಡುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೇ ವೇಳೆ ಒಂದು ಕಾಲದಲ್ಲಿ ಉತ್ತರ ಭಾರತದಲ್ಲಿ ಪ್ರಾಬಲ್ಯ ಮೆರೆದಿದ್ದ ತಮಿಳು ಮತ್ತು ಮಲಯಾಳಂ ಭಾಷಿಕರ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ.

ಹಿಂದೆ ದಕ್ಷಿಣದ ತಮಿಳುನಾಡು ಮತ್ತು ಕೇರಳದಿಂದ ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದರು. ಇದೀಗ ಇದಕ್ಕೆ ತದ್ವಿರುದ್ಧವಾಗಿ ಬೇರೆ ರಾಜ್ಯಗಳಿಂದ ದಕ್ಷಿಣದತ್ತ ವಲಸೆ ಬರುತ್ತಿರುವುದನ್ನು 2011ರ ಜನಗಣತಿಯ ಮಾತೃಭಾಷೆಯ ವರದಿ ಹೇಳುತ್ತಿದೆ.

ಹಿಂದೆ ಉತ್ತರದತ್ತ ವಲಸೆ ಹೋಗುತ್ತಿದ್ದ ಕೇರಳ ಮತ್ತು ತಮಿಳುನಾಡಿನ ಜನರು ಹೆಚ್ಚಾಗಿ ಕರ್ನಾಟಕವನ್ನು ತಮ್ಮ ಹೊಸ 'ವಲಸೆ ನೆಲೆ'ಯಾಗಿ ಬದಲಾಯಿಸಿಕೊಂಡಿದ್ದಾರೆ. ಮುಖ್ಯವಾಗಿ 2001 ರಿಂದ 2011ರ ವೇಳೆಗೆ ದೆಹಲಿಯಲ್ಲಿ ತಮಿಳು ಮತ್ತು ಕೇರಳಿಗರ ಸಂಖ್ಯೆ ಕಡಿಮೆಯಾಗಿದೆ.

Reverse migration; Hindi, Bengali, Odia speakers surge in South India

ಒಂದು ಕಾಲದಲ್ಲಿ ಮಾಯಾನಗರಿ ಮುಂಬೈ ಕಾರಣಕ್ಕೆ ಮಹಾರಾಷ್ಟ್ರಕ್ಕೆ ದಕ್ಷಿಣ ಭಾರತದ ಹೆಚ್ಚಿನ ಜನರು ವಲಸೆ ತೆರಳುತ್ತಿದ್ದರು. ಆದರೆ ಇಂದು ಮಹಾನಗರದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮಾತನಾಡುವವರ ಸಂಖ್ಯೆ ಕಡಿಮೆಯಾಗಿದೆ.

ನೋಯ್ಡಾದ ಕಾರಣಕ್ಕೆ ಉತ್ತರ ಪ್ರದೇಶದಲ್ಲಿ 2001ರಿಂದ 2011ರ ಅವಧಿಯಲ್ಲಿ ಮಲಯಾಳಿ ಭಾಷಿಕರ ಸಂಖ್ಯೆ ಹೆಚ್ಚಾಗಿದೆ. ಇನ್ನು ಗುರ್ಗಾಂವ್ ನ ಕಾರಣಕ್ಕೆ ಹರ್ಯಾಣದಲ್ಲಿ ತಮಿಳು ಮಾತನಾಡುವವರು ದೊಡ್ಡ ಸಂಖ್ಯೆಯಲ್ಲಿ ಬಂದು ನೆಲೆ ನಿಂತಿದ್ದಾರೆ. ಆದರೆ ದಕ್ಷಿಣ ಭಾರತದಲ್ಲಿ ಈ ಎರಡು ಭಾಷಿಕರು ವಲಸೆ ಹೋದಷ್ಟು ಉತ್ತರದತ್ತ ವಲಸೆ ಹೋಗಿಲ್ಲ.

ಈ ವರದಿಯಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಭಾರೀ ಹೆಚ್ಚಾಗಿದೆ. ಹೀಗೆ ಹೆಚ್ಚಾದ ರಾಜ್ಯಗಳಲ್ಲಿ ಕೇರಳ ಮತ್ತು ತಮಿಳುನಾಡು ಉಳಿದೆಲ್ಲಾ ರಾಜ್ಯಗಳಿಗಿಂತ ಮುಂದಿದೆ ಎಂಬುದು ಗಮನಾರ್ಹ.

ಆದರೆ ಒಟ್ಟಾರೆ ಅತೀ ಹೆಚ್ಚು ಹಿಂದಿ ಮಾತನಾಡುವವರು ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಇಂದಿಗೂ ಕಾಣಸಿಗುತ್ತಾರೆ ಎಂಬುದು ವರದಿಯ ಸಾರಾಂಶ.

ಕೇರಳದಲ್ಲಿ ಅಸ್ಸಾಮಿ ಮತ್ತು ಬೆಂಗಾಲಿ ಮಾತನಾಡುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ ಇವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಂದಿಗೂ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನೆಲೆ ನಿಂತಿದ್ದಾರೆ.

ಇನ್ನು ನೇಪಾಳದವರೂ ದಕ್ಷಿಣದತ್ತ ಭಾರೀ ಪ್ರಮಾಣದಲ್ಲಿ ವಲಸೆ ಬರುತ್ತಿದ್ದು, ಉಳಿದ ಭಾಷೆಗಳಿಗೆ ಹೋಲಿಸಿದರೆ ಇವರ ಸಂಖ್ಯೆ ಶೇಕಡಾ 24ರಷ್ಟು ವೇಗವಾಗಿ ಹೆಚ್ಚಾಗುತ್ತಿದೆ.

ದಕ್ಷಿಣದ ಅಭಿವೃದ್ಧಿ ಹೊಂದಿದ ರಾಜ್ಯಗಳು ಮತ್ತು ನಗರಗಳಲ್ಲಿ ಲಭ್ಯವಾಗುವ ಉದ್ಯೋಗವಕಾಶಗಳೇ ಈ ವಲಸೆಗೆ ಮೂಲ ಕಾರಣ ಎಂಬುದನ್ನು ಯಾರಾದರೂ ಸುಲಭವಾಗಿ ಊಹೆ ಮಾಡಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil and Malayalam speaking populations are falling across most states in north India. Same time Tamil Nadu and Kerala are seeing a huge jump in the number of Hindi, Bengali, Assamese and Odia speakers as per the 2011 census on mother tongues.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more