Ratan Tata Death: ರತನ್ ಟಾಟಾ ಅಂತ್ಯಕ್ರಿಯೆಗೆ ಬರುವ ವಿಐಪಿಗಳ ಪಟ್ಟಿ ಇಲ್ಲಿದೆ
ಮುಂಬೈ, ಅಕ್ಟೋಬರ್ 10: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ವಿಧಿವಶರಾಗಿದ್ದು, ಅಂತಿಮ ಸಂಸ್ಕಾರ ಇಂದು ಸಂಜೆ 4 ಗಂಟೆಗೆ ನೆರವೇರಲಿದೆ. ಪಾರ್ಥಿವ ಶರೀರವನ್ನು ನಾರಿಮನ್ ಪ್ಲಾಂಟ್‌ನಲ್ಲಿರುವ ಎನ್‌ಸಿಪಿಎ ಲಾನ್‌ನಲ್ಲಿ ಬೆಳಗ್ಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಭಾರತೀಯ ಉದ್ಯಮ ಮತ್ತು ಸಮಾಜದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದ ವ್ಯಕ್ತಿಗೆ ಅಂತಿಮ ಗೌರವ ಸಲ್ಲಿಸಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಸಂಜೆ 4 ಗಂಟೆಯವರೆಗೂ ಅವಕಾಶವನ್ನ ಕಲ್ಪಿಸಲಾಗಿದೆ. ಈ ಸಾರ್ವಜನಿಕ ಗೌರವದ ನಂತರ, ರತನ್ ಟಾಟಾ ಅವರ ಪಾರ್ಥಿವ ಶರೀರವು ಪಾರ್ಸಿ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಸುವ ಅಂತಿಮ ವಿಧಿಗಳಿಗಾಗಿ ವರ್ಲಿ ಚಿತಾಗಾರದ ಪ್ರಾರ್ಥನಾ ಮಂದಿರಕ್ಕೆ ತೆರಳಲಿದೆ.

ಇನ್ನೂ ರಿಲಯನ್ಸ್ ಇಂಡಸ್ಟ್ರೀಸ್ನ ಮುಖೇಶ್ ಅಂಬಾನಿ ಮತ್ತು ಅನಂತ್ ಅಂಬಾನಿ, ಇನ್ಫೋಸಿಸ್ನ ಎನ್.ಆರ್.ನಾರಾಯಣ ಮೂರ್ತಿ, ಆದಿತ್ಯ ಬಿರ್ಲಾ ಗ್ರೂಪ್ನ ಕುಮಾರ್ ಮಂಗಲಂ ಬಿರ್ಲಾ ಮತ್ತು ಆರ್ಬಿಐ ಗವರ್ನರ್ ಶಶಿಕಾಂತ್ ದಾಸ್ ಭಾಗವಹಿಸುವ ನಿರೀಕ್ಷೆಯಿದೆ.
ವೇದಾಂತ ಮತ್ತು ಜಿಂದಾಲ್ ಗ್ರೂಪ್ಸಳ ಪ್ರತಿನಿಧಿಗಳಾದ ಹರ್ಷ್ ಗೋಯೆಂಕಾ, ಗೌತಮ್ ಅದಾನಿ, ಸನ್ ಫಾರ್ಮಾದ ಸಾಂಘವಿ, ಶಿವ ನಾಡರ್, ಉದಯ್ ಕೋಟಕ್, ರೇಖಾ ಜುಂಜುನ್ನಾಲಾ, ಆನಂದ್ ಮಹೀಂದ್ರಾ, ಅನೀಶ್ ಶಾ, ಅಜಯ್ ಪಿರಮಾಲ್, ಫಾಲ್ಗುಣಿ ನಾಯರ್, ರಾಜನ್ ಪೈ ಮತ್ತು ಬಾಬಾ ರಾವ್ ಭಾಗವಹಿಸುವ ನಿರೀಕ್ಷೆಯಿದೆ.
ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅಮೀರ್ ಖಾನ್, ರಜನಿಕಾಂತ್, ರೋಹಿತ್ ಶರ್ಮಾ ಅವರಂತಹ VIP ಗಳು ಬರಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ್ ಕೇಜಿವಾಲ್, ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ಸಾ ಶರ್ಮಾ ಅವರಂತಹ ನಾಯಕರು ಭಾಗಿಯಾಗಲಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೋಹನ್ ಯಾದವ್, ಭೂಪೇಂದ್ರ ಪಟೇಲ್, ಆನಂದಿಬೆನ್ ಪಟೇಲ್, ಪಿಯೂಷ್ ಗೋಯಲ್, ಕಪಿಲ್ ಸಿಬಲ್, ಚಿರಾಗ್ ಪಾಸ್ನಾನ್, ಎನ್ ಚಂದ್ರಬಾಬು ನಾಯ್ತು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಬಿಹಾರ ಸಿಎಂ ನಿತೀಶ್ ಕುಮಾರ್, ವಿಜಯ್ ಕುಮಾರ್ ಸಿನ್ಹಾ, ಅಶ್ವಿನಿ ವೈಷ್ಣವ್, ಭೂಪೇಂದ್ರ ಯಾದವ್, ಪವನ್ ಕಲ್ಯಾಣ್, ಮಹಾರಾಷ್ಟ್ರ, ಸಿಎಂ ಏಕನಾಥ್ ಶಿಂಧೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ , ಗಿರೀಶ್ ಮಹಾಜನ್, ಮಂಗಲ್ ಪ್ರಸಾದ್ ಲೋಧಾ, ಉದಯ್ ಸಮಂತ್, ಸಂಭಾಜಿ ರಾಜೀ ದೇಸಾಯಿ, ಪ್ರಫುಲ್ ಪಟೇಲ್, ತತ್ತರೆ, ಚಗನ್ ಭುಜ್ವಲ್, ಶರದ್ ಪವಾರ್, ಸುಪ್ರಿಯಾ ಸುಳೆ ಮತ್ತು ರಾಜ್ ಠಾಕ್ರೆ ಮತ್ತು ಅವರ ಪುತ್ರ ಸೇರಿದಂತೆ ಠಾಕ್ರೆ ಕುಟುಂಬದ ಸದಸ್ಯರು ಗೌರವ ಸಲ್ಲಿಸಲಿದ್ದಾರೆ.












Click it and Unblock the Notifications