Actress Rashmika Mandanna: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ ನಟಿ ರಶ್ಮಿಕಾಗೆ ರಕ್ಷಣೆ
Rashmika Mandanna: ದೇಶದಲ್ಲಿ ಕೇಳಿ ಬರುತ್ತಿರುವ ಹೆಸರುಗಳ ಪೈಕಿ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಹ ಒಂದು. ಬಿಷ್ಣೋಯ್ ಸಮುದಾಯಕ್ಕೆ ಸೇರಿದ ಈ ಲಾರೆನ್ಸ್ ಬಿಷ್ಣೋಯ್ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದ್ದಾನೆ. ಹೀಗಾಗಿಯೇ ಸಲ್ಮಾನ್ ಖಾನ್ ಆಪ್ತ ಎಂಬ ಕಾರಣಕ್ಕೆ ಎನ್‌ಸಿಪಿ ಮುಖಂಡ, ಮಾಜಿ ಮಂತ್ರಿ ಬಾಬಾ ಸಿದ್ದಿಕ್ ಅವರನ್ನು ಹತ್ಯೆ ಮಾಡಿದ್ದು ತನ್ನ ಗ್ಯಾಂಗ್ ಎಂದು ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದ ನಟಿ ರಶ್ಮಿಕಾ ಮಂದಣ್ಣಾ ಅವರಿಗೆ ಬೀಗಿ ಭದ್ರತೆ ಒದಗಿಸಲಾಗಿದೆ.
ಹತ್ಯೆ ಪ್ರಕರಣದಲ್ಲಿ ವರ್ಷಗಳಿಂದ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಾ ಅವರಿಗೂ ಏನು ಸಂಬಂಧ ಅವರ ರಕ್ಷಣೆಗೆ ಭದ್ರತೆ ಏಕೆ ಹೆಚ್ಚಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ಸಲ್ಮಾನ್ ಖಾನ್ ಕೃಷ್ಣಮೃಗ ಕೊಂದ ಆರೋಪ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದೇ ವೇಳೆ ಸಲ್ಮಾನ್ ಖಾನ್ ಆಪ್ತರಿಗೆ ಸಂಕಷ್ಟ ಎದುರಾಗಿದೆ. ನಟನಿಗೂ ಜೀವ ಬೆದರಿಕೆ ಇರುವ ಕಾರಣ, ನಟ ಸಲ್ಮಾನ್ ಮುಂಬೈ ಮನೆ ಸುತ್ತಮುತ್ತ ಟೈಟ್ ಸೆಕ್ಯೂರಿಟಿ ಕಲ್ಪಿಸಲಾಗಿದೆ.
ಶೂಟಿಂಗ್‌ನಲ್ಲಿ ಸಲ್ಮಾನ್ - ರಶ್ಮಿಕಾ ಭಾಗಿ
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಸ್ವಯಂ ಸಲ್ಮಾನ್ ಖಾನ್ ಬಾಡಿ ಗಾರ್ಡ್ ಸೇರಿದಂತೆ ಮೂರು ಹಂತಗಳಲ್ಲಿ ಮನೆ ಅಕ್ಕಪಕ್ಕ ಭದ್ರತೆ ಹೆಚ್ಚಿಸಲಾಗಿದೆ. ಸಿದ್ದಿಕ್ ಹತ್ಯೆಯಿಂದ ಕೆಲವು ದಿನಗಳ ಕಾಲ ಮನೆಯಲ್ಲಿಯೇ ಇದ್ದ ನಟ ಸಲ್ಮಾನ್ ಖಾನ್ ಇದೀಗ ಸಿನಿಮಾ ಚಿತ್ರೀಕರಣಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ನಟ ಸಲ್ಮಾನ್ ಖಾನ್ ಹಾಗೂ ನಟಿ ರಶ್ಮಿಕಾ ಒಟ್ಟಾಗಿ 'ಸಿಕಂದರ್' (Sikandar Movie) ಸಿನಿಮಾದಲ್ಲಿ ನಟಿಸಲಿದ್ದಾರೆ. ಸದ್ಯ ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್ ಸ್ಪಾಟ್‌ಗೆ ಸಲ್ಮಾನ್ ಬರುತ್ತಿದ್ದಂಗೆ ಬಿಗಿ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ. ಇದೀಗ ಸಿನಿಮಾದ ನಟಿಗೂ ಸಂಕಷ್ಟ ಎದುರಾಗಿದೆ.

ಸುಧಾರಿತ ತಂತ್ರಜ್ಞಾನಗಳಿಂದ ಬಿಗಿ ಭದ್ರತೆ
ನಟಿ ರಶ್ಮಿಕಾ ಮಂದಣ್ಣಾ ಅವರಿಗೂ ಸುಧಾರಿತ ತಂತ್ರಜ್ಞಾನದಡಿ ಭದ್ರತೆ ಒದಗಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ. ಇವರಿಗೆ ಮಾತ್ರಲ್ಲದೇ ನಟಿ ರಶ್ಮಿಕಾ, ಇನ್ನಿತರ ಕಲಾವಿದರಿಗೂ ಚಿತ್ರತಂಡಕ್ಕೂ ಬಿಗಿ ಭದ್ರತೆ ನೀಡಲಾಗುತ್ತಿದೆ. ಟೈಗರ್ 3 ನಂತರ ಬಹುದಿನಗಳ ಬಳಿಕ 'ಸಿಕಂದರ್' ಸಿನಿಮಾದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಸಿಕಂದರ್ ಸಿನಿಮಾ ಸೆಟ್‌ಗೆ ನಟಿ ರಶ್ಮಿಕಾ ಅವರು ಹೋಗುತ್ತಿದ್ದಂತೆ, ಇತ್ತ ನಟಿ ಅಭಿಮಾನಿಗಳಲ್ಲಿ ಭಯ ಸೃಷ್ಟಿಯಾಗಿದೆ. ಸಲ್ಮಾನ್ ಖಾನ್ ಆಪ್ತರಿಗೆ ಬೆದರಿಕೆ ಬಂದ ಬಳಿಕ ಅವರೊಂದಿಗೆ ನಟಿಸುವ ಎಲ್ಲರ ಪರಿಸ್ಥಿತಿ ಹೇಗೆ ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ. ಸದ್ಯ ಅಂತಹ ಭಯಪಡುವ ಅಗತ್ಯವಿಲ್ಲ. ಸಲ್ಮಾನ್, ರಶ್ಮಿಕಾ ಸೇರಿ ಎಲ್ಲರಿಗೂ ಚಿತ್ರತಂಡ ಸೂಕ್ತ ಭದ್ರೆತ ನೀಡಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಬ್ಯೂಸಿ ಇದ್ದಾರೆ. ಅವರ ನಟನೆಯ 'ಛಾವಾ' ಹಾಗೂ 'ಪುಷ್ಪಾ-2' ಸಿನಿಮಾ ಡಿಸೆಂಬರ್ ಮೊದಲ ವಾರವೇ ತೆರೆಗೆ ಬರಲು ಸಜ್ಜಾಗಿವೆ. ಈ ಮಧ್ಯೆ ಸಿಕಂದರ್ ಸಿನಿಮಾದಲ್ಲಿ ನಟಿ ಬ್ಯೂಸಿ ಆಗಿದ್ದಾರೆ. ಇದು ಅವರ ಅಭಿಮಾನಿಗಳ ಆತಂಕ ಸೃಷ್ಟಿಯಾಗುವಂತೆ ಮಾಡಿದೆ. ಕಾರಣ ಆ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಇದ್ದು, ಅವರಿಗೆ ಬಿಷ್ಣೋಯ್ ಗ್ಯಾಂಗ್ ನಿಂದ ಜೀವ ಬೆದರಿಕೆ ಇದೆ.












Click it and Unblock the Notifications