RBI Withdraw Rs. 2000 Note: ನೋಟು ಹಿಂಪಡೆದ ಬೆನ್ನಲ್ಲೇ ಕ್ರ್ಯಾಶ್ ಆದ ಆರ್‌ಬಿಐ ವೆಬ್‌ಸೈಟ್
₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡ ನಂತರ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್‌ಗೆ ಅತಿಯಾದ ಬಳಕೆದಾರರು ಬಂದ ಕಾರಣ, ಭಾರಿ ಟ್ರಾಫಿಕ್ ಉಂಟಾಗಿದ್ದು ಕ್ರ್ಯಾಶ್ ಆಗಿದೆ.
₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿರುವುದಾಗಿ ಆರ್‌ಬಿಐ ಶುಕ್ರವಾರ ಪ್ರಕಟಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಆದರೆ, ₹ 2000 ನೋಟುಗಳು ಕಾನೂನುಬದ್ಧ ಟೆಂಡರ್ ಆಗಿ ಉಳಿಯುತ್ತವೆ ಎಂದು ಆರ್‌ಬಿಐ ಹೇಳಿದೆ. ತಕ್ಷಣದಿಂದ ಜಾರಿಗೆ ಬರುವಂತೆ ₹2000 ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

ಸೆಪ್ಟೆಂಬರ್ 30, 2023 ರವರೆಗೆ ₹2,000 ನೋಟುಗಳಿಗೆ ಠೇವಣಿ ಅಥವಾ ವಿನಿಮಯ ಸೌಲಭ್ಯಗಳನ್ನು ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ನಿಮ್ಮ 2000 ರುಪಾಯಿಯ ನೋಟುಗಳನ್ನು ಹೊಂದಿದ್ದರೆ, ಆರ್ ಬಿಐ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 30, 2023 ರವರೆಗೆ ಯಾವುದೇ ಬ್ಯಾಂಕ್ ಶಾಖೆಯಲ್ಲಿ ನೀವು ಅವುಗಳನ್ನು ಬ್ಯಾಂಕ್‌ನೋಟುಗಳಿಗೆ ಠೇವಣಿ ಮಾಡಬಹುದು ಅಥವಾ ಬದಲಾಯಿಸಬಹುದಾಗಿದೆ.
₹2000 ಮುಖಬೆಲೆಯ ನೋಟುಗಳನ್ನು ಠೇವಣಿ ಇಡಲು ಆರ್‌ಬಿಐ ಮಿತಿಯನ್ನೂ ನಿಗದಿಪಡಿಸಿದೆ. ಒಂದು ಸಮಯದಲ್ಲಿ ಗರಿಷ್ಠ 20,000 ರುಪಾಯಿಯವೆರೆಗೆ ಮಾತ್ರ ಯಾವುದೇ ಬ್ಯಾಂಕ್‌ನಲ್ಲಿ ಠೇವಣಿ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.
ಆರ್‌ಬಿಐ ಹೇಳಿರುವ ಪ್ರಕಾರ, "ಮಾರ್ಚ್ 31, 2018 ರಂತೆ ಚಲಾವಣೆಯಲ್ಲಿರುವ ಈ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯ ₹ 6.73 ಲಕ್ಷ ಕೋಟಿಯಿಂದ ₹ 3.62 ಲಕ್ಷ ಕೋಟಿಗೆ ಇಳಿದಿದೆ ಎಂದು ಮಾಹಿತಿ ನೀಡಿದೆ. 2000 ರುಪಾಯಿ ಮುಖಬೆಲೆ ನೋಟುಗಳಣ್ನು ಇನ್ನು ಮುಂದೆ "ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ" ಎಂದು ಆರ್‌ಬಿಐ ಹೇಳಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ "ಕ್ಲೀನ್ ನೋಟ್ ಪಾಲಿಸಿ" ಯ ಅನುಸಾರವಾಗಿ, ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ. ₹ 2000 ಮುಖಬೆಲೆಯ ನೋಟುಗಳು ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತವೆ ಎಂದು ಆರ್‌ಬಿಐ ತಿಳಿಸಿದೆ.











Click it and Unblock the Notifications