ಬಾಡಿಗೆ ಮನೆಯಲ್ಲಿ ಓನರ್ ಕಿರಿಕಿರಿ ಇದೆಯೇ? ಹಾಗಾದರೆ ನಿಮ್ಮ ಈ 10 ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ
ನವದೆಹಲಿ , ಮೇ.11: ಹಳ್ಳಿಗಳ ದೇಶದಲ್ಲಿ ಹೆಚ್ಚಿನ ಜನರು ತಮ್ಮ ಕೆಲಸದ ಕಾರಣಕ್ಕಾಗಿ ನಗರ ಪ್ರದೇಶಗಳಲ್ಲಿ ಬಂದು ವಾಸಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಬಾಡಿಗೆ ಮನೆಗಳ ವಾಸ್ತವ್ಯ ಅನಿವಾರ್ಯ. ಆದರೆ, ಭಾರತೀಯ ಮಹಾನಗರಗಳಲ್ಲಿ ಮನೆ ಬಾಡಿಗೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಇದರ ಜೊತೆಗೆ ಬಾಡಿಗೆದಾರರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುವುದೇ ಇಲ್ಲ.
ಹೀಗಾಗಿ ಮನೆಯನ್ನು ಬಾಡಿಗೆಗೆ ಪಡೆಯಲು ಹುಡುಕುತ್ತಿರುವ ವ್ಯಕ್ತಿಯು ಬಾಡಿಗೆ ನಿಯಂತ್ರಣ ಕಾಯಿದೆಯಡಿಯಲ್ಲಿ ಇರುವ ಮೂಲಭೂತ ಹಕ್ಕುಗಳ ಬಗ್ಗೆ ತಿಳಿದಿರಬೇಕು. ಈ ಮೂಲಭೂತ ಹಕ್ಕುಗಳು ಅನ್ಯಾಯದಿಂದ ಮನೆಯಿಂದ ಹೊರಹಾಕುವಿಕೆಯ ವಿರುದ್ಧದ ಹಕ್ಕು, ನ್ಯಾಯಯುತ ಬಾಡಿಗೆಯನ್ನು ಪಾವತಿಸುವ ಹಕ್ಕು ಮತ್ತು ಇತರ ಅಗತ್ಯ ಸೇವೆಗಳನ್ನು ಪಡೆಯುವ ಹಕ್ಕನ್ನು ಒಳಗೊಂಡಿವೆ.

ಕಾನೂನಿನಡಿಯಲ್ಲಿ ತಮಗಿರುವ ಈ ಹಕ್ಕುಗಳ ಬಗ್ಗೆ ತಿಳಿಯದೆ, ಬಾಡಿಗೆದಾರರು ಶೋಷಣೆಗೆ ಬಲಿಯಾಗಬಹುದು. ಬಾಡಿಗೆ ನಿಯಂತ್ರಣ ಕಾಯಿದೆಯಡಿ ಒಳಗೊಂಡಿರುವ ಬಾಡಿಗೆದಾರನಿಗಿರುವ ವಿವಿಧ ಹಕ್ಕುಗಳನ್ನು ಕೆಳಗೆ ನೋಡುವ.
1. ಬಾಡಿಗೆದಾರನ ಮನೆ ವಾಸಯೋಗ್ಯವಾಗಿರಬೇಕು
2. ತಮ್ಮ ಮನೆ ಮಾಲೀಕರ ಗುರುತು ಪರಿಚಯ ಚೆನ್ನಾಗಿರಬೇಕು
3. ಯಾವುದೇ ತೊಂದರೆಯಿಲ್ಲದೆ ಮನೆಯಲ್ಲಿ ವಾಸಿಸುವ ಹಕ್ಕು
4. ತಾವು ಬಾಡಿಗೆಗೆ ಇರುವ ಮನೆಯ ಕಾರ್ಯಕ್ಷಮತೆ ಪ್ರಮಾಣಪತ್ರವನ್ನು ( Energy Performance Certificate) ನೋಡುವ ಹಕ್ಕು.
5. ಬಾಡಿಗೆಯಲ್ಲಿ ಅನ್ಯಾಯವಾಗಿ ಹೆಚ್ಚಳ ಮಾಡಿದರೇ ಅದರ ವಿರುದ್ಧ ಪ್ರತಿಭಟಿಸುವ ಹಕ್ಕು

6. ಮನೆಯಿಂದ ಬಲವಂತವಾಗಿ ಹೊರಹಾಕುವಿಕೆಯನ್ನು ನಿರಾಕರಿಸುವ/ಪ್ರತಿಭಟಿಸುವ ಹಕ್ಕು
7. ಮನೆ ಬಾಡಿಗೆ ಅವಧಿಯ ಕೊನೆಯಲ್ಲಿ ಭದ್ರತಾ ಠೇವಣಿ ಮರಳಿ ಪಡೆಯುವ ಹಕ್ಕು
8. ಮನೆ ಮಾಲೀಕನು ಬಾಡಿಗೆದಾರರಿಗೆ ಕರಾರು ಮುಕ್ತಾಯವಾಗಬೇಕು ಎಂದು ಹೇಳಿದರೇ, ನೋಟಿಸ್ ಅವಧಿ ನಿಡಬೇಕು ಎಂದು ಕೇಳುವ ಹಕ್ಕು
9. ಬಾಡಿಗೆ ನಿಯಂತ್ರಣ ಕಾಯಿದೆಯಡಿಯಲ್ಲಿ ಬಾಡಿಗೆದಾರರ ವಾರಸುದಾರರು ಕೂಡ ಎಲ್ಲಾ ಹಕ್ಕುಗಳಿಗೆ ಅರ್ಹರಾಗಿರುತ್ತಾರೆ.
10. ಬಾಡಿಗೆದಾರರು ಯಾವುದೇ ವಿವಾದಗಳನ್ನು ಬಾಡಿಗೆ ನಿಯಂತ್ರಣ ನ್ಯಾಯಾಲಯಕ್ಕೆ ಹೋಗುವ ಹಕ್ಕು
ಬಾಡಿಗೆ ನಿಯಂತ್ರಣ ಕಾನೂನು ಬಾಡಿಗೆದಾರರು ಮತ್ತು ಮನೆ ಮಾಲೀಕರ ಹಕ್ಕುಗಳನ್ನು ರಕ್ಷಿಸುತ್ತದೆ. ಬಾಡಿಗೆದಾರರನ್ನು ಬಲವಂತವಾಗಿ ಹೊರಹಾಕಲು ಭೂಮಾಲೀಕರ ಅಧಿಕಾರವನ್ನು ನಿರ್ಬಂಧಿಸುತ್ತದೆ ಮತ್ತು ಹಿಡುವಳಿದಾರರಿಗೆ ಹಿಡುವಳಿ ಭದ್ರತೆಯನ್ನು ಖಾತ್ರಿಗೊಳಿಸುತ್ತದೆ.
ಈ ಕಾಯಿದೆಯ ಪ್ರಕಾರ ಬಾಡಿಗೆ ವಸತಿಗೆ ತೆರಳುವ ಮೊದಲು ಬಾಡಿಗೆದಾರರು ಮತ್ತು ಮನೆ ಮಾಲೀಕರು ನಡುವೆ ಲಿಖಿತ ಒಪ್ಪಂದಕ್ಕೆ ಸಹಿ ಹಾಕಬೇಕು. ಬಾಡಿಗೆ ಒಪ್ಪಂದವು ಮಾನ್ಯವಾಗಿದ್ದರೆ, ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕಾನೂನಿನಿಂದ ರಕ್ಷಿಸಬಹುದು ಮತ್ತು ಜಾರಿಗೊಳಿಸಬಹುದು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications