ರೀಲ್ಸ್ ಹುಚ್ಚಾಟ: ಯುವತಿಯ ಕಪಾಳಕ್ಕೆ ಬಾರಿಸಿದ ತಾಯಿ, ಇಲ್ಲಿದೆ ವೈರಲ್ ವಿಡಿಯೋ!
ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವರು ವೈರಲ್ ಆಗಬೇಕು.. ಹೆಚ್ಚು ವೀವ್ಸ್ ಬರಬೇಕು ಅಂತ ಮನಸ್ಸಿಗೆ ಬಂದಂತೆ ಏನೇನೋ ಮಾಡಿ ವಿಡಿಯೋಗಳನ್ನು ಅಪ್ಲೋಡ್ ಮಾಡುವುದು ಇದೆ. ಸೋಷಿಯಲ್ ಮೀಡಿಯಾ ಈಗ ಮೊದಲಿನಂತಿಲ್ಲ. ಅದರಲ್ಲೂ ರೀಲ್ಸ್ ಜಮಾನ ಬಂದ ಮೇಲೆ ರೀಲ್ಸ್‌ಗಾಗಿ ಜನ ತರ್ಲೆ ವಿಡಿಯೋಗಳನ್ನು ಮಾಡುವುದು ಜಾಸ್ತಿ ಆಗಿದೆ. ಅದೇ ರೀತಿ ಯುವತಿಯೊಬ್ಬಳ ಹುಚ್ಚಾಟದ ವಿಡಿಯೋ ಮಾಡಲು ಹೋಗಿದ್ದು. ಅವರ ತಾಯಿ ಕಪಾಳಕ್ಕೆ ಬಾರಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ತಾಯಿಯ ನಿರ್ಧಾರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಒಳ್ಳೆಯದು ಈ ರೀತಿ ಮಾಡಿದರೆ ಈ ಯುವತಿಯರು ಬುದ್ಧಿ ಕಲಿಯುತ್ತಾರೆ. ಯಾವುದೋ ಅನಾಹುತ ಸಂಭವಿಸುವುದಕ್ಕೆ ಮುಂಚೆ ಈ ರೀತಿ ಮಾಡಿದ್ದು ಒಳ್ಳೆಯದು ಅಂತಲೇ ಹೇಳುತ್ತಿದ್ದಾರೆ. ಇಷ್ಟಕ್ಕೂ ಆ ತಾಯಿ - ಯುವತಿಯ ಕಪಾಳಕ್ಕೆ ಬಾರಿಸಿದ್ದು ಯಾಕೆ ಏನಿದು ವೈರಲ್ ಅವಾಂತರ ಅಂತ ನೋಡೋಣ.

mr_rahul_razz ಎನ್ನುವ ವ್ಯಕ್ತಿಯು Instagram ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಆಗುತ್ತಿದೆ. ಟ್ರೈನಿನಲ್ಲಿ ಹೋಗುವಾಗ ಯುವತಿ ರೀಲ್ಸ್ ಹುಚ್ಚಾಟವನ್ನು ಪ್ರದರ್ಶಿಸಿದ್ದಾಳೆ. ಟ್ರೈನ್‌ನ ಬಾಗಿಲು ಬಳಿ ನಿಂತು ಯಾವುದೋ ಹಾಡಿಗೆ ರೀಲ್ಸ್ ಮಾಡುವುದಕ್ಕೆ ಶುರು ಮಾಡಿದ್ದಾಳೆ. ಇನ್ನೇನು ಈ ರೀತಿ ರೀಲ್ಸ್ ಮಾಡುತ್ತಲ್ಲೇ ಟ್ರೈನ್‌ನಿಂದ ಬಿದ್ದು ಹೋಗುತ್ತಾಳೆ ಎನ್ನುವ ಹಂತದಲ್ಲಿ 21 ವರ್ಷದ ವಯಸ್ಸಿನ ಯುವತಿಯ ತಾಯಿ ಓಡಿಬಂದು. ಯುವತಿಯ ಕಪಾಳಕ್ಕೆ ಬಾರಿಸುವುದು ವಿಡಿಯೋದಲ್ಲಿದೆ. ಇದನ್ನು ನೋಡಿರುವ ನೆಟ್ಟಿಗರು ನಿಜವಾದ ವೈರಲ್ ವಿಡಿಯೋ ಅಂದರೆ ಇದು. ಈಗಿನ ಕಾಲದಲ್ಲಿ ರೀಲ್ಸ್ ಹುಚ್ಚಿಗೆ ಬಿದ್ದವರಿಗೆ ಇದೇ ರೀತಿ ಬುದ್ಧಿ ಕಲಿಸಬೇಕು ಅಂತಿದ್ದಾರೆ.
ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು. ಯುವತಿ ಮಾಡಿರುವ ವಿಡಿಯೋಗಿಂತಲೂ ಅವರ ತಾಯಿ ಬಾರಿಸಿ ಬುದ್ಧಿ ಹೇಳಿರುವುದೇ ಸರಿಯಾಗಿದೆ. ಈ ರೀತಿ ಹುಚ್ಚಾಟ ಮಾಡುವವರಿಗೆ ಇದೇ ತರ ಬುದ್ಧಿ ಕಲಿಸಬೇಕು ಅಂತ ಅಭಿಪ್ರಾಯಪಟ್ಟಿದ್ದಾರೆ. ರೀಲ್ಸ್ ಮಾಡುತ್ತಿದ್ದ ಯುವತಿಯನ್ನು ಹಿಂದಕ್ಕೆ ಎಳೆದುಕೊಂಡು ಕೆನ್ನೆಗೆ, ತಲೆಗೆ ತಾಯಿ ಬಾರಿಸಿದ್ದು. ಈ ರೀತಿಯ ಹುಚ್ಚಾಟ ಮಾಡುತ್ತೀಯಾ ಅಂತ ಕೇಳಿದ್ದಾರೆ.
ಒಂದು ಮಿಲಿಯನ್ ರೀಚ್: ಆ ಯುವತಿ ರೀಲ್ಸ್ ಮಾಡಿದ್ದರೆ ಇಷ್ಟೊಂದು ವೀವ್ಸ್ ಸಿಗುತ್ತಿತ್ತೋ ಇಲ್ಲವೋ. ಆ ತಾಯಿ ಸರಿಯಾಗಿ ಬಾರಿಸಿರುವುದನ್ನು ಹಲವು ಪೋಷಕರು ಸಹ ಮೆಚ್ಚಿಕೊಂಡಿದ್ದಾರೆ. ಇವರಿಗೆಲ್ಲ ಇದೇ ಸರಿಯಾದ ಬುದ್ಧಿ ಅಂತ ಹೇಳಿದ್ದಾರೆ. ಇನ್ನು ಈ ವಿಡಿಯೋ ಬರೋಬ್ಬರಿ 1 ಮಿಲಿಯನ್ ರೀಚ್ ಕಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗಲೂ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು. ಸಾವಿರಾರು ಜನ ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಅಲ್ಲದೇ 25 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.












Click it and Unblock the Notifications