ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ 12 ಪ್ರಶ್ನೆಗಳು!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 17: ಮದಭೂಷಿ ಮದನ ಗೋಪಾಲ್ ಅಂದರೆ ತಕ್ಷಣ ಯಾರು ಅಂತ ಗೊತ್ತಾಗುತ್ತಾ? ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ ಅಂದ ತಕ್ಷಣ ಅವರ ನೆನಪು ಥಟ್ಟನೆ ಆಗುತ್ತದೆ. 500, 1000 ರುಪಾಯಿ ನೋಟಿನ ನಿಷೇಧದ ಕಾರಣಕ್ಕೆ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ ಮದನ್ ಗೋಪಾಲ್. ಅದನ್ನು ಇಲ್ಲಿ ಕೊಡಲಾಗಿದೆ.

'ಈ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಹಣಕ್ಕೆ ತೊಂದರೆ ಆಗುತ್ತಿರುವುದು ನಿಜ. ಆದರೆ ದೇಶದ ಬಹುತೇಕ ಭಾಗದ, ಎಲ್ಲ ರೀತಿಯ ಅಂದರೆ ಸ್ಥಳೀಯ ಸಂಸ್ಥೆಯಿಂದ ಲೋಕಸಭೆ ಚುನಾವಣೆ ವ್ಯವಸ್ಥೆ ನೋಡಿಬಂದಿರುವ ನನಗೆ ಈ ನಿರ್ಧಾರದ ಮಹತ್ವ ಗೊತ್ತಾಗುತ್ತದೆ. ಈ ನಿರ್ಧಾರವನ್ನು ಇನ್ನೂ ಹೆಚ್ಚು ವೈಜ್ಞಾನಿಕವಾಗಿ ಹಾಗೂ ಸಮರ್ಪಕವಾಗಿ ಜಾರಿಗೆ ತರಬೇಕಿತ್ತು ನಿಜ. ವಿಪಕ್ಷಗಳಾಗಿ ಅದರ ಬಗ್ಗೆ ಮಾತನಾಡಬೇಕು ಕೂಡ ನಿಜ.[ಬ್ಲಾಕ್ ಅಂಡ್ ವೈಟ್ ಆಟದಲ್ಲಿ ಸೋತು ಗೆಲ್ಲುವವರಾರು?]

'ಆದರೆ, ದೀರ್ಘಾವಧಿಯಲ್ಲಿ ದೇಶದ ಆರ್ಥಿಕತೆ ಮೇಲೆ ಆಗುವ ಸಕಾರಾತ್ಮಕ ಪರಿಣಾಮ ಹಾಗೂ ಈ ನಿರ್ಧಾರದ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿಗೆ ಅಗುವ ಅನುಕೂಲ ಕೂಡ ಅರ್ಥ ಮಾಡಿಕೊಳ್ಳಬೇಕು. ನಂಗೊತ್ತಿದೆ, ಭಾರತದಲ್ಲಿ ಕಪ್ಪು ಹಣದಿಂದ ಆಗುತ್ತಿರುವ ನಕಾರಾತ್ಮಕ ಪರಿಣಾಮಗಳು ವಿಪಕ್ಷಗಳಿಗೂ ಗೊತ್ತಿವೆ.

Retired IAS officer questions those who opposed note ban

'ಅದರೂ ಜನರಲ್ಲಿ ಭಯ ಬಿತ್ತುವ ಕೆಲಸ ಮಾಡುತ್ತಿವೆ. ಜನರನ್ನು ಹಾದಿ ತಪ್ಪಿಸಿ, ಆಡಳಿತಾರೂಢ ಪಕ್ಷವನ್ನು ದೂಷಿಸುವಂತೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ನನ್ನ ಕೆಲವು ಪ್ರಶ್ನೆಗಳು ಇಲ್ಲಿವೆ.'[ಚಿತ್ರಗಳಲ್ಲಿ : ಬ್ಯಾಂಕುಗಳಲ್ಲಿ ಬೆರಳುಗಳಿಗೆ ಅಂಟಿದ ಮಸಿ]

1. ಚುನಾವಣೆಗಳಲ್ಲಿ ಹಣದ ಶಕ್ತಿಯೇ ಮೇಲುಗೈಯಾಗಿ ಅದೇ ದೊಡ್ಡ ಕಾಟದಂತೆ, ಸವಾಲಿನಂತೆ ಆಗಿರುವುದು ರಾಜಕೀಯ ಪಕ್ಷಗಳಿಗೆ ಗೊತ್ತಿಲ್ಲವೆ?

2.ಪ್ರತಿ ಚುನಾವಣೆಯಲ್ಲೂ ತಮ್ಮ ನಿಷ್ಠೆ, ವಿಶ್ವಾಸಾರ್ಹತೆಯ ಕಾರಣಕ್ಕೆ ಯಾರಿಗಾದರೂ ಎಂಎಲ್ ಎ, ಎಂಪಿ ಚುನಾವಣೆಗೆ ಟಿಕೆಟ್ ಪಡೆಯೋದಿಕ್ಕೆ ಅಗ್ತಿದೆಯಾ? ಕಡೆಗೆ ಎಂಎಲ್ ಸಿ ಅಥವಾ ರಾಜ್ಯಸಭಾ ಸದಸ್ಯರಾಗಲು ಆಗ್ತಿದೆಯಾ? ಸಕಲ ಗುಣ
ಸಂಪನ್ನನಾದರೂ ಸ್ವತಂತ್ರವಾಗಿ ಚುನಾವಣೆಗೆ ನಿಂತು ಗೆಲ್ಲಲು ಸಾಧ್ಯವಿದೆಯಾ?

3.ಭಾರತದಲ್ಲಿ ನಡೆಯುವ ಸಣ್ಣ ಬ್ಯಾಂಕೊಂದರ ಚುನಾವಣೆ ಮೊದಲುಗೊಂಡು ಯಾವುದೇ ಚುನಾವಣೆ ಸ್ಪರ್ಧೆಗೆ ಹಣವೇ ಮುಖ್ಯ ಎಂಬುದು ಕೆಟ್ಟ ಉದಾಹರಣೆ ಅಲ್ಲವೆ?[ಹಣ ವಿತ್ ಡ್ರಾ ನಿಯಮಗಳಲ್ಲಿ ರೈತರಿಗೆ ಸಡಿಲಿಕೆ]

4. ಹಣಕ್ಕೆ ಪ್ರಾಮುಖ್ಯ ಸಿಕ್ಕು, ಪ್ರಜಾಪ್ರಭುತ್ವ ಸಂಸ್ಥೆಗಳು ಜನರ ಮಧ್ಯೆ ವಿಶ್ವಾಸಾರ್ಹತೆ ಹಾಗೂ ನಂಬಿಕೆಯನ್ನು ಕಳೆದುಕೊಳ್ಳುತ್ತಿವೆ ಅನ್ನಿಸೊಲ್ಲವೆ?

5. ಚುನಾವಣೆಗಳು ಪ್ರಹಸನದಂತೆ ಜನರು ನೋಡ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ಬಲಗೊಳ್ಳುವಂತೆ ಆಗುವುದಿಲ್ಲವೆ? ಆ ಮೂಲಕ ದೇಶದ ಸಂವಿಧಾನಕ್ಕೆ ಇರುವ ಮೌಲ್ಯವನ್ನು ಹಾಳು ಮಾಡಿದಂತೆ ಅಲ್ಲವೆ?

6. ಸಿನಿಮಾಗಳಲ್ಲಿ ರಾಜಕಾರಣಿಯನ್ನು ಭ್ರಷ್ಟನಂತೆ, ಕ್ರೂರಿಯಂತೆ ತೋರಿಸಿ ಅತನನ್ನು ಪೊಲೀಸೋ ಅಥವಾ ಯಾರಾದರೂ ಅಧಿಕಾರಿಯೋ ಹಿಡಿದು ಬಡಿಯುವ ದೃಶ್ಯಗಳನ್ನು ಪ್ರೇಕ್ಷಕರು ಯಾಕೆ ಅಷ್ಟು ಖುಷಿಯಿಂದ, ಚಪ್ಪಾಳೆ ಹೊಡೆಯುತ್ತಾ ನೋಡ್ತಾರೆ?

7. ರಾಜಕಾರಣಿಗಳ ಮೇಲಿನ ನಂಬಿಕೆ ಕೊರತೆ ಕಾರಣಕ್ಕೆ ಮತದಾರರು ಉತ್ಸಾಹ, ಆಸಕ್ತಿ ಕಳೆದುಕೊಳ್ಳುತ್ತಿದ್ದಾರಲ್ಲಾ ಅದು ದೇಶದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಾ?[ಹಣ ವಿನಿಮಯ ಮಿತಿ 2,000 ರೂ.ಗೆ ಇಳಿಕೆ]

8. ನಿಷ್ಠೆಯಿಂದ ಇದ್ದು, ಸಾರ್ವಜನಿಕ ಬದುಕಿನಲ್ಲಿ ಒಳ್ಳೆ ಹೆಸರು ಪಡೆದ ಹಿರಿಯ ರಾಜಕಾರಣಿಗಳು ಇಂದಿನ ಚುನಾವಣೆ ರಾಜಕೀಯದಿಂದ ಹೇಸಿಗೆ ಪಟ್ಟಿರುವುದು ನಿಜವಲ್ಲವಾ?

9. ಇಂದಿನ ಪರಿಸ್ಥಿತಿಯಿಂದ ಕಂಗೆಟ್ಟು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡಿರುವ ಜನರ ಭಾವನೆಗಳನ್ನು ದೇಶ ವಿರೋಧಿ ಶಕ್ತಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವುದು ವಾಸ್ತವ ಅಲ್ಲವಾ?

10. ಚುನಾವಣೆ ಸಂದರ್ಭದಲ್ಲಿ ಆಯೋಗವು ಎಷ್ಟೇ ಎಚ್ಚರವಾಗಿದ್ದರೂ (ಎಲ್ಲ ರಾಜಕೀಯ ಪಕ್ಷಗಳಿಗೂ ಸೇರಿದ ಮೊತ್ತ) ಸಿಕ್ಕಿಬೀಳುವ ಹಣದಲ್ಲಿ 500, 1000 ರುಪಾಯಿ ನೋಟುಗಳ ಪ್ರಮಾಣವೇ ಹೆಚ್ಚು ಎಂಬುದರಲ್ಲಿ ಸುಳ್ಳು ಇದೆಯಾ?

11. ಎಲ್ಲ ಅಧ್ಯಯನ ಸಮೀಕ್ಷೆ ಹೊರಹಾಕಿರುವ ಮಾಹಿತಿಯೇ ಹೇಳಬೇಕು ಅಂದರೆ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಘೋಷಿಸುವ ಆಸ್ತಿಗಿಂತ ಆ ನಂತರ ಊಹೆಗೆ ಕೂಡ ನಿಲುಕದಷ್ಟು ಅದೆಷ್ಟೋ ಪಟ್ಟು ಆಸ್ತಿ ಹೆಚ್ಚಳ ಆಗುತ್ತೆ. ಹೀಗೇ ಜನಸಾಮಾನ್ಯರ ಆಸ್ತಿ ಕೂಡ ಯಾಕೆ ಹೆಚ್ಚಳ ಅಗೋದಿಲ್ಲ?[ಮೋದಿಯನ್ನು ಹಿಟ್ಲರ್, ಗಡ್ಡಾಫಿಗೆ ಹೋಲಿಸಿದ ವಿಪಕ್ಷ]

12. ರಾಜಕೀಯ ಪಕ್ಷಗಳು ತಮಗೆ ಬರುವ ಕೊಡುಗೆಗಳನ್ನು ವರ್ಷಕ್ಕೊಮೆ ಯಾಕೆ ಘೋಷಿಸಬಾರದು. ಎಷ್ಟು ನಗದು ಬಂತು, ಚೆಕ್, ಡಿಮ್ಯಾಂಡ್ ಡ್ರಾಫ್ಟ್, ಕೊಟ್ಟ ವ್ಯಕ್ತಿ, ಕಂಪನಿ, ಟ್ರಸ್ಟ್ ಹೆಸರನ್ನು ಯಾಕೆ ತಿಳಿಸೋದಿಲ್ಲ? ಈ ವಿಷಯವನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಯಾಕೆ ತರೋದಿಲ್ಲ?

ಇವೆಲ್ಲ ಮದನಗೋಪಾಲ್ ಅವರ ಪ್ರಶ್ನೆಗಳು. ಜತೆಗೆ ಇನ್ನೊಂದು ವಾಕ್ಯವೂ ಸೇರಿಸಿದ್ದಾರೆ: ನನಗೆ ಖಾತ್ರಿ ಇದೆ. ಈ ಎಲ್ಲ ಪ್ರಶ್ನೆಗಳಿಗೂ ರಾಜಕೀಯ ಪಕ್ಷಗಳು ಉತ್ತರಿಸುತ್ತವೆ. ಅದರೆ ಶುದ್ಧ ಹಸ್ತರಾಗಿ, ಸುಮ್ಮನೆ ಎದೆ ಬಡಿದುಕೊಳ್ಳದೆ, ಜನಸಾಮಾನ್ಯರ ಬಗ್ಗೆ ನಿಜವಾದ ಕಾಳಜಿ ಇಟ್ಟಕೊಂಡು ದೇಶದ ಜನರ ಮುಂದೆ ಬರುವ ಧೈರ್ಯ ರಾಜಕೀಯ ಪಕ್ಷಗಳಿಗೆ ಇದೆಯಾ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Madan Gopal, Retired IAS officer (Karnataka) questions those who opposed note ban decision of BJP led central government.
Please Wait while comments are loading...