ಗುರ್ಮೀತ್ ರಾಮ್ ರಹೀಮ್ ಸಿಂಗ್ ಈಗ ಖೈದಿ ನಂಬರ್ 1997

ಚಂಡೀಗಢ, ಆಗಸ್ಟ್ 27: ದೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಈಗ ಖೈದಿ ನಂಬರ್ 1997. ಶುಕ್ರವಾರ ಸಿಬಿಐ ನ್ಯಾಯಾಲಯ ರಾಮ್ ರಹೀಮ್ ಸಿಂಗ್ ನನ್ನು ಅಪರಾಧಿ ಎಂದು ಘೋಷಿಸಿತ್ತು. ನಂತರ ಆತನನ್ನು ಭದ್ರತೆಯ ಕಾರಣಕ್ಕೆ ಅಂಬಾಲ ಜೈಲಿನ ಬದಲಿಗೆ ರೋಹ್ಟಕ್ ಜೈಲಿಗೆ ಕರೆತರಲಾಗಿದ್ದು, ಸಿಂಗ್ ಈಗ ಇದೇ ಜೈಲಿನಲ್ಲಿದ್ದಾನೆ.

ರಾಮ್ ರಹೀಮ್ ನಿಗೆ ಯಾವುದೇ ವಿಐಪಿ ವ್ಯವಸ್ಥೆಗಳನ್ನು ಜೈಲಿನಲ್ಲಿ ಮಾಡಿಲ್ಲ. ಸಾಮಾನ್ಯ ಕೈದಿಯಂತೆಯೇ ಆತನನ್ನು ನೋಡಲಾಗುತ್ತಿದೆ ಎಂದು ಹರ್ಯಾಣ ಸರಕಾರ ಹೇಳಿದೆ.

Ram Rahim is Qaidi Number 1997

ಇಲ್ಲಿನ ಕಾರಾಗೃಹ ವಿಭಾಗದ ಡಿಜಿಪಿ ಕೆಪಿ ಸಿಂಗ್ ಶನಿವಾರ ಹೇಳಿಕೆ ನೀಡಿ, "ಆತ ಸಾಮನ್ಯ ಖೈದಿಗಳಂತೆ ನೆಲದ ಮೇಲೆಯೇ ಮಲಗಿದ್ದಾನೆ. ಆತ ರಾತ್ರಿ ಊಟ ಸೇವಿಸಿಲ್ಲ. ಆದರೆ ಮಲಗುವ ಮುನ್ನ ಹಾಲು ಕುಡಿದಿದ್ದಾನೆ," ಎಂದು ಹೇಳಿಕೆ ನೀಡಿದ್ದಾರೆ. ಆತನಿಗೆ ಜೈಲಿನಲ್ಲಿ ಬೇಯಿಸಿದ ರೊಟ್ಟಿ ಮತ್ತು ದಾಲ್ ನೀಡಲಾಗಿತ್ತು. ಆದರೆ ಅದನ್ನು ಆತ ಸೇವಿಸಿಲ್ಲ.

ಇನ್ನು ಆತನಿಗೆ ಜೈಲಿನಲ್ಲಿ ಯಾವುದೇ ಎಸಿ ವ್ಯವಸ್ಥೆ ಮಾಡಿಲ್ಲ. ಆತನ ಮೇಲೆ ಜೈಲಿನ ಕೈಪಿಡಿಯಂತೆ ಇಬ್ಬರು ಖೈದಿಗಳು ನಿಗಾ ಇಟ್ಟಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಮೀಮ್ ಸಿಂಗ್ ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+