ಕೊರೊನಾ ರೆಡ್, ಆರೇಂಜ್ ಗ್ರೀನ್ ವಲಯ: ಸಂಪೂರ್ಣ ಪಟ್ಟಿ
ನವದೆಹಲಿ, ಮೇ 1: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಿರುವ ಎರಡನೇ ಲಾಕ್ಡೌನ್ ಅವಧಿ ಮುಗಿಯುವ ಕಾಲ ಬಂದಿದೆ. ಈ ನಡುವೆ ಶುಕ್ರವಾರದಂದು ಕೊರೊನಾ ಪೀಡಿತ ಮೂರು ವಲಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೆಂಪು, ಕಿತ್ತಳೆ ಹಾಗೂ ಹಸಿರು ವಲಯದ ಸಂಪೂರ್ಣ ಪಟ್ಟಿ ಇಲ್ಲಿದೆ.
ಒಟ್ಟು 19 ರೆಡ್ ಜೋನ್ ಹೊಂದಿರುವ ಉತ್ತರಪ್ರದೇಶ ರಾಜ್ಯವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ 14 ಕೆಂಪು ವಲಯದೊಂದಿಗೆ ಎರಡನೆ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 12 ಹಾಗೂ ದೆಹಲಿಯಲ್ಲಿ 11 ರೆಡ್ ಜೋನ್ ಗಳಿವೆ. ಪಶ್ಚಿಮ ಬಂಗಾಳ 10 ಕೆಂಪು ವಲಯದೊಂದಿಗೆ ಟಾಪ್ 5ಯೊಳಗೆ ಕಾಣಿಸಿಕೊಂಡಿದೆ.
ದೇಶದಲ್ಲಿ 130 ಜಿಲ್ಲೆ ರೆಡ್ ಜೋನ್: ದೆಹಲಿ, ಮುಂಬೈ, ಬೆಂಗಳೂರು ಡೇಂಜರ್
ದೇಶದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರನ್ನು ಹೊಂದಿರುವ ಅಥವಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಜಿಲ್ಲೆಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕೆಂಪು ವಲಯಗಳು ಎಂದು ಗುರುತಿಸಲಾಗುತ್ತಿದೆ. ಕೊರೊನಾ ಶಂಕಿತರು ಹೆಚ್ಚಾಗಿರುವ 1 ರಿಂದ 5 ಪಾಸಿಟಿವ್ ಪ್ರಕರಣ ಹೊಂದಿರುವ ಪ್ರದೇಶಗಳನ್ನು ಕಿತ್ತಳೆ ವಲಯ ಹಾಗೂ ಸೋಂಕಿತರೇ ಇಲ್ಲದ ಪ್ರದೇಶವನ್ನು ಹಸಿರು ವಲಯ ಎಂದು ಗುರುತಿಸಲಾಗಿದೆ.
ಕೇಂದ್ರ ಸರ್ಕಾರವು ದೇಶದಲ್ಲಿ 130 ಕೆಂಪು ವಲಯ, 284 ಕಿತ್ತಳೆ ವಲಯ ಹಾಗೂ 319 ಹಸಿರು ವಲಯಗಳೆಂದು ಪಟ್ಟಿ ಮಾಡಿದೆ. ಹಸಿರು ವಲಯಗಳ ಪೈಕಿ ಅಸ್ಸಾಂ ಅಗ್ರಸ್ಥಾನದಲ್ಲಿದ್ದು, 30 ಗ್ರೀನ್ ಜೋನ್ ಹೊಂದಿದೆ. ಅರುಣಾಚಲ ಪ್ರದೇಶ ಹಾಗೂ ಛತ್ತೀಸ್ ಗಢ ತಲಾ 25 ಹಸಿರುವಲಯ ಹೊಂದಿವೆ.