ಸೈಬರ್ ದಾಳಿ ಶಂಕೆ: ದೆಹಲಿ ಏಮ್ಸ್ ಆಸ್ಪತ್ರೆಯ ಸರ್ವರ್ ಡೌನ್

ನವದೆಹಲಿ, ನವೆಂಬರ್ 24: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್) ರಾಮ್ಸಮ್ವೇರ್ ದಾಳಿಗೆ ಒಳಗಾಗಿರಬಹುದು ಎಂದು ಆಸ್ಪತ್ರೆಯು ಹೇಳಿದೆ. ಗುರುವಾರ ಬೆಳಗ್ಗೆ 7ರಿಂದಲೇ ಸರ್ವರ್‌ಗಳು ಕೆಟ್ಟು ನಿಂತಿದ್ದರಿಂದ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಬೇರೆ ವಿಧಾನದಲ್ಲಿ ಕಾರ್ಯನಿರ್ವಹಿಸುವಂತಾಗಿದೆ.

ಏಮ್ಸ್ ಆಸ್ಪತ್ರೆಯು ಹೇಳಿಕೆಯಲ್ಲಿ, ಸಿಸ್ಟಮ್ ಅನ್ನು ಮರುಸ್ಥಾಪಿಸಲು ಕೆಲಸ ಮಾಡುತ್ತಿರುವ ನ್ಯಾಷನಲ್ ಇನ್ಫೋಮ್ಯಾಟಿಕ್ಸ್ ಸೆಂಟರ್ "ಇದು ರಾಮ್ಸಮ್ವೇರ್ ದಾಳಿಯಾಗಿರಬಹುದು. ಈ ಬಗ್ಗೆ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಲ್ಪಡುತ್ತದೆ," ಎಂದು ತಿಳಿಸಿದೆ.

"ಡಿಜಿಟಲ್ ಸೇವೆಗಳನ್ನು ಮರುಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಬೆಂಬಲವನ್ನು ಪಡೆಯಲಾಗುತ್ತಿದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Ransomware Attack Suspected after Delhi AIIMS Hospital Server Down

ಏನಿದು ರಾಮ್ಸಮ್ವೇರ್ ದಾಳಿ?

ರಾಮ್ಸಮ್ವೇರ್ ಎನ್ನುವುದು ದುರುದ್ದೇಶಪೂರಿತ ಸಾಫ್ಟ್‌ವೇರ್ ಆಗಿದ್ದು, ಬಳಕೆದಾರರು ಅಥವಾ ಸಂಸ್ಥೆಯ ಕಂಪ್ಯೂಟರ್‌ನಲ್ಲಿರುವ ಫೈಲ್‌ಗಳಿಗೆ ಪ್ರವೇಶಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಸೈಬರ್ ದಾಳಿಕೋರರು ಇಂಥ ಫೈಲ್‌ಗಳಿಗೆ ಪ್ರವೇಶವನ್ನು ಅನುಮತಿಸಲು ಸುಲಿಗೆಯನ್ನು ಮಾಡುತ್ತಾರೆ.

ಏಮ್ಸ್ ಆಸ್ಪತ್ರೆಯಲ್ಲಿ ಉದ್ದನೆ ಸರತಿ ಸಾಲು

ಪ್ರತಿ ವರ್ಷ 1.5 ಮಿಲಿಯನ್ ಹೊರರೋಗಿಗಳಿಗೆ ಮತ್ತು 80,000 ಒಳರೋಗಿಗಳಿಗೆ ಸೇವೆ ಸಲ್ಲಿಸುವ ನಗರದ ಅತಿದೊಡ್ಡ ರೆಫರಲ್ ಆಸ್ಪತ್ರೆಯು ಬೆಳಿಗ್ಗೆಯಿಂದ ಬೇರೆ ವಿಧಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ವಿಭಾಗದಲ್ಲೂ ಉದ್ದನೆಯ ಸರತಿ ಸಾಲುಗಳು ಕಾಣುತ್ತಿವೆ. ನೋಂದಾವಣೆ ವಿಭಾಗದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ, ಅಲ್ಲಿ ನೂರಾರು ಜನರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಅಲ್ಲದೆ, ಸ್ಮಾರ್ಟ್ ಲ್ಯಾಬ್, ವರದಿ ತಯಾರಿಕೆ, ಬಿಲ್ಲಿಂಗ್ ಮತ್ತು ಅಪಾಯಿಂಟ್‌ಮೆಂಟ್ ವ್ಯವಸ್ಥೆಗಳ ಮೇಲೂ ಈ ದಾಳಿಯು ಪರಿಣಾಮ ಬೀರಿದೆ. ಭವಿಷ್ಯದಲ್ಲಿ ಇಂತಹ ದಾಳಿಗಳು ನಡೆಯದಂತೆ ಏಮ್ಸ್ ಮತ್ತು ಎನ್ಐಸಿ ಮುನ್ನೆಚ್ಚರಿಕೆ ವಹಿಸಲಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.

ಏಮ್ಸ್ ವೆಬ್‌ಸೈಟ್‌ನ ಪ್ರಕಾರ, ಆಸ್ಪತ್ರೆಯನ್ನು 1956ರಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಇದು ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯ ಎಲ್ಲಾ ಅಂಶಗಳಲ್ಲಿ ಉತ್ಕೃಷ್ಟತೆಯ ಅಭಿವೃದ್ಧಿಗೆ ನ್ಯೂಕ್ಲಿಯಸ್ ಆಗಿ ಕಾರ್ಯನಿರ್ವಹಿಸುತ್ತದೆ.1978ರಲ್ಲೇ ಕಂಪ್ಯೂಟರ್ ಸೌಲಭ್ಯವನ್ನು ಸಣ್ಣ ರೀತಿಯಲ್ಲಿ ಪ್ರಾರಂಭಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+