ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ ದರದಲ್ಲಿ ಶೇ.6.5ಕ್ಕೆ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

|
Google Oneindia Kannada News

ಬೆಂಗಳೂರು, ಜೂನ್ 08: ಕೇಂದ್ರ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ಬಡ್ಡಿ ದರವಾದ ರೆಪೊ ದರವನ್ನು 6.50ರಷ್ಟಕ್ಕೆ ಯಥಾಸ್ಥಿತಿಯಲ್ಲಿ ಇರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುರುವಾರ ನಿರ್ಧರಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಸೆಂಟ್ರಲ್ ಬ್ಯಾಂಕಿನ ಎರಡನೇ ಹಣಕಾಸು ನೀತಿ ಸಭೆಯ ನಂತರ ರೇಪೋ ದರ ಕುರಿತು ಪ್ರಕಟಿಸಿದರು. ಸತತ ಆರು ಏರಿಕೆಗಳ ನಂತರ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಕೇಂದ್ರ ಬ್ಯಾಂಕ್‌ ನಿರ್ಧರಿಸಿದೆ. ಕಳೆದ ವರ್ಷ ಮೇ ತಿಂಗಳಿನಿಂದ 250 ಬೇಸಿಸ್ ಪಾಯಿಂಟ್‌ಗಳು (2.50%) ಏರಿಕೆ ಕಂಡಿದೆ ಎಂದರು.

RBI Monetary Policy

ರೆಪೊ ದರವನ್ನು ಬದಲಾಯಿಸದಿದ್ದರೂ, ವಿತ್ತೀಯ ನೀತಿ ಪರಿಸ್ಥಿತಿಯು ಒತ್ತಾಯಿಸಿದರೆ ಕೇಂದ್ರ ಬ್ಯಾಂಕ್ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಆರ್‌ಬಿಐ 2023-24ರ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ದರದ ಅಂದಾಜನ್ನು ಹಿಂದಿನ ಪ್ರಕ್ಷೇಪಣ 6.4ರಷ್ಟು ರಿಂದ 6.5ರಷ್ಟಕ್ಕೆ ಹೆಚ್ಚಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.

₹2,000 ನೋಟು: ಆರ್‌ಬಿಐ ನಿರ್ಧಾರದ ವಿರುದ್ಧ ಅರ್ಜಿ! ₹2,000 ನೋಟು: ಆರ್‌ಬಿಐ ನಿರ್ಧಾರದ ವಿರುದ್ಧ ಅರ್ಜಿ!

ಪ್ರಸ್ತಕ ಸಾಲಿನ (2023-24) ಹಣಕಾಸು ವರ್ಷದಲ್ಲಿ ಭಾರತ ಹಣದುಬ್ಬರ ದರವು 5.2% ರಷ್ಟಿದೆ. ಜನವರಿ 31 ರಂದು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯು ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ ಅಥವಾ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಶೇಕಡಾ 6ರಷ್ಟಿನಿಂದ ಶೇಕಡಾ 6.8 ರಷ್ಟು ಬೆಳವಣಿಗೆ ಹೊಂದುತ್ತದೆ ಎಂದು ಕೇಂದ್ರ ಬ್ಯಾಂಕ್ ಭವಿಷ್ಯ ನುಡಿದಿತ್ತು. ಈ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಶೇಕಡಾ 7 ರಷ್ಟು ಬೆಳೆಯಲಿದೆ ಎಂದು ಹೇಳಲಾಗುತ್ತಿದೆ.

RBI Monetary Policy

ಭಾರತದಲ್ಲಿ ಹಣದುಬ್ಬರ ಹಿನ್ನೆಲೆಯಲ್ಲಿ ಕಳೆದ ವರ್ಷ ಮೇ ತಿಂಗಳಿನಿಂದ ಸತತ ಆರು ಬಾರಿ ದರ ಏರಿಕೆ ಕಂಡಿದೆ. ಈ ಸಂಬಂಧ ಬೆಲೆ ಏರಿಕೆಯ ಸೂಚಕವು ಆರ್‌ಬಿಐನ ಕಡ್ಡಾಯ ಶ್ರೇಣಿಯು ಶೇಕಡಾ 2ರಿಂದ ಶೇಕಡಾ 6 ಕ್ಕಿಂತ ಹೆಚ್ಚಿಸಿದೆ.

ಸಾಮಾನ್ಯವಾಗಿ ಹಣದುಬ್ಬರದಂತಹ ಸಮಯದಲ್ಲಿ ಕೇಂದ್ರೀಯ ಬ್ಯಾಂಕುಗಳು ಸಾಲದ ದರಗಳನ್ನು ಹೆಚ್ಚಾಗುತ್ತವೆ. ಹೆಚ್ಚಿನ ಪ್ರಮುಖ ಸಾಲದ ದರಗಳು ವಾಣಿಜ್ಯ ಬ್ಯಾಂಕ್‌ಗಳು ವಿತರಿಸಿದ ಸಾಲಗಳ ಮೇಲಿನ ಹೆಚ್ಚಿನ ಬಡ್ಡಿಗೆ ಅನುವಾದಿಸುತ್ತವೆ. ಇದು ಪ್ರತಿಯಾಗಿ, ಹೆಚ್ಚಿನ ಹಣದುಬ್ಬರದಿಂದಾಗಿ ಬೆಲೆ ಏರಿಕೆಗೆ ನೆರವಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

English summary
RBI Monetary Policy: Reserve bank of India held special Monetary Policy Committee meeting and announces the Repo will remains unchanged to 6.5% | Explore the other key highlights of MPC Meeting today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X