ಹೊಸ 200 ರೂ. ನೋಟು ನಾಳೆಯಿಂದ ಚಾಲ್ತಿಗೆ
ನವದೆಹಲಿ, ಆಗಸ್ಟ್ 24: ಹೊಸ 200 ರೂಪಾಯಿ ಮುಖಬೆಲೆಯ ನೋಟುಗಳು ನಾಳೆಯಿಂದ ಚಾಲ್ತಿಗೆ ಬರಲಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನೋಟು ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದೆ.
ಹೊಸ ನೋಟು ಮಹಾತ್ಮ ಗಾಂಧಿ ಸರಣಿಯಲ್ಲಿ ಹೊರ ಬರಲಿವೆ. ಇದರಲ್ಲಿ ಗವರ್ನರ್ ಡಾ. ಉರ್ಜಿತ್ ಪಟೇಲ್ ಸಹಿ ಇರಲಿದೆ.

ನೋಟಿನ ಹಿಂಬದಿಯಲ್ಲಿಐತಿಹಾಸಿಕ ಸಾಂಚಿ ಸ್ಥೂಪ ಇರಲಿದೆ. ಕಡು ಹಳದಿ ಬಣ್ಣದಲ್ಲಿ ಈ ನೋಟು ಹೊರ ಬರಲಿದೆ.
ನೋಟಿನ ಗಾತ್ರ 66ಮಿಮಿ ಅಗಲ ಮತ್ತು 146 ಮಿಮಿ ಅಗಲವಿರಲಿದೆ. ಆರ್.ಬಿ.ಐ ಕಚೇರಿಗಳಲ್ಲಿ, ಕೆಲವು ಬ್ಯಾಂಕ್ ನ ಶಾಖೆಗಳಲ್ಲಿ ನಾಳೆಯಿಂದ ಈ ನೋಟು ಸಿಗಲಿದೆ.












Click it and Unblock the Notifications