ರಾಷ್ಟ್ರಪತಿ ಭವನದಲ್ಲಿ ಹೋಳಿ ಕೂಟ ಇಲ್ಲ: ರಾಮನಾಥ್ ಕೋವಿಂದ್
ನವದೆಹಲಿ, ಮಾರ್ಚ್ 4: ರಾಷ್ಟ್ರಪತಿ ಭವನದಲ್ಲಿ ಹೋಳಿ ಕೂಟ ಇಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.
ಕೊರೊನಾ ವೈರಸ್(ಕೋವಿಡ್19) ಸೋಂಕು ಹರಡುವ ಭೀತಿಯಿಂದಾಗಿ ಈ ಬಾರಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಾಂಪ್ರದಾಯಿಕ ಹೋಳಿ ಕೂಟ ಇರುವುದಿಲ್ಲ ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.
ಕೊರೊನಾ ಸೋಂಕು ಹರಡದಂತೆ ನಾವು ಜಾಗ್ರತೆ ವಹಿಸಬೇಕು. ಮುಂಜಾಗ್ರತಾ ಕ್ರಮವಾಗಿ ಸಾಂಪ್ರದಾಯಿಕ ಹೋಳಿ ಕೂಟವನ್ನು ರಾಷ್ಟ್ರಪತಿ ಭವನದಲ್ಲಿ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಒಟ್ಟು 28 ಮಂದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಇಟಲಿಯಿಂದ ಬಂದ ವಿದೇಶಿಗರ ಪೈಕಿ 15 ಮಂದಿಗೆ ಕೊರೊನಾ ಸೋಂಕು ಇದೆ ಎನ್ನುವುದು ತಿಳಿದುಬಂದಿದೆ.
ಇನ್ನು ದುಬೈನಿಂದ ಬೆಂಗಳೂರಿಗೆ ಬಂದಿದ್ದ ಟೆಕ್ಕಿಯೊಬ್ಬರಲ್ಲಿ ಕೂಡ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು, ಅವರು ಸ್ನೇಹಿತರನ್ನೂ ಕೂಡ ಚಿಕಿತ್ಸೆಗೆ ಒಳಪಡಿಸಲಾಗಿದೆ.












Click it and Unblock the Notifications