ಅಚ್ಚರಿಯ ಬೆಳವಣಿಗೆ! ರಾಹುಲ್‌ಗೆ ಪತ್ರ ಬರೆದು ಆಶೀರ್ವದಿಸಿದ ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ

ಅಯೋಧ್ಯೆ, ಡಿಸೆಂಬರ್ 03: ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಮ್ಮ ಆಶೀರ್ವಾದವನ್ನು ತಿಳಿಸಿದ್ದಾರೆ.

ಉತ್ತರ ಪ್ರದೇಶಕ್ಕೆ 'ಭಾರತ್ ಜೋಡೋ ಯಾತ್ರೆ' ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ ಸತ್ಯೇಂದ್ರ ದಾಸ್ ಪತ್ರ ಬರೆದಿದ್ದಾರೆ.

'ದೇಶಕ್ಕಾಗಿ ನೀವು ಮಾಡುವ ಯಾವುದೇ ಕೆಲಸವು ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ನನ್ನ ಆಶೀರ್ವಾದ ನಿಮ್ಮ ಮೇಲಿದೆ' ಎಂದು ದಾಸ್ ಪತ್ರದಲ್ಲಿ ಬರೆದು ಅದನ್ನು ಯುವ ಕಾಂಗ್ರೆಸ್ ನಾಯಕ ಗೌರವ್ ತಿವಾರಿಗೆ ಹಸ್ತಾಂತರಿಸಿದ್ದಾರೆ.

Ram temple head priest blesses Rahul Gandhi for Bharat Jodo Yatra

'ನಮ್ಮ ಆಶೀರ್ವಾದ ನಿಮ್ಮೊಂದಿಗೆ (ರಾಹುಲ್ ಗಾಂಧಿ) ಇರಲಿ' ಎಂದು ಅವರು ಹೇಳಿದ್ದಾರೆ.

ಯುಪಿಯಲ್ಲಿ ರಾಹುಲ್ ಭಾರತ್‌ ಜೋಡೋ ಯಾತ್ರೆಗೆ ಭಾರೀ ಸಿದ್ಧತೆ

ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆಗಾಗಿ ಸಿದ್ಧತೆಗಳು ನಡೆಯುತ್ತಿವೆ, ಇದು ಜನವರಿ 3 ರಂದು ರಾಜ್ಯವನ್ನು ಪ್ರವೇಶಿಸಿದೆ. ಜನವರಿ 5 ರಂದು ಹರಿಯಾಣವನ್ನು ದಾಟುವ ಮೊದಲು 120 ಕಿಲೋಮೀಟರ್ ದೂರವನ್ನು ಉತ್ತರ ಪ್ರದೇಶದಲ್ಲಿ ಕ್ರಮಿಸಲಿದೆ.

ಈ ಯಾತ್ರೆಯು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುತ್ತದೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಳಿಗಾಲದ ವಿರಾಮದಲ್ಲಿದ್ದ ಯಾತ್ರೆಯು ಜನವರಿ 3 ರಂದು ದೆಹಲಿಯ ಕಾಶ್ಮೀರಿ ಗೇಟ್‌ನಲ್ಲಿರುವ ಹನುಮಾನ್ ಮಂದಿರದಿಂದ ಪುನರಾರಂಭಗೊಂಡು ಮಧ್ಯಾಹ್ನದ ವೇಳೆಗೆ ಗಾಜಿಯಾಬಾದ್‌ಗೆ ಪ್ರವೇಶಿಸಲಿದೆ.

Ram temple head priest blesses Rahul Gandhi for Bharat Jodo Yatra

ಇದು ಬಾಗ್‌ಪತ್‌ನ ಮಾವಿಕಲ ಗ್ರಾಮದಲ್ಲಿ ರಾತ್ರಿ ಕೊನೆಗೊಳ್ಳಲಿದೆ.

ಯಾತ್ರೆಯು ಜನವರಿ 4 ರಂದು ಶಾಮ್ಲಿ ಜಿಲ್ಲೆಯ ಮೂಲಕ ಹಾದು ಹರಿಯಾಣವನ್ನು ಪ್ರವೇಶಿಸಲಿದ್ದು, ಜನವರಿ 5 ರ ಸಂಜೆ ಪಾಣಿಪತ್‌ನಲ್ಲಿರುವ ಸನೌಲಿಯನ್ನು ಪ್ರವೇಶಿಸಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಪಕ್ಷದ ಬಾಗ್‌ಪತ್ ಜಿಲ್ಲಾ ಘಟಕದ ಅಧ್ಯಕ್ಷ ಯೂನಸ್ ಚೌಧರಿ ಅವರು ಯಾತ್ರೆಯನ್ನು ದುಂಡಹೇರಾ ಚೆಕ್‌ಪೋಸ್ಟ್‌ನಲ್ಲಿ ಬರಮಾಡಿಕೊಳ್ಳಲಾಗುವುದು ಮತ್ತು ಜನವರಿ 3 ರಂದು ಮಾವಿಕಲ ಗ್ರಾಮದಲ್ಲಿ ರಾತ್ರಿ ರಾಹುಲ್ ಗಾಂಧಿ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಹೇಳಿದರು.

ಸುಮಾರು 2,000-2,500 ಜನರಿಗೆ ತಂಗಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿದೆ. ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ಎಂಟು ರಾಜ್ಯಗಳಲ್ಲಿ ಕ್ರಮಿಸಿರುವ ಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಈ ಯಾತ್ರೆ ಮುಗಿದ ಬಳಿಕ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ 'ಹಾಥ್‌ ಸೇ ಹಾಥ್‌ ಜೋಡೋ' ಯಾತ್ರೆ ಆರಂಭವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+