Revanth Reddy: ತೆಲಂಗಾಣ ಸಿಎಂ ರೇವಂತ್ ರೆಡ್ಡಿ? ನಿರ್ಧಾರ ಮಾಡಲಾಗಿದೆ ಎಂದು ರಾಹುಲ್ ಗಾಂಧಿ

ಹೈದರಾಬಾದ್‌ ಡಿಸೆಂಬರ್ 5: ತೆಲಂಗಾಣದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ನವೆಂಬರ್‌ 30ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಗೆದ್ದ 'ಕೈ' ಕುಣಿದಾಡಿದೆ. ಇದಕ್ಕಾಗಿ ಶ್ರಮಿಸಿದ ಕಾಂಗ್ರೆಸ್‌ ಮುಖ್ಯಸ್ಥ ಅನುಮುಲ ರೇವಂತ್‌ ರೆಡ್ಡಿ ಅವರನ್ನೇ ತೆಲಂಗಾಣದಲ್ಲಿ ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉನ್ನತ ಸ್ಥಾನಕ್ಕೆ ರೇವಂತ್ ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಈ ಹೇಳಿಕೆ ಮೂಲಕ ಅವರಿಗೆ ಸಿಎಂ ಸ್ಥಾನ ಪಕ್ಕಾ ಎನ್ನುವುದು ಖಚಿತವಾಗಿದೆ.

Revanth Reddy as Chief Minister of Telangana? Rahul Gandhi said

ರಾಹುಲ್ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿದಂತೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಿರ್ಧಾರ ಪ್ರಕಟಿಸುವ ಮುನ್ನ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಆದರೆ ಕಾಂಗ್ರೆಸ್‌ ಗೆಲುವಿಗೆ ಪ್ರಮುಖ ಕಾರಣರಾದ 54 ವರ್ಷದ ರೆಡ್ಡಿ ಅವರಿಗೆ ಸಿಎಂ ಪಟ್ಟ ಕೊಡುವುದಕ್ಕೆ ಪಕ್ಷದೊಳಗೆ ತೀವ್ರ ವಿರೋಧವಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರೆಡ್ಡಿ ಆಯ್ಕೆಯನ್ನು ವಿರೋಧಿಸಿದ ನಂತರ ನಿನ್ನೆ ಸಂಜೆ ನಡೆಯಬೇಕಿದ್ದ ಪ್ರಮಾಣ ವಚನ ಸಮಾರಂಭವನ್ನು ರಾಜ್ಯ ಕಾಂಗ್ರೆಸ್ ಹಿರಿಯರು ರದ್ದುಗೊಳಿಸಿದ್ದಾರೆ.

ಈ ವಿರೋಧಿಗಳಲ್ಲಿ ಮಾಜಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಎನ್ ಉತ್ತಮ್ ಕುಮಾರ್ ರೆಡ್ಡಿ, ಮಾಜಿ ಸಿಎಲ್ಪಿ ನಾಯಕ ಭಟ್ಟಿ ವಿಕ್ರಮಾರ್ಕ, ಮಾಜಿ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ದಾಮೋದರ್ ರಾಜನರಸಿಂಹ ಸೇರಿದ್ದಾರೆ. ಇವರೆಲ್ಲರು ರೇವಂತ್ ರೆಡ್ಡಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ರೆಡ್ಡಿ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳು ಮತ್ತು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನವನ್ನು ಈ ವೇಳೆ ಸೂಚಿಸಿದ್ದಾರೆ.

202 ರಲ್ಲಿ ತೆಲಂಗಾಣ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿದಾಗ ರೆಡ್ಡಿ ಅವರು ಹಲವಾರು ಸವಾಲನ್ನು ಎದುರಿಸಿದ್ದರು. ಮಾಜಿ ಟಿಡಿಪಿ ನಾಯಕ ಹುದ್ದೆಯನ್ನು ಪಡೆಯಲು ಕೋಟಿಗಟ್ಟಲೆ ಹಣವನ್ನು ಪಾವತಿಸಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಈ ಪ್ರಕರಣಗಳು ಇನ್ನೂ ಇತ್ಯಾರ್ಥವಾಗಿಲ್ಲ. ಹೀಗಾಗಿ ಅವರಿಗೆ ಈ ಉನ್ನತ ಹುದ್ದೆಯನ್ನು ನೀಡುವುದನ್ನು ಹಲವಾರು 'ಕೈ' ನಾಯಕರು ವಿರೋಧಿಸಿದ್ದಾರೆ.

2014 ರಲ್ಲಿ ರಚನೆಯಾದಾಗಿನಿಂದ ರಾಜ್ಯವನ್ನು ಆಳುತ್ತಿರುವ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಗೆ ಕಾಂಗ್ರೆಸ್ ಅಷ್ಟೇನೂ ಸವಾಲಾಗಿರಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ರೆಡ್ಡಿ ಕೆ ಚಂದ್ರಶೇಖರ ರಾವ್ ನೇತೃತ್ವದ ಪಕ್ಷದ ವಿರುದ್ಧ ಉತ್ಸಾಹಭರಿತ ಪ್ರಚಾರವನ್ನು ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಕ್ರಮೇಣ ಬಲಗೊಳ್ಳುತ್ತಿದ್ದಂತೆ ಅವರು ಬೀದಿ ಪ್ರತಿಭಟನೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು.

ಚುನಾವಣೆ ಸಮೀಪಿಸುತ್ತಿದ್ದಂತೆ ರೆಡ್ಡಿ ಅವರ ಅಭ್ಯರ್ಥಿಗಳ ಆಯ್ಕೆಯು ರಾಜ್ಯ ಕಾಂಗ್ರೆಸ್ನಲ್ಲಿ ಹೊಸ ಪ್ರತಿಭಟನೆಯ ಅಲೆಯನ್ನು ಹುಟ್ಟುಹಾಕಿತು. ಟಿಕೆಟ್‌ಗಳನ್ನು ಮಾರಾಟ ಮಾಡಿದ ಆರೋಪ ಅವರ ಮೇಲಿತ್ತು. ಅನುಭವಿ ರಾಜಕಾರಣಿ, ಶಾಸಕರ ಬೆಂಬಲವಿಲ್ಲದಿದ್ದರೆ ತನಗೆ ಉನ್ನತ ಹುದ್ದೆ ಸಿಗುವುದಿಲ್ಲ ಎಂದು ಚೆನ್ನಾಗಿ ತಿಳಿದಿದ್ದರೂ, ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನದೇ ನಿರ್ಧರ ತೆಗೆದುಕೊಂಡರು. ಅವರ ಬೆಂಬಲಿಗರ ಪ್ರಕಾರ, ಕಾಂಗ್ರೆಸ್‌ನ 64 ಶಾಸಕರಲ್ಲಿ 42 ಶಾಸಕರು ರೆಡ್ಡಿ ಅವರ ನಿಷ್ಠಾವಂತರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಇವರಿಗೆ ಮಣೆ ಹಾಕಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಕೂಡ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮನಸ್ತಾಪಗಳು ಚಿಗುರೊಡೆದಿವೆ. ಇದರಿಂದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದ್ದು, ಒಂದು ವೇಳೆ ರೆಡ್ಡಿಗೆ ಸಿಎಂ ಪಟ್ಟ ನೀಡಿದರೆ ಬಂಡಾಯದ ಕಿಚ್ಚು ಹೊತ್ತಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+