• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಗೋ ಮಹಾ ವಿಕಾಸ್‌ ಅಘಾಡಿ ಗೋ': ರಾಮದಾಸ್ ಅಠಾವಳೆ ಹೊಸ ಘೋಷಣೆ

|
Google Oneindia Kannada News

ಪುಣೆ, ಡಿಸೆಂಬರ್‌ 28: ಈ ಹಿಂದೆ ಗೋ ಕೊರೊನಾ ಕೊರೊನಾ ಗೋ ಹಾಗೂ ನೋ ಕೊರೊನಾ ಕೊರೊನಾ ನೋ ಎಂಬ ಘೋಷಣೆಗಳ ಮೂಲಕ ಸುದ್ದಿಯಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಈಗ ಹೊಸ ಘೋಷಣೆಯನ್ನು ಕೂಗಿದ್ದಾರೆ. ಆದರೆ ಅದು ಕೊರೊನಾ ವೈರಸ್‌ಗೆ ಸಂಬಂಧಿಸಿದ ಘೋಷಣೆ ಅಲ್ಲ.

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೋ ಮಹಾ ವಿಕಾಸ್‌ ಅಘಾಡಿ ಗೋ ಎಂದಿದ್ದಾರೆ. "ಈ ಮೂರು ಚಕ್ರಗಳ ಸರ್ಕಾರದಲ್ಲಿ ಮೂರು ಪಕ್ಷಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿದೆ. ಈ ಸರ್ಕಾರದಿಂದಾಗಿ ರೈತರಿಗೆ ಈವರೆಗೆ ಯಾವುದೇ ಸಹಾಯವೂ ದೊರೆತಿಲ್ಲ. ಈ ಸಂದರ್ಭದಲ್ಲೇ ದಲಿತರಿಗೆ ಯಾವುದೇ ಸೌಲಭ್ಯವೂ ದೊರೆತಿಲ್ಲ. ಬಜೆಟ್‌ನಲ್ಲಿ ದಲಿತರಿಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ," ಎಂದು ಆರೋಪ ಮಾಡಿದ್ದಾರೆ.

ಆಗ ಗೋ ಕೊರೊನಾ ಗೋ, ಈಗ ನೋ ಕೊರೊನಾ, ನೋ ಕೊರೊನಾ: ಸಚಿವರ ಹೊಸ ವರಸೆಆಗ ಗೋ ಕೊರೊನಾ ಗೋ, ಈಗ ನೋ ಕೊರೊನಾ, ನೋ ಕೊರೊನಾ: ಸಚಿವರ ಹೊಸ ವರಸೆ

ಗೋ ಕೊರೊನಾ ಕೊರೊನಾ ಗೋ ಎಂಬ ತನ್ನ ಪ್ರಸಿದ್ಧ ಘೋಷಣೆಗೆ ರಾಜಕೀಯ ರೂಪ ನೀಡಿರುವ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಗೋ ಮಹಾ ವಿಕಾಸ್‌ ಅಘಾಡಿ ಗೋ ಎಂದಿದ್ದಾರೆ. ಇನ್ನು ಈ ಸಂದರ್ಭದಲ್ಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು ಎಂಬ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್‌ ಪಾಟೀಲ್‌ರ ಹೇಳಿಕೆಯ ಪರವಾಗಿ ಹೇಳಿಕೆ ನೀಡಿದ್ದಾರೆ.

"ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ"

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ ಎಂದು ಆಗ್ರಹ ಮಾಡಿದ್ದಾರೆ. ಮೊದಲು ಅಲ್ಲಿನ ಮಹಾ ವಿಕಾಸ್‌ ಅಘಾಡಿ ಸರ್ಕಾರ ಹೋಗಬೇಕು ಎಂದು ಕೂಡಾ ಹೇಳಿರುವ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಗೋ ಮಹಾ ವಿಕಾಸ್‌ ಅಘಾಡಿ ಗೋ ಎಂದಿದ್ದಾರೆ.

ಇನ್ನು ಈ ವೇಳೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಕೇಂದ್ರ ಸಚಿವರು, "ಬಾಳಸಾಹೇಬ್‌ ಯುಗದ ಸಂದರ್ಭದಲ್ಲಿ ಶಿವಶಕ್ತಿ-ಭೀಮಾಶಕ್ತಿಯನ್ನು ಪ್ರಯೋಗ ಮಾಡಲಾಗಿದೆ. ಈಗ ಶಿವ ಸೇನೆಯು ಬಿಜೆಪಿಯನ್ನು ತೊರೆದು ಕಾಂಗ್ರೆಸ್‌, ಎನ್‌ಸಿಪಿ ಜೊತೆಗೆ ಸೇರಿದೆ. ಶಿವಸೇನೆ ಪ್ರಸ್ತುತ ಬಿಜೆಪಿ ಜೊರೆ ಸೇರಬೇಕಾಗಿದೆ," ಎಂದು ಹೇಳಿದರು. ಇನ್ನು ಈ ಸಂದರ್ಭದಲ್ಲೇ "ಬಿಜೆಪಿಯು ಮುಖ್ಯಮಂತ್ರಿ ಅವಧಿಯನ್ನು ಶೇಕಡ ಐವತ್ತು ಐವತ್ತರಷ್ಟು ವಿಂಗಡನೆ ಮಾಡುವ ಬಗ್ಗೆ ಭರವಸೆ ನೀಡಿತ್ತು. ಆದರೆ ಬಳಿಕ ಆ ಭರವಸೆಯನ್ನು ಮುರಿದಿದೆ," ಎಂದು ತಿಳಿಸಿದ್ದಾರೆ. ಇನ್ನು ಭೀಮಾ ಕೋರೆಂಗಾವ್‌ ಯುದ್ಧದ ವರ್ಷವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಕೂಡಾ ತಿಳಿಸಿದ್ದಾರೆ.

ಗೋ ಕೊರೊನಾ ಗೋ ಘೋಷಣೆ

ದೇಶದಾದ್ಯಂತ ಕೊರೊನಾ ವೈರಸ್ ಹರಡಲು ಆರಂಭಿಸಿದ ಸಂದರ್ಭದಲ್ಲಿ 'ಗೋ ಕೊರೊನಾ ಗೋ' ಎಂಬ ಘೋಷಣೆ ಕೂಗಿ ನಗೆಪಾಟಲಿಗೀಡಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠವಳೆ ಮತ್ತೊಮ್ಮೆ ಹೊಸ ಘೋಷಣೆಯನ್ನು ಕೂಗಿದ್ದರು. ನೋ ಕೊರೊನಾ' ಎಂಬ ಘೋಷಣೆಯನ್ನು ಜನತೆಗೆ ನೀಡಿದ್ದರು. 'ನಾನು 'ಗೋ ಕೊರೊನಾ ಗೋ' ಎಂಬ ಘೋಷಣೆ ನೀಡಿದ್ದೆ. ಹಾಗೆಯೇ ಈಗ ವೈರಸ್ ಹೋಗುತ್ತಿದೆ. ಆದರೆ ಅದು ನನ್ನ ಬಳಿಯೂ ಬಂದಿತ್ತು. ನಾನೂ ಆಸ್ಪತ್ರೆಗೆ ದಾಖಲಾಗಿದ್ದೆ. ಕೊರೊನಾ ವೈರಸ್‌ ನನ್ನ ಬಳಿ ಬರುವುದಿಲ್ಲ ಎಂದುಕೊಂಡಿದ್ದೆ. ಆದರೆ ಅದು ಎಲ್ಲಿ ಬೇಕಾದರೂ ತಲುಪಬಹುದು'' ಎಂದು ಅಠವಳೆ ಹೇಳಿಕೆ ನೀಡಿದ್ದರು. ''ಕೊರೊನಾ ವೈರಸ್‌ನ ಹೊಸ ರೂಪಾಂತರಿ ತಳಿಗೆ ನಾನು 'ನೋ ಕೊರೊನಾ ನೋ ಕೊರೊನಾ' ಎಂದು ಹೇಳುತ್ತೇನೆ. ಏಕೆಂದರೆ ನಮಗೆ ಹಳೆಯ ಕೊರೊನಾ ವೈರಸ್ ಅಥವಾ ಹೊಸ ರೂಪಾಂತರವಾಗಲೀ ನಮಗೆ ತಗುಲುವುದನ್ನು ನಾವು ಬಯಸುತ್ತಿಲ್ಲ' ಎಂದು ಕೂಡಾ ತಿಳಿಸಿದ್ದರು. (ಒನ್‌ಇಂಡಿಯಾ ಸುದ್ದಿ)

   ಕೊಹ್ಲಿ ಕಾರಣಕ್ಕೆ ಅತಿದೊಡ್ಡ ನಿರ್ಧಾರವನ್ನು ಮಾಡಿದ್ರು MS ಧೋನಿ | Oneindia Kannada
   English summary
   Union Minister Ramdas Athawale coins New slogan go maha vikas aghadi go.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X