ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಸೋತಿಲ್ಲ, ಹೋರಾಟ ಬಿಡಲ್ಲ : ರಮ್ಯಾ ಟುವ್ವಿಟುವ್ವಿ

By Prasad
|
Google Oneindia Kannada News

Recommended Video

ಟ್ವಿಟ್ಟರ್ ನಲ್ಲಿ ಬಿಜೆಪಿಗೆ ಅಭಿನಂದನೆ ಹೇಳಿದ ರಮ್ಯಾ | Oneindia Kannada

ಬೆಂಗಳೂರು, ಡಿಸೆಂಬರ್ 18 : "ಅಭಿನಂದನೆಗಳು ಭಾರತೀಯ ಜನತಾ ಪಕ್ಷ, ನಾವಿನ್ನೂ ಬಿಟ್ಟುಕೊಟ್ಟಿಲ್ಲ, ನಮ್ಮ ಹೋರಾಟ ಹೀಗೆಯೇ ಮುಂದುವರಿಯಲಿದೆ..." ಹೀಗೆಂದು ಟ್ವೀಟ್ ಮಾಡಿದವರು, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಅಕಾ ದಿವ್ಯಾ ಸ್ಪಂದನಾ.

ದಿವ್ಯಾ ಸ್ಪಂದನಾ ಅವರ ಈ ಹೇಳಿಕೆಗೆ ಟ್ವಿಟ್ಟರಿನಲ್ಲಿ ಭಾರೀ ಪ್ರತಿಸ್ಪಂದನೆ ವ್ಯಕ್ತವಾಗುತ್ತಿದೆ. ಕೆಲವರು ಅವರ ಸ್ಫೂರ್ತಿಯುತ ಹೇಳಿಕೆಗೆ ಶಭಾಸ್ ಎಂದಿದ್ದರೆ, ಮತ್ತೆ ಕೆಲವರು ಎಂದಿನಂತೆ ಕೆಣಕುವ, ಕಾಲೆಳೆಯುವಂಥ ಮಾತನ್ನಾಡಿದ್ದಾರೆ. ಈ ಎಲ್ಲ ಪ್ರತಿಸ್ಪಂದನೆಗೆ ರಮ್ಯಾ ಅವರದು ಮೌನವೇ ಉತ್ತರ.

ಇನ್ನು ಕರ್ನಾಟಕದತ್ತ ಮೋದಿ- ಅಮಿತ್ ಶಾ ಜೋಡಿ, ಎಷ್ಟೆಲ್ಲ ಸವಾಲಿದೆ ನೋಡಿಇನ್ನು ಕರ್ನಾಟಕದತ್ತ ಮೋದಿ- ಅಮಿತ್ ಶಾ ಜೋಡಿ, ಎಷ್ಟೆಲ್ಲ ಸವಾಲಿದೆ ನೋಡಿ

ಗುಜರಾತ್ ನಲ್ಲಿ ಕಾಂಗ್ರೆಸ್ ಸೋತಿದ್ದರೂ ವೀರೋಚಿತ ಸೋಲು ಕಂಡಿದೆ. ಕಳೆದ ಚುನಾವಣೆಯಲ್ಲಿ ಕೇವಲ 61 ಸ್ಥಾನ ಗಳಿಸಿದ್ದ ಕಾಂಗ್ರೆಸ್ ತನ್ನ ಎಣಿಕೆಯನ್ನು 81ಕ್ಕೆ ಹೆಚ್ಚಿಸಿಕೊಂಡಿರುವುದು ಸಣ್ಣ ಮಾತಲ್ಲ. ಕಾಂಗ್ರೆಸ್ ನಾಯಕರೆಲ್ಲರೂ ತಲೆಯೆತ್ತಿ, ಎದೆತಟ್ಟಿಕೊಂಡು ಸ್ವೀಕರಿಸಬೇಕಾದ ಫಲಿತಾಂಶವಿದು.

ರಾಹುಲ್ ವರ್ಚಸ್ಸು ವೃದ್ಧಿಯ ಹಿಂದಿನ ಗುಟ್ಟು ರಮ್ಯಾ!ರಾಹುಲ್ ವರ್ಚಸ್ಸು ವೃದ್ಧಿಯ ಹಿಂದಿನ ಗುಟ್ಟು ರಮ್ಯಾ!

ಸೋಲಿಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದರೆ, ಕಾಂಗ್ರೆಸ್ಸಿಗೆ ಮತ ಹಾಕಿದ ಶೇ.41.4ರಷ್ಟು ಗುಜರಾತಿನ ಜನತೆಗೆ ಅವಮಾನ ಮಾಡಿದಂತೆ. ಕಾಂಗ್ರೆಸ್ ಈ ಬಾರಿ ಭರ್ಜರಿಯಾಗಿ ಪ್ರಚಾರ ಮಾಡಿತ್ತು, ನಗರ ಪ್ರದೇಶದ ಜನರನ್ನು ಮಾತ್ರವಲ್ಲ, ಗ್ರಾಮೀಣ ಪ್ರದೇಶದ ಜನತೆಯ ವಿಶ್ವಾಸ ಗಿಟ್ಟಿಸಲು ಸಫಲವಾಗಿದೆ.

ರಮ್ಯಾ ಅವರಿಗೆ ಟ್ವಿಟ್ಟಿಗರು ನೀಡಿರುವ ಬಿಟ್ಟಿ ಸಲಹೆಗಳು ಕೆಳಗಿನಂತಿವೆ.

ಪರಿಸರ ರಕ್ಷಣೆ ಮಾಡಿದ ಬುದ್ದಿಜೀವಿಗಳು

ಪರಿಸರ ರಕ್ಷಣೆ ಮಾಡಿದ ಬುದ್ದಿಜೀವಿಗಳು

ಸಂಭ್ರಮಾಚರಣೆಗೆ ತಂದಿದ ಪಟಾಕಿಯನ್ನು ಮರಳಿ ಅಂಗಡಿಗೆ ಕೊಟ್ಟು ಪರಿಸರ ರಕ್ಷಣೆ ಮಾಡಿದ ಬುದ್ದಿಜೀವಿಗಳು. ಆದರೂ, ನೆಲಕ್ಕೆ ಬಿದ್ದರೂ ಮೀಸೆ ಇನ್ನೂ ಮಣ್ಣಾಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಪೂರ್ವಿ ರಾಜು ಅರಸ್ ಎಂಬುವವರು ಕಿಂಡಲ್ ಮಾಡಿದ್ದಾರೆ.

ಒಂದಿಲ್ಲೊಂದು ದಿನ ಗೆದ್ದೇ ಗೆಲ್ಲುತ್ತೀರಿ

ಹೌದು, ಹೋರಾಟ ಬಿಟ್ಟುಕೊಡಬೇಡಿ. ಒಂದಿಲ್ಲೊಂದು ದಿನ ಗೆದ್ದೇ ಗೆಲ್ಲುತ್ತೀರಿ. ಕೇವಲ 2 ತಿಂಗಳು ಮಾತ್ರ ಪ್ರಚಾರ ಮಾಡಿ ನೀವು ಅಂತಹ ಬೆವರನ್ನೇನು ಹರಿಸಿಲ್ಲ. ಕಾಂಗ್ರೆಸ್ ಬೀದಿಗಿಳಿದು ಹಣದುಬ್ಬರ, ತೈಲ ದರ ಏರಿಕೆ, ನಿರುದ್ಯೋಗ ಮುಂತಾದವುಗಳ ವಿರುದ್ಧ ಪ್ರಮುಖ ನಗರಗಳಲ್ಲಿ ಬಡಿದಾಡಬೇಕಿದೆ ಎಂದು ಉತ್ತೇಜಿಸಿದ್ದಾರೆ ಅಧೀಶ್ ಎಂಬುವವರು.

ಅತ್ಯುತ್ತಮ ಅವಕಾಶವನ್ನು ಕೈಚೆಲ್ಲಿದ್ದೀರಿ

ಅತ್ಯುತ್ತಮ ಅವಕಾಶವನ್ನು ಕೈಚೆಲ್ಲಿದ್ದೀರಿ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ, ಅಲ್ಲಿ ಗೆಲ್ಲಬೇಕಾದ ಅತ್ಯುತ್ತಮ ಅವಕಾಶವನ್ನು ಕೈಚೆಲ್ಲಿದ್ದೀರಿ. ಹಿಮಾಚಲ ಪ್ರದೇಶದಲ್ಲಿಯೂ ಸರಕಾರ ಉಳಿಸಿಕೊಳ್ಳಲಿಲ್ಲ, ಗುಜರಾತಿನಲ್ಲಿಯೂ ವಿಶ್ವಾಸ ಗೆಲ್ಲಲಿಲ್ಲ. ಇನ್ನೇನು ಪ್ರಯತ್ನ ಮಾಡುತ್ತೀರಿ ಎಂದು ಸೀತಾರಾಮು ಎಂಬುವವರು ರಮ್ಯಾ ಅವರನ್ನು ಪ್ರಶ್ನಿಸಿದ್ದಾರೆ.

ರಾಹುಲ್ ಅವರಿಗೆ ಒಂದೇ ಚುನಾವಣೆ ಗೆಲ್ಲುವುದು ಗೊತ್ತು

ರಾಹುಲ್ ಅವರಿಗೆ ಒಂದೇ ಚುನಾವಣೆ ಗೆಲ್ಲುವುದು ಗೊತ್ತು

ಕಾಂಗ್ರೆಸ್ ಮುಕ್ತ ಭಾರತ ಅಭಿಯಾನಕ್ಕೆ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರಿಂದ ಅತ್ಯುತ್ತಮ ಪ್ರದರ್ಶನ ಎಂದು ಒಬ್ಬರು ಟ್ವೀಟಿಸಿದ್ದರೆ, ರಾಹುಲ್ ಗಾಂಧಿ ಅವರಿಗೆ ಗೆಲ್ಲಲು ಸಾಧ್ಯವಿರುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಚುನಾವಣೆ ಮಾತ್ರ ಎಂದು ಮತ್ತೊಬ್ಬರು ಟ್ರೋಲ್ ಮಾಡಿದ್ದಾರೆ.

ರಾಹುಲ್ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ

ರಾಹುಲ್ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ

ಕಾಂಗ್ರೆಸ್ ಸೋಲಿಗೆ ಕಾರಣಗಳೇನೇ ಇರಲಿ, ಬಿಜೆಪಿ ವಿಜಯಕ್ಕೂ ಕಾರಣಗಳೇನೇ ಇರಲಿ, ರಾಹುಲ್ ಗಾಂಧಿಯವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಇತರ ರಾಜ್ಯಗಳಿಗೂ ಗುಜರಾತ್ ಚುನಾವಣೆ ರವಾನಿಸಿದೆ. ಆದರೆ, ಗುಜರಾತಿನಲ್ಲಿ ಪ್ರಚಾರ ನಡೆಸಿದಂತೆಯೇ ರಾಹುಲ್ ಅವರು ಇತರ 8 ರಾಜ್ಯಗಳಲ್ಲಿಯೂ ಪ್ರಚಾರ ನಡೆಸಬೇಕಿದೆ.

English summary
Gujarat assembly elections 2017 : Congress social media and digital media head Ramya akd Divya Spandana has congratulated BJP and has said Congress has not given up and will fight further. That's the spirit Ramya, keep it up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X