ಬಾಬಾ ರಾಮ್ ದೇವ್ ಸೋದರನಿಗೆ ನ್ಯಾಯಾಂಗ ಬಂಧನ
ಹರಿದ್ವಾರ, ಮೇ.28: ಪತಂಜಲಿ ಫುಡ್ ಹಾಗೂ ಹರ್ಬಲ್ ಪಾರ್ಕಿನಲ್ಲಿ ಸೆಕ್ಯುರಿಟಿ ಗಾರ್ಡ್ ಹಾಗೂ ಟ್ರಕ್ ಯೂನಿಯನ್ ಸದಸ್ಯರ ನಡುವೆ ನಡೆದ ಕಿತ್ತಾಟದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಅನೇಕರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮ್‌ದೇವ್ ಅವರ ಸಹೋದರ ರಾಮ್ ಭರತ್‌ನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ರಾಮ್ ಭರತ್ ಹಾಗೂ 40 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 307ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸ್ಥಳೀಯ ಟ್ರಕ್ ಗಳಿಗೆ ಅವಕಾಶ ನೀಡದೆ ಹೊರಗಿನವರಿಗೆ ಉದ್ಯೋಗ ನೀಡಿದ ಆರೋಪದ ಮೇಲೆ ಸಂಸ್ಥೆ ವಿರುದ್ಧ ಯೂನಿಯನ್ ಸದಸ್ಯರು ಧರಣಿ ನಡೆಸುತ್ತಿದ್ದರು. ಟ್ರಕ್ ಯೂನಿಯನ್ ಸದಸ್ಯರು ಮತ್ತು ಪುಡ್ ಪಾರ್ಕ್ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆದು, ಟ್ರಕ್ ಮಾಲೀಕ 50 ವರ್ಷ ವಯಸ್ಸಿನ ಬಲ್ಬೀರ್ ಎಂಬಾತ ಸಾವನ್ನಪ್ಪಿದ್ದರು. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿತ್ತು.
Haridwar: Ram Bharat (brother of Baba Ramdev) sent to judicial custody. pic.twitter.com/0YWqKZ5duu
— ANI (@ANI_news) May 28, 2015 ಈ ಸಂಬಂಧ ಪಥ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎಂದು ಗ್ರಾಮಾಂತರ ಭಾಗದ ಎಸ್ ಪಿ ಪರ್ಮೇಂದ್ರ ದೋಭಾಲ್ ಹೇಳಿದ್ದಾರೆ. (ಪಿಟಿಐ)












Click it and Unblock the Notifications