ಮೋದಿ ಭಾಷಣ, ಕೆಂಪುಕೋಟೆಯಲ್ಲಿ ರಾಹುಲ್ ಧ್ವಜಾರೋಹಣ

ಲಕ್ನೋ, ಡಿ 4: ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಹೆಸರಾದ ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಟೀಕಿಸಿದ್ದಾರೆ.

ನರೇಂದ್ರ ಮೋದಿ ಭಾಷಣ ಮಾಡುತ್ತಾ ಸುಸ್ತಾಗ್ತಾರೆ, ಕೆಂಪುಕೋಟೆ ಪ್ರತಿಕೃತಿಯ ಮುಂದೆ ಭಾಷಣ ಮಾಡುತ್ತಾರೆ. ಅವರ ಭಾಷಣಕ್ಕಿರುವ ಬೆಲೆ ಅಷ್ಟೇ. ಆದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಸ್ವಾತಂತ್ರ್ಯ ದಿನದಂದು ನವದೆಹಲಿಯ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತಾರೆಂದು ಬೇಣಿ ಪ್ರಸಾದ್ ಭವಿಷ್ಯ ನುಡಿದಿದ್ದಾರೆ.

ದೇಶದಲ್ಲಿ ಮೋದಿ ಹವಾ ಇದೆ ಎನ್ನುವ ಮಾತು ಸುಳ್ಳು. ಇದು ಮಾಧ್ಯಮಗಳ ಮತ್ತು ಸಾಮಾಜಿಕ ತಾಣಗಳು ಹುಟ್ಟಿಸಿದ ಹೈಪ್. ಮೋದಿ ಭಾಷಣಕ್ಕೆ ಬರುವ ಜನ ಬಿಜೆಪಿಗೆ ಮತ ಹಾಕುವುದಿಲ್ಲ. ನರೇಂದ್ರ ಮೋದಿ ಪ್ರಧಾನಿ ಕನಸು ನನಸಾಗುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

Real red fort reserved for Rahul Gandhi, Union Minister Beni Prasad Verma

ನನ್ನ ಮಿತ್ರ (ಮುಲಾಯಂ ಸಿಂಗ್ ಯಾದವ್) ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಉದ್ಯಮಿಗಳ ಬೆಂಬಲವಿದ್ದ ಮಾತ್ರಕ್ಕೆ ಪ್ರಧಾನಿಯಾಗಲು ಸಾಧ್ಯವಾಗುವುದಿಲ್ಲ, ಜನತೆಯ ಬೆಂಬಲವಿರ ಬೇಕು. ಸಮಾಜವಾದಿ ಪಕ್ಷ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಸೀಟನ್ನೂ ಗೆಲ್ಲುವುದಿಲ್ಲ ಇನ್ನು ನನ್ನ ಗೆಳೆಯ ಪ್ರಧಾನಿಯಾಗುವುದು ಎಲ್ಲಿಂದ ಬಂತು ಎಂದು ಬೇಣಿ ಪ್ರಸಾದ್ ಲೇವಡಿ ಮಾಡಿದ್ದಾರೆ.

ಮುಜಾಫರ್ ನಗರದಲ್ಲಿ ಮುಸ್ಲಿಮರು ಕಣ್ಣೀರು ಹಾಕುವಂತೆ ಅಖಿಲೇಶ್ ಸರಕಾರ ಮಾಡಿತು. ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸೇರಿ ಉತ್ತರಪ್ರದೇಶ ಸರಕಾರ ಕಬ್ಬು ಬೆಳೆಗಾರರಿಗೆ ಮೋಸ ಮಾಡಿತು. ಈ ಬಾರಿಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ನಿರ್ನಾಮವಾಗುವುದು ಖಂಡಿತ ಎಂದು ಸಚಿವ ಬೇಣಿ ಪ್ರಸಾದ್ ವರ್ಮಾ ಹೇಳಿದ್ದಾರೆ.

ರೈತರ ಶಾಂತಿಯುತ ಹೋರಾಟ ನಡೆಯಬೇಕು. ಆ ಹೋರಾಟದ ನೇತೃತ್ವವನ್ನು ರಾಹುಲ್ ಗಾಂಧಿ ವಹಿ ಕೊಳ್ಳಬೇಕು. ಆ ಮೂಲಕವಾದಾರೂ ಇಲ್ಲಿನ ಸರಕಾರಕ್ಕೆ ರೈತರ ನೋವು ಏನೆಂದು ಅರ್ಥವಾಗಲಿ ಎನ್ನುವುದು ನನ್ನ ಇಚ್ಚೆ ಎಂದು ಬೇಣಿ ಪ್ರಸಾದ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+