25,000 ರೂಪಾಯಿ ಪರಿಹಾರ, ಡಿಜಿಟಲ್ ಸಂತ್ರಸ್ತರಿಗೆ ಭರ್ಜರಿ ಸುದ್ದಿ ಕೊಡಲು ಸಜ್ಜಾದ ಆರ್‌ಬಿಐ... RBI Compensation
ಜಗತ್ತು ಆಧುನಿಕತೆ ಕಡೆಗೆ ಹೋದಂತೆಲ್ಲಾ ವಂಚನೆ ಪ್ರಕರಣ ಹಾಗೂ ಮೋಸ ಮಾಡುವುದು ಕೂಡ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಡಿಜಿಟಲ್ ಜಗತ್ತಿನಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಆನ್‌ಲೈನ್ ವಂಚನೆಗಳ ಮೂಲಕ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜನರು ದುಡ್ಡು ಕಳೆದುಕೊಂಡು ಪರದಾಡುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಲಗಾಮು ಹಾಕಲು ಮತ್ತು ದುಡ್ಡು ಕಳೆದುಕೊಳ್ಳುವ ಜನರಿಗೆ ರಕ್ಷಣೆ ನೀಡಲು ಇದೀಗ ಆರ್‌ಬಿಐ ಭರ್ಜರಿ ಪ್ಲಾನಿಂಗ್ ಮಾಡಿದೆ. ಹಾಗಾದರೆ ಆರ್‌ಬಿಐ ಪ್ರಸ್ತಾಪಿಸಿದ ಆ ಹೊಸ ಯೋಜನೆ ಏನು? ಬನ್ನಿ ತಿಳಿಯೋಣ.
ಆನ್‌ಲೈನ್ ಮೂಲಕ ಮೋಸ ಮಾಡುವ ವಂಚಕರ ಜಾಲ ಇಡೀ ಪ್ರಪಂಚದಲ್ಲಿ ಭಾರಿ ವೇಗದಿಂದಲೇ ವಿಸ್ತರಣೆ ಆಗುತ್ತಿದೆ. ಪ್ರತಿದಿನ ಸಾವಿರಾರು ಕೋಟಿ ರೂಪಾಯಿ ಈ ರೀತಿಯಾಗಿ ಅಮಾಯಕರ ಬ್ಯಾಂಕ್ ಖಾತೆಯಿಂದ ಮತ್ತು ಇನ್ನಿತರ ಉಳಿತಾಯ ಮೂಲದಿಂದ ಕದಿಯುತ್ತಾರೆ ವಂಚಕರು. ಒಟಿಪಿ ಸೇರಿದಂತೆ ಹಲವು ವಯಕ್ತಿಕ ಮಾಹಿತಿ ಪಡೆದು ಮೋಸ ಮಾಡುವ ಜಾಲ ದೊಡ್ಡದಾಗಿ ಬೆಳೆದಿದೆ. ಇಂತಹ ಭಾರಿ ಸೂಕ್ಷ್ಮ ಪರಿಸ್ಥಿತಿಯಲ್ಲಿ ಆರ್‌ಬಿಐ ಪ್ರಸ್ತಾಪಿಸಿರುವ ಹೊಸ ನಿರ್ಧಾರ ಹಣ ಕಳೆದುಕೊಳ್ಳುವ ಜನರಿಗೆಲ್ಲಾ ಹೊಸ ಭರವಸೆ ತುಂಬಲಿದೆ.

ಆರ್‌ಬಿಐ ಕೊಡಲಿದೆ ಭರ್ಜರಿ ಸುದ್ದಿ!
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಸಣ್ಣ ಮೌಲ್ಯದ ವಂಚನೆ ವಹಿವಾಟುಗಳಲ್ಲಿ ಗ್ರಾಹಕರಿಗೆ 25,000 ರೂಪಾಯಿ ತನಕವೂ ನಷ್ಟ ಸರಿದೂಗಿಸಲು ಒಂದು ಚೌಕಟ್ಟನ್ನ ಪರಿಚಯಿಸಲು ಪ್ರಸ್ತಾಪಿಸಲಾಗಿದೆ ಎಂದು ಈಗ ತಿಳಿಸಿದ್ದಾರೆ. ವಂಚನೆಗೊಳಗಾದರೆ ಅದು ಗ್ರಾಹಕರ ಸ್ವಚ್ಛೆಯಿಂದಾಗಲಿ ಅಥವಾ ಯಾರ ಒಪ್ಪಿಗೆಯಿಂದಾಗಲಿ, ಯಾವುದೇ ಪ್ರಶ್ನೆ ಕೇಳದಿದ್ದರೆ, 25,000 ರೂಪಾಯಿ ಅಥವಾ ಶೇಕಡಾ 85 ರಷ್ಟು ಪರಿಹಾರ ನೀಡುವ ಬಗ್ಗೆ ಪ್ರಸ್ತಾಪವಾಗಿದೆ. ನಿಯಮ ಜಾರಿಗೆ ಬಂದರೆ ಇದು ಭವಿಷ್ಯದಲ್ಲಿ ತುಂಬಾ ಸಹಾಯಕವಾಗಲಿದೆ.
25,000 ರೂಪಾಯಿ ತನಕ ಪರಿಹಾರ
ಅಂದಹಾಗೆ ಸಣ್ಣಪುಟ್ಟ ಹಣ ವಂಚನೆಯ ವಹಿವಾಟುಗಳಿಂದ ಉಂಟಾಗುವ ನಷ್ಟಗಳಿಗೆ ಪ್ರತಿ ಪ್ರಕರಣಕ್ಕೆ 25,000 ರೂಪಾಯಿ ತನಕ ಪರಿಹಾರ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಅರ್ಥಾತ್ ಆರ್‌ಬಿಐ ಈಗ ಪ್ರಸ್ತಾಪ ಮಾಡಿದೆ. ಸಾಮಾನ್ಯವಾಗಿ ಸುಮಾರು ಶೇಕಡಾ 65ರಷ್ಟು ವಂಚನೆಯ ಪ್ರಕರಣಗಳು 50,000 ರೂಪಾಯಿಗಿಂತ ಕಡಿಮೆ ಮೊತ್ತದ್ದೇ ಆಗಿರುತ್ತದೆ. ಹೀಗಿದ್ದಾಗ ಹೊಸ ಪ್ರಸ್ತಾವನೆ ಒಂದನ್ನು ಆರ್‌ಬಿಐ ಈಗ ಮುಂದೆ ಇಟ್ಟಿದ್ದು, ಇನ್ನುಮುಂದೆ ಈ ರೀತಿಯ ವಂಚನೆ ಪ್ರಕರಣಗಳಲ್ಲಿ ಗ್ರಾಹಕರು ಒನ್ ಟೈಂ ಪಾಸ್‌ವರ್ಡ್ ಅರ್ಥಾತ್ ಒಟಿಪಿ ಹಂಚಿಕೊಂಡಿದ್ದರೂ ಪರಿಹಾರ ಪಡೆಯಲು ಅರ್ಹರು ಎಂಬ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಸಾಗಿದೆ.












Click it and Unblock the Notifications