• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದ್ರಯಾನ 2: ಜುಲೈ 21-22 ರಂದು ಬಾಹುಬಲಿಯ ಮರುಉಡಾವಣೆ?

|

ಬೆಂಗಳೂರು, ಜುಲೈ 17: ತಾಂತ್ರಿಕ ದೋಷದಿಂದಾಗಿ ನಭಕ್ಕೆ ಚಿಮ್ಮದ 'ಬಾಹುಬಲಿ'ಯನ್ನು ಜುಲೈ 21 ಅಥವಾ 22 ರಂದು ಇಸ್ರೋ ಮರುಉಡಾವಣೆ ಮಾಡಲಿದೆಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದುವರೆಗೂ ಯಾವ ದೇಶವೂ ಹೋಗಿರದ ಚಂದ್ರನ ಮೇಲ್ಮೈ ಗೆ ತೆರಳಿ ಅಧ್ಯಯನ ನಡೆಸುವ ಚಂದ್ರಯಾನ-2 ಜುಲೈ 15 ರಂದು ಆಗಸಕ್ಕೆ ಚಿಮ್ಮಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಾದ ತಾಂತ್ರಿಕ ಅಡಚಣೆಯಿಂದ ಉಡಾವಣೆಯನ್ನು ಇಸ್ರೋ ರದ್ದುಗೊಳಿಸಿತ್ತು.

ಚಂದ್ರಯಾನ 2 : 'ಬಾಹುಬಲಿ' ಯಾರನ್ನು ಹೊತ್ತೊಯ್ಯಬೇಕು?

2009 ರಲ್ಲಿ ನಡೆದಿದ್ದ ಚಂದ್ರಯಾನ 1 ರ ಯಶಸ್ಸಿನ ನಂತರ ಸ್ಪೂರ್ತಿ ಪಡೆದ ಇಸ್ರೋ ಚಂದ್ರಯಾನ 2 ರ ಯೋಜನೆ ರೂಪಿಸಿತ್ತು. ಕೊನೆಯ ಕ್ಷಣದಲ್ಲಿ ಅದರ ಉಡಾವಣೆ ರದ್ದಾದ ಹಿನ್ನೆಲೆಯಲ್ಲಿ ಇದೇ ಜುಲೈ 21 ರ ಸಂಜೆ ಅಥವಾ 22 ರ ಬೆಳಗ್ಗಿನ ಜಾವ ಬಾಹುಬಲಿ ಉಡಾವಣಾ ವಾಹನ(ಜಿಎಸ್ ಎಲ್ ವಿ) ಆಗಸಕ್ಕೆ ಹಾರಲಿದೆ.

Reports say, ISRO will re launch Chandrayaan-2 on July 21-22

ಆದರೆ ಈ ಕುರಿತು ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

English summary
Some reports say, Indian Space Research Organisation(ISRO) will re launch it's most awaited Chanrdrayaan-2 0n July 21 or 22. The launch of India's second mission to moon stopped on July 15 due to technical issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X