ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯರನ್ನು ಗೌರವಿಸಿ, ನಿಮ್ಮ ಗ್ರಾಮ ಮರೆಯದಿರಿ: ರಾಮನಾಥ್ ಕೋವಿಂದ್ ಕಿವಿಮಾತು

|
Google Oneindia Kannada News

ನವದೆಹಲಿ, ಜುಲೈ 24: ಹೃತ್ಪೂರ್ವಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ ರಾಷ್ಟ್ರವನ್ನುದ್ದೇಶಿಸಿ ವಿದಾಯದ ಭಾಷಣ ಮಾಡಿದರು. ತಮ್ಮ ಮೂಲ ಸ್ಥಳದ ಬಗ್ಗೆ, ಹಿರಿಯರ ಬಗ್ಗೆ, ಸಂಸ್ಕೃತಿಯ ಬಗ್ಗೆ ಇಂದಿನ ತಲೆಮಾರಿನ ಯುವಜನರು ಗೌರವ ಇಟ್ಟುಕೊಳ್ಳಬೇಕು ಎಂದು ಈ ವೇಳೆ ಕೋವಿಂದ್ ಕರೆ ನೀಡಿದರು.

ಹಾಗೆಯೇ, ತಮ್ಮ ಜೀವನದ ಸ್ಮರಣೀಯ ಕ್ಷಣಗಳನ್ನೂ ಅವರು ಇದೇ ವೇಳೆ ಮೆಲುಕು ಹಾಕಿದರು.

"ರಾಷ್ಟ್ರಪತಿ ಆಗಿದ್ದ ವೇಳೆಯಲ್ಲಿ ನನ್ನ ಊರಿಗೆ ಹೋಗಿ ನನ್ನ ಶಾಲೆಯ ಹಿರಿಯ ಶಿಕ್ಷಕರ ಪಾದ ಸ್ಪರ್ಶಿಸಿ ಅವರ ಆಶೀರ್ವಾದ ಪಡೆದ ಘಟನೆ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದೆನಿಸಿದೆ" ಎಂದು ರಾಮನಾಥ್ ಕೋವಿಂದ್ ಇದೇ ವೇಳೆ ಹೇಳಿದರು.

ವಿಮಾನದಲ್ಲಿ ಪ್ರಯಾಣಿಕನ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲೆವಿಮಾನದಲ್ಲಿ ಪ್ರಯಾಣಿಕನ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲೆ

"ಐದು ವರ್ಷಗಳ ಹಿಂದೆ ನೀವೇ ಆರಿಸಿ ಕಳುಹಿಸಿದ ಜನ ಪ್ರತಿನಿಧಿಗಳ ಮೂಲಕ ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದೆ. ಇವತ್ತು ನನ್ನ ಅವಧಿ ಮುಗಿಯುತ್ತಿದೆ. ನಿಮಗೆ ಹಾಗೂ ನಿಮ್ಮ ಜನಪ್ರತಿನಿಧಿಗಳಿಗೆ ನಾನು ಕೃತಜ್ಞತೆ ಹೇಳಬಯಸುತ್ತೇನೆ. ನನ್ನ ಅವಧಿಯಲ್ಲಿ ಸಮಾಜದ ಎಲ್ಲಾ ವರ್ಗಗಳಿಂದ ಸಂಪೂರ್ಣ ಸಹಕಾರ, ಬೆಂಬಲ ಮತ್ತು ಆಶೀರ್ವಾದ ಸಿಕ್ಕಿತು" ಎಂದರು.

Ram Nath Kovind Addresses Nation on Last Day as The President

ಯುವಜನರಿಗೆ ಸಲಹೆ
"ನಮ್ಮ ಮೂಲದ ಜೊತೆ ಜೋಡಿತಗೊಳ್ಳುವುದು ನಮ್ಮ ಭಾರತೀಯ ಸಂಸ್ಕೃತಿಯ ವಿಶೇಷತೆ. ಈಗಿನ ಯುವ ತಲೆಮಾರಿನವರು ಇದೇ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು. ತಮ್ಮ ಮೂಲ ಗ್ರಾಮ, ಪಟ್ಟಣ ಮತ್ತು ತಮ್ಮ ಶಾಲೆ ಹಾಗು ಶಿಕ್ಷಕರನ್ನು ಮರೆಯಬಾರದು" ಎಂದು ರಾಮನಾಥ್ ಕೋವಿಂದ್ ಹೇಳಿದರು.

ನಮ್ಮ ದೈನಂದಿನ ಜೀವನದಲ್ಲಿ ಪ್ರಕೃತಿಯ ರಕ್ಷಣೆಗೆ ನಿಗಾ ವಹಿಸಬೇಕು. ಇತರ ಜೀವಿಗಳನ್ನೂ ಪ್ರೀತಿಸುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಸಂಸತ್‌ನಲ್ಲಿ ಭಾಷಣ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿನ್ನೆ ಶನಿವಾರ ಸಂಸತ್ ಉದ್ದೇಶಿಸಿಯೂ ಭಾಷಣ ಮಾಡಿದರು. ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದರೆ ರಾಜಕೀಯ ಪಕ್ಷಗಳು ಜನರ ಕಲ್ಯಾಣ ದೃಷ್ಟಿಯಿಂದ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದರು.

Ram Nath Kovind Addresses Nation on Last Day as The President

ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಸಂಸದರನ್ನುದ್ದೇಶಿಸಿ ವಿದಾಯ ಭಾಷಣ ಮಾಡಿದ ಅವರು, ಪ್ರತಿಭಟನೆ ಹೆಸರಲ್ಲಿ ಅತಿರೇಕದ ವರ್ತನೆ ತೋರಬಾರದೆಂದು ಕಿವಿಮಾತು ಹೇಳಿದರು.

"ಜನರಿಗೆ ವಿರೋಧಿಸಲು ಹಕ್ಕು ಇದೆ. ತಮ್ಮ ಉದ್ದೇಶ ಸಾಕಾರಕ್ಕೆ ಸರಕಾರದ ಮೇಲೆ ಒತ್ತಡ ಹಾಕುವ ಹಕ್ಕೂ ಇದೆ. ಆದರೆ, ಅವರ ಪ್ರತಿಭಟನೆಯು ಗಾಂಧಿ ಮಾದರಿಯದ್ದಾಗಿರಬೇಕು" ಎಂದು ಸಲಹೆ ನೀಡಿದ್ದರು.

ಈ ಬಾರಿಯ ಸಂಸದೀಯ ಅಧಿವೇಶನದಲ್ಲಿ ವಿಪಕ್ಷಗಳ ಸದಸ್ಯರು ಎರಡೂ ಸದನಗಳಲ್ಲಿ ಗಲಾಟೆ, ಗದ್ದಲ ಸೃಷ್ಟಿಸುವುದು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಮಾತುಗಳನ್ನು ಹೇಳಿದ್ದರು.

ನಿನ್ನೆ ಶನಿವಾರ ರಾಮನಾಥ್ ಕೋವಿಂದ್ ಅವರಿಗೆ ವಿದಾಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪಾಲ್ಗೊಂಡಿದ್ದರು.

ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿ
ರಾಮನಾಥ್ ಕೋವಿಂದ್ 2017ರಲ್ಲಿ ಭಾರತದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಈಗ ಅವರ ಸ್ಥಾನವನ್ನು ದ್ರೌಪದಿ ಮುರ್ಮು ತುಂಬುತ್ತಿದ್ದಾರೆ. ದಲಿತ ಸಮುದಾಯದ ಇಬ್ಬರು ವ್ಯಕ್ತಿಗಳು ಸತತವಾಗಿ ರಾಷ್ಟ್ರಪತಿಗಳಾಗುತ್ತಿರುವುದು ಇದೇ ಮೊದಲು.

ಜುಲೈ 25ರಂದು ನೂತನ ರಾಷ್ಟ್ರಪತಿ ದ್ರೌಪದಿ ಪ್ರಮಾಣ ವಚನಜುಲೈ 25ರಂದು ನೂತನ ರಾಷ್ಟ್ರಪತಿ ದ್ರೌಪದಿ ಪ್ರಮಾಣ ವಚನ

ಕೋವಿಂದ್ ಅವರ ಅವಧಿ ಇಂದು ಭಾನುವಾರ ಮುಕ್ತಾಯವಾಗುತ್ತದೆ. ಬುಡಕಟ್ಟು ಸಮುದಾಯದ ಮುರ್ಜು ನಾಳೆ ಜುಲೈ ೨೫ರಂದು ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ದ್ರೌಪದಿ ಮುರ್ಮು ನಿರಾಯಾಸ ಗೆಲುವು ಸಾಧಿಸಿದ್ದರು.

Recommended Video

Virat Kohli Instagramನಲ್ಲೇ ಇಷ್ಟೊಂದು ಹಣ ದುಡಿಯುತ್ತಾರಾ ? |*Cricket | OneIndia Kannada

ಶಾಸಕಿ, ಸಚಿವೆ, ರಾಜ್ಯಪಾಲೆಯಾಗಿ ಕೆಲಸ ಮಾಡಿರುವ ದ್ರೌಪದಿ ದೇಶದ ರಾಷ್ಟ್ರಪತಿಯಾದ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎನಿಸಿದ್ದಾರೆ. ಹೀಗಾಗಿ, ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಸಾಲಿನಲ್ಲೂ ಕೆಲ ಪಕ್ಷಗಳು ಮುರ್ಮುಗೆ ಬೆಂಬಲ ನೀಡಿದ್ದವು

(ಒನ್ಇಂಡಿಯಾ ಸುದ್ದಿ)

English summary
Ram Nath Kovind has made speech addressing the genereal public in his last day as the President of India. He called youth to be attached to their roots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X