Ration scam: ಬಂಗಾಳದಲ್ಲಿ ಇಡಿಯಿಂದ ಬಿಗ್ ಆಕ್ಷನ್- ಟಿಎಂಸಿ ನಾಯಕ ಶಂಕರ್ ಆಧ್ಯಾ ವಶಕ್ಕೆ
ಕೋಲ್ಕತ್ತಾ ಜನವರಿ 6: ಪಡಿತರ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತಂಡ ಪಶ್ಚಿಮ ಬಂಗಾಳದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ನಡುವೆ ಇಡಿ ತಡರಾತ್ರಿ ತೃಣಮೂಲ ಕಾಂಗ್ರೆಸ್ ನಾಯಕ ಶಂಕರ್ ಆಧ್ಯಾ ಅವರನ್ನು ಬಂಧಿಸಿದೆ. ಟಿಎಂಸಿ ನಾಯಕ ಶಂಕರ್ ಆಧ್ಯಾ ಅವರನ್ನು ಬಂಧಿಸಿ ಕೋಲ್ಕತ್ತಾದ ಇಡಿ ಪ್ರಧಾನ ಕಚೇರಿಗೆ ಕರೆತರಲಾಗಿದ್ದು ಅವರ ವಿಚಾರಣೆ ನಡೆಸಲಾಗುತ್ತಿದೆ.
ಪಡಿತರ ಹಗರಣ ಪ್ರಕರಣದಲ್ಲಿ ಉತ್ತರ 24 ಪರಗಣ ಜಿಲ್ಲೆಯ ಶಂಕರ್ ಆಧ್ಯಾ ನಿವಾಸದ ಮೇಲೆ ಇಡಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ. ಬೊಂಗಾವ್ ಪುರಸಭೆಯ ಮಾಜಿ ಅಧ್ಯಕ್ಷರೂ ಆಗಿರುವ ಶಂಕರ್ ಆಧ್ಯಾ ಅವರ ನಿವಾಸದ ಮೇಲೆ ಶುಕ್ರವಾರವೇ ಇಡಿ ದಾಳಿ ಮಾಡಿತ್ತು. ಇದೇ ದಿನ ಶಂಕರ್ ಮನೆ ಮತ್ತು ಅತ್ತೆಯ ಮನೆ ಮೇಲೂ ದಾಳಿ ನಡೆಸಲಾಗಿದೆ. ಈ ಅವಧಿಯಲ್ಲಿ ಶಂಕರ್ ಮನೆಯಲ್ಲಿ 8.5 ಲಕ್ಷ ರೂ.ಗಳ ಜತೆಗೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಹೆಚ್ಚಿನ ಭಾಗವಾಗಿ ತನಿಖಾ ಸಂಸ್ಥೆ ತಡರಾತ್ರಿ ಶಂಕರ್ ಆಧ್ಯ ಅವರನ್ನು ಬಂಧಿಸಿದೆ.

ಈ ವೇಳೆ ಶಂಕರ್ ಆಧ್ಯಾ ಆಪ್ತರು ಹಾಗೂ ಸಂಬಂಧಿಕರಿಂದ ಇಡಿ ತಂಡದ ಮೇಲೆ ಹಲ್ಲೆ ಮಾಡಲಾಗಿದೆ. ಇಡಿ ತಂಡದ ವಾಹನಗಳು ಧ್ವಂಸಗೊಳಿಸಲಾಗಿದೆ. ಆದರೆ ತನಿಖೆಯ ಸಂದರ್ಭದಲ್ಲಿ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಸಹಕರಿಸಿದ ಹೊರತಾಗಿಯೂ ತನ್ನ ಪತಿಯನ್ನು ಬಂಧಿಸಲಾಗಿದೆ ಎಂದು ಅವರ ಪತ್ನಿ ಜ್ಯೋತ್ಸ್ನಾ ಆಧ್ಯಾ ಹೇಳಿದ್ದಾರೆ. ಶಂಕರ್ ಆಧ್ಯಾ ಅವರನ್ನು ಕೇಂದ್ರ ಪಡೆಗಳು ಕರೆದೊಯ್ಯುತ್ತಿದ್ದಂತೆ ಸ್ಥಳೀಯರಿಂದ ಪ್ರತಿಭಟನೆಗಳು ನಡೆದವು.
#WATCH | North 24 Parganas, West Bengal: Enforcement Directorate (ED) arrested former Bongaon Municipality Chairman Shankar Adhya, in connection with a ration scam case. pic.twitter.com/heorEuBBjb
— ANI (@ANI) January 6, 2024
ಪಶ್ಚಿಮ ಬಂಗಾಳದಲ್ಲಿ ಶಂಕರ್ ಆಧ್ಯಾ ಮಾತ್ರವಲ್ಲದೆ ಇನ್ನೊಬ್ಬ ಟಿಎಂಸಿ ನಾಯಕ ಸಹಜಹಾನ್ ಶೇಖ್ ಅವರ ಮನೆಗಳ ಮೇಲೂ ಇಡಿ ದಾಳಿ ಮಾಡಿದೆ. ಇಡಿ ಅಧಿಕಾರಿಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಶಸ್ತ್ರ ಸಿಬ್ಬಂದಿ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಸಾಜಹಾನ್ ಅವರ ನಿವಾಸದ ಮೇಲೆ ದಾಳಿ ಹಲವರು ದಾಖಲೆಗಳೂ ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದೆ. ಸಹಜಹಾನ್ ಶೇಖ್ ಅವರು ವೃತ್ತಿಯಲ್ಲಿ ಪಡಿತರ ವ್ಯಾಪಾರಿಯೂ ಆಗಿದ್ದಾರೆ.
ಟಿಎಂಸಿ ನಾಯಕರು ಇಡಿ ವಶ: ಕಾಂಗ್ರೆಸ್ ವಾಗ್ದಾಳಿ
ಟಿಎಂಸಿ ನಾಯಕರನ್ನು ಇಡಿ ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಇದೊಂದು ಯೋಚಿತ ಪಿತೂರು ಎಂದು ದೂರಿದೆ. ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಪ್ರತಿಪಕ್ಷಗಳು ಇಡಿ ದಾಳಿಯ ಪಿತೂರಿ ನಡೆಸಿವೆ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.












Click it and Unblock the Notifications