ಹರಿದ ನೋಟು ಬದಲಾವಣೆಗೆ ಹೊಸ ನಿಯಮ ಬಿಡುಗಡೆ ಮಾಡಿದ ಆರ್‌ಬಿಐ

ನವದೆಹಲಿ, ಸೆಪ್ಟೆಂಬರ್ 09: ನೋಟು ಅಮಾನ್ಯೀಕರಣದ ನಂತರ ಬಿಡುಗಡೆಯಾದ ಹೊಸ ನೊಟುಗಳ ಬದಲಾವಣೆಗೆ ಆರ್‌ಬಿಐ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

ಈ ಮುಂಚೆ 2000 ಮೌಲ್ಯದ ನೋಟಿನ ಬದಲಾವಣೆಗೆ ನಿಯಮವಿರಲಿಲ್ಲ. ಹಾಗಾಗಿ ಈ ನೋಟುಗಳ ಬದಲಾವಣೆ ಸಾಧ್ಯವಾಗಿರಲಿಲ್ಲ ಆದರೆ ಹೊಸ ನಿಯಮಾವಳಿ ಅನ್ವಯ ಹರಿದ 2000 ಮೌಲ್ಯದ ಸೇರಿದಂತೆ ಎಲ್ಲ ಹೊಸ ನೋಟುಗಳನ್ನೂ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಹರಿದ ನೋಟುಗಳ ಪೂರ್ಣ ಅಥವಾ ಅರ್ಧ ಮೌಲ್ಯವನ್ನು ವಾಪಸ್ ಪಡೆಯಬಹುದಾಗಿದೆ. ಎಷ್ಟು ಅಳತೆಯಲ್ಲಿ ಹರಿದ ನೋಟುಗಳಿಗೆ ಎಷ್ಟು ಮೌಲ್ಯ ನೀಡಲಾಗುತ್ತದೆ ಎಂದು ಆರ್‌ಬಿಐ ನಿಯಮಾವಳಿ ಪ್ರಕಟಿಸಿದೆ.

RBI announced new guidance for exchange of torn notes

ಕನಿಷ್ಟ 80 ಚದರ ಸೆಂಟಿಮೀಟರ್ ಹರಿದ 2000 ನೋಟಿಗೆ ಅದರ ಪೂರ್ಣ ಮೌಲ್ಯವನ್ನು ಪಡೆಯಬಹುದಾಗಿದೆ. 80 ಚದರ ಸೆಂಟಿಮೀಟರ್ ಗಿಂತಲೂ ಹೆಚ್ಚು ಹರಿದ ಹಾಗೂ 40 ಚದರ ಸೆಂ.ಮೀಗಿಂತಲೂ ಕಡಿಮೆ ಹರಿದ 2000 ಮೌಲ್ಯದ ನೋಟಿಗೆ ಅರ್ಧ ಮೌಲ್ಯವನ್ನು ಪಡೆಯಬಹುದಾಗಿದೆ. 2000 ನೋಟಿನ ಒಟ್ಟು ಅಳತೆ 109.56 ಚದರ ಸೆ.ಮೀ.

ಹೊಸ ನೋಟುಗಳಾದ 200, 100,500, 200, 50 ,20,10 ಎಲ್ಲ ನೋಟುಗಳನ್ನು ಆರ್‌ಬಿಐನ ಬಿಡುಗಡೆ ಮಾಡಿರುವ ಹೊಸ ನಿಯಮದ ಅನ್ವಯ ಬದಲಾವಣೆ ಮಾಡಬಹುದಾಗಿ. ಬದಲಾವಣೆ ಮಾಡಲು ಹಾಗೂ ಮೌಲ್ಯ ಪಡೆಯಲು ನೋಟುಗಳು ಹರಿದಿರಬೇಕಾದ ಪರಿಮಾಣವನ್ನು ಆರ್‌ಬಿಐ ನೀಡಿದೆ.

ಈ ಹಿಂದೆ ಬಿಡುಗಡೆ ಮಾಡಿದ ಆರ್‌ಬಿಐ ನಿಯಮಾವಳಿಗಳಲ್ಲಿ ಹರಿದ ಹೊಸ ನೊಟುಗಳ ಬದಲಾವಣೆಗೆ ನಿಯಮಗಳನ್ನು ಸೇರಿಸಿರಲಿಲ್ಲ. ಹಾಗಾಗಿ ಹರಿದ ಹೊಸ ನೋಟುಗಳನ್ನು ಬ್ಯಾಂಕುಗಳಲ್ಲಿ ತೆಗೆದುಕೊಂಡಿರಲಿಲ್ಲ. ಇನ್ನು ಮುಂದೆ ಹೀಗಾಗದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+