ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಗೃಹ ಸಚಿವ ಅಮಿತ್ ಶಾ

|
Google Oneindia Kannada News

ನವದೆಹಲಿ, ಜ. 05: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು 2024ರ ಜನವರಿ 1 ರಂದು ಉದ್ಘಾಟಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ತ್ರಿಪುರಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

2024 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಇದೇ ವೇಳೆ ದೇವಾಲಯದ ಉದ್ಘಾಟನೆ ಕೂಡ ನಡೆಯುವುದರಿಂದ ಆಡಳಿತಾರೂಢ ಬಿಜೆಪಿಗೆ ಒಂದು ಮೈಲಿಗಲ್ಲು ಎಂದು ನಿರೀಕ್ಷಿಸಲಾಗಿದೆ.

1990 ರ ದಶಕದಲ್ಲಿ ಬಿಜೆಪಿಯ ಜನಪ್ರಿಯತೆಯ ಏರಿಕೆಗೆ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಹೋರಾಟ ಕೂಡ ದೊಡ್ಡ ಕೊಡುಗೆ ನೀಡಿದೆ. ಇದನ್ನೇ 2024 ರ ಚುನಾವಣೆಯಲ್ಲಿ ಬಳಸಿಕೊಳ್ಳಲು ಬಿಜೆಪಿ ಯೋಜಿಸುತ್ತಿದೆ.

Ram Temple In Ayodhya Will Be Inaugurated On January 1, 2024 says Amit Shah

"ಕಾಂಗ್ರೆಸ್ ಆಡಳಿತದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯಾಯಿತು.ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರದ ನಿರ್ಮಾಣವನ್ನು ಪ್ರಾರಂಭಿಸಿದರು" ಎಂದು ಅಮಿತ್ ಶಾ ಹೇಳಿದರು.

ನವೆಂಬರ್‌ನಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂದಿರದ ನಿರ್ಮಾಣವು ಅರ್ಧದಷ್ಟು ಹಂತವನ್ನು ಮುಗಿಸಿದೆ. ಹೀಗಾಗಿ ಈ ವರ್ಷ ಡಿಸೆಂಬರ್‌ಗೆ ಸಿದ್ಧವಾಗಲಿದೆ ಎಂದು ಹೇಳಿದ್ದರು.

ದಶಕಗಳಿಂದ ರಾಮಮಂದಿರ ನಿರ್ಮಾಣ ಕಾನೂನು ವಿವಾದದಲ್ಲಿ ಸಿಲುಕಿತ್ತು. ಸುಪ್ರೀಂ ಕೋರ್ಟ್ ಆಗಸ್ಟ್ 2020 ರಲ್ಲಿ ದೇವಸ್ಥಾನದ ಪರ ತೀರ್ಪು ನೀಡಿದ ನಂತರ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ದೇವಾಲಯ ನಿರ್ಮಾಣದ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ನೆರವೇರಿಸಿದ್ದರು.

ಪೂರ್ಣಗೊಂಡಿರುವ ದೇವಾಲಯವು ನೆಲ ಅಂತಸ್ತಿನಲ್ಲಿ 160 ಆವರಣಗಳನ್ನು, ಮೊದಲ ಮಹಡಿಯಲ್ಲಿ 132 ಆವರಣಗಳನ್ನು ಮತ್ತು ಎರಡನೇ ಮಹಡಿಯಲ್ಲಿ 74 ಆವರಣಗಳನ್ನು ಹೊಂದಿರುತ್ತದೆ. ಐದು ಮಂಟಪಗಳು ಇರುತ್ತವೆ. ಮೈದಾನದಲ್ಲಿ ಯಾತ್ರಿಕರ ಸೌಕರ್ಯ ಕೇಂದ್ರ, ವಸ್ತುಸಂಗ್ರಹಾಲಯ, ದಾಖಲೆಗಳು, ಸಂಶೋಧನಾ ಕೇಂದ್ರ, ಸಭಾಂಗಣ, ಗೋಶಾಲೆ, ಆಡಳಿತ ಕಟ್ಟಡ ಮತ್ತು ಅರ್ಚಕರಿಗೆ ಕೊಠಡಿಗಳು ಇರುತ್ತವೆ.

English summary
Ram Temple In Ayodhya Will Be Inaugurated On January 1, 2024 says Union Home Minister Amit Shah . know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X