ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ದಿನಗಳಲ್ಲಿ ವಿವಾಹ ನೋಂದಾಯಿಸಿ, ಇಲ್ಲವೇ ದಂಡ ಕಟ್ಟಿ!

By Mahesh
|
Google Oneindia Kannada News

ನವದೆಹಲಿ, ಜುಲೈ 06: ಜನನ ಮತ್ತು ಮರಣದ ನೋಂದಣಿಯಂತೆ, ವಿವಾಹ ನೋಂದಣಿ ಮಾಡಿಸುವುದು ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕಿದೆ. ಭಾರತದಲ್ಲಿ ಹಿಂದೂ ಮದುವೆ ಕಾಯಿದೆ 1955 ಅಥವಾ ವಿಶೇಷ ಮದುವೆ ಕಾಯಿದೆ 1954ರ ಅನ್ವಯ ಮದುವೆಯಾಗಿರುವುದನ್ನು ನೋಂದಾಯಿಸಬಹುದು.

<strong>ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ? ಏಕೆ?</strong>ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ? ಏಕೆ?

2006ರಲ್ಲಿ ಮಹಿಳಾ ಸುರಕ್ಷಣೆಯನ್ನು ಮನಗಂಡ ಸುಪ್ರೀಂಕೋರ್ಟ್ ಮದುವೆ ನೊಂದಣಿಯನ್ನು ಸುಪ್ರೀಂಕೋರ್ಟ್ (Seema vs Ashwani Kumar case) ಕಡ್ಡಾಯಗೊಳಿಸಿದೆ. ಈಗ ಆನ್ ಲೈನ್ ಮೂಲಕ ಕೂಡಾ ಮದುವೆ ನೋಂದಾವಣೆ ಸಾಧ್ಯ. ಆದರೆ, ವಿವಾಹ ನೋಂದಾವಣೆ ಅಗತ್ಯವಿದ್ದವರು ಮಾತ್ರ ಮಾಡಿಸುವ ಪರಿಪಾಠ ಬೆಳೆದು ಬಂದಿದೆ.

ಹವಳ ದೋಷವೆಂಬ ಸಮೂಹ ಸನ್ನಿಯನ್ನು ಕುಟ್ಟಿ ಪುಡಿಮಾಡಿ!ಹವಳ ದೋಷವೆಂಬ ಸಮೂಹ ಸನ್ನಿಯನ್ನು ಕುಟ್ಟಿ ಪುಡಿಮಾಡಿ!

ಈ ವ್ಯವಸ್ಥೆ ಬದಲಾಯಿಸಲು ಕೇಂದ್ರ ಕಾನೂನು ಆಯೋಗ ಮುಂದಾಗಿದ್ದು, ಇನ್ಮುಂದೆ, ನವವಿವಾಹಿತರು ಮದುವೆಯಾದ 30ದಿನಗಳೊಳಗೆ ವಿವಾಹ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲವೇ ದಂಡ ಕಟ್ಟ ಬೇಕಾಗುತ್ತದೆ.

ಭಾಗ್ಯಲಕ್ಷ್ಮೀ ಯೋಜನೆಗೆ ವಿವಾಹ ನೋಂದಣಿ ಕಡ್ಡಾಯಭಾಗ್ಯಲಕ್ಷ್ಮೀ ಯೋಜನೆಗೆ ವಿವಾಹ ನೋಂದಣಿ ಕಡ್ಡಾಯ

ಸಾಂಪ್ರದಾಯಿಕ ಮದುವೆಗಳ ದೃಢೀಕರಣಕ್ಕಿಂತ ಸರ್ಕಾರದಿಂದ ನೀಡಲಾಗುವ ಪ್ರಮಾಣ ಪತ್ರಕ್ಕೆ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಮಾನ್ಯತೆ ಇದೆ. ಹೀಗಾಗಿ ವಿದೇಶ ಪ್ರವಾಸಕ್ಕೆ ಹೊರಡಲು ಬಯಸುವ ಸತಿ ಪತಿಗೆ ಮದುವೆ ಪ್ರಮಾಣ ಪತ್ರ ಅಗತ್ಯ. ಜತೆಗೆ ಅಕ್ರಮ ವಿವಾಹ, ವಂಚನೆ ಪ್ರಕರಣಗಳನ್ನು ತಡೆಗಟ್ಟಲು ನೋಂದಣಿ ಅಗತ್ಯ. ಜತೆಗೆ ವಿವಾಹ ನೋಂದಣಿ ಹಾಗೂ ಆಧಾರ್ ಜೋಡಣೆ ಮಾಡುವುದು ಇನ್ನೂ ಒಳ್ಳೆಯದು ಎಂದು ಕಾನೂನು ಆಯೋಗ ಶಿಫಾರಸು ಮಾಡಿದೆ.

English summary
The Law Commission suggested to the government to make registration of marriages compulsory. The report submitted on July 4 said that registration of marriages be made compulsory failing which a fine for non-compliance be levied in 30 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X