Ram Mandir: ವಿಶ್ವದ ಅತೀ ಉದ್ದದ ಅಗರಬತ್ತಿಯಿಂದ ಬೆಳಗಿದ ವಿಡಿಯೋ ವೈರಲ್‌

ಉತ್ತರಪ್ರದೇಶ, ಜನವರಿ, 17: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಜನವರಿ 22ಕ್ಕೆ ನಡೆಯಲಿದೆ. ಇದೇ ಕ್ಷಣಕ್ಕಾಗಿ ಇಡೀ ದೇಶವೆ ಕಾತರದಿಂದ ಕಾಯುತ್ತಿದೆ. ಇನ್ನು ಇಲ್ಲಿನ ರಾಮ ಮಂದಿರವನ್ನು ದೈವಿಕ ಸುಗಂಧದಿಂದ ತುಂಬಲು 108 ಅಡಿ ಉದ್ದದ ಅಗರಬತ್ತಿಯಿಂದ ಬೆಳಗಿಸಲಾಗಿದ್ದು, ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಇದನ್ನು ಎಲ್ಲಿಂದ ತರಲಾಗಿದೆ ಹಾಗೂ ಮಹತ್ವ ಏನೆಂದು ತಿಳಿಯಿರಿ.

ಈ 108 ಅಡಿ ಉದ್ದದ ಅಗರಬತ್ತಿಯನ್ನು ಗುಜರಾತ್‌ನಿಂದ ಕಳುಹಿಸಲಾಗಿದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಮಹಾರಾಜ್ ಅವರ ಸಮ್ಮುಖದಲ್ಲಿ ಈ ಬೃಹತ್ ಅಗರಬತ್ತಿಯನ್ನು ಬೆಳಗಿಸಲಾಯಿತು. ಎಎನ್‌ಐ ಹಂಚಿಕೊಂಡಿರುವ ಈ ವೀಡಿಯೊದಲ್ಲಿ ಭಕ್ತರು ಅಗರಬತ್ತಿಯನ್ನು ಬೆಳಗಿಸುವಾಗ ಜಯ್ ಶ್ರೀ ರಾಮ್ ಎನ್ನುವ ಘೋಷಣೆಯನ್ನು ತೋರಿಸಲಾಗಿದೆ. ಉದ್ಘಾಟನೆಗೆ ಒಂದು ವಾರ ಮುಂಚಿತವಾಗಿ ಅಯೋಧ್ಯೆಗೆ ಬರಲು ಆರಂಭಿಸಿದ ವಿವಿಧ ಉಡುಗೊರೆಗಳಲ್ಲಿ 108 ಅಡಿ ಉದ್ದದ ಧೂಪದ್ರವ್ಯವೂ ಕೂಡ ಸೇರಿದೆ.

Ram Mandir: Worlds longest incense stick video goes viral

2024ರ ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಾಣವಾದ ರಾಮ ಮಂದಿರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಭವ್ಯ ಸಮಾರಂಭದಲ್ಲಿ ಉದ್ಘಾಟನೆ ಆಗಲಿದೆ. ಇದೇ ಕ್ಷಣಕ್ಕಾಗಿ ಇಡೀ ದೇಶವೇ ತುದಿಗಾಲಲ್ಲಿ ಕಾಯುತ್ತಿದೆ.

ನೇಪಾಳದ ಅಂಚೆ ಚೀಟಿ ವೈರಲ್‌: ನೇಪಾಳದ ಅಂಚೆ ಚೀಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಇದು ಚರ್ಚೆಗಳಿಗೆ ಗ್ರಾಸವಾಗಿದೆ. ಹಾಗಾದರೆ ಈ ಅಂಚೆ ಚೀಟಿ ಹಿಂದಿರುವ ಇತಿಹಾಸ ಎಂಥಹದ್ದು ಅಂತೀರಾ ಇಲ್ಲಿದೆ ನೋಡಿ ಇಂಟರೆಸ್ಟಿಂಗ್‌ ಮಾಹಿತಿ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿರುವ ಅಂಚೆ ಚೀಟಿಯನ್ನು 1967ರಲ್ಲಿ ನೇಪಾಳದಿಂದ ಬಿಡುಗಡೆ ಮಾಡಲಾಗಿದ್ದು, 57 ವರ್ಷಗಳ ಹಿಂದೆಯೇ ರಾಮಮಂದಿರ ನಿರ್ಮಾಣದ ದಿನಾಂಕವನ್ನು ನಮೂದಿಸಲಾಗಿತ್ತು ಎನ್ನುವ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. ಈ ಅಪರೂಪದ ಅಂಚೆ ಚೀಟಿ ಲಕ್ನೋದ ಅಶೋಕ್ ಕುಮಾರ್ ಬಳಿ ಇದೆ. ಅವರು ಅದನ್ನು ತಮ್ಮ "ದಿ ಲಿಟಲ್ ಮ್ಯೂಸಿಯಂ"ನಲ್ಲಿ ಇಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಅಂಚೆ ಚೀಟಿಯನ್ನು ಅಪರೂಪ ಎಂದು ಕರೆಯಲಾಗುತ್ತಿದೆ. ಏಕೆಂದರೆ ಅದರ ಹಿಂದೆ ರಹಸ್ಯವೊಂದು ಅಡಗಿದೆ. ವಾಸ್ತವವಾಗಿ, 1967ರಲ್ಲಿ ಬಿಡುಗಡೆಯಾದ ಈ ಅಂಚೆ ಚೀಟಿಯನ್ನು ಭಗವಾನ್ ರಾಮ ಮತ್ತು ಸೀತೆಗೆ ಸಮರ್ಪಿಸಲಾಗಿದೆ. ಇದರಲ್ಲಿ ಪ್ರಾಸಂಗಿಕವಾಗಿ ರಾಮ ಮಂದಿರದ ಪ್ರತಿಷ್ಠಾಪನೆಯ ವರ್ಷವನ್ನು ನಮೂದಿಸಲಾಗಿದೆ. 15 ಪೈಸೆಯ ಈ ಅಂಚೆ ಚೀಟಿಯ ಮೇಲೆ ರಾಮ ನವಮಿ 2024ಅನ್ನು ಬರೆಯಲಾಗಿದೆ.

ಅಂಚೆ ಚೀಟಿಯನ್ನು 1967ರಲ್ಲಿ ನೇಪಾಳದಲ್ಲಿ ಬಿಡುಗಡೆ ಮಾಡಲಾಯಿತು ಎಂದು ಲಿಟಲ್ ಮ್ಯೂಸಿಯಂನ ಮಾಲೀಕ ಅಶೋಕ್ ಕುಮಾರ್ ವರದಿಯಲ್ಲಿ ತಿಳಿಸಿದ್ದಾರೆ. ಇದರಲ್ಲಿ ಶ್ರೀ ರಾಮ, ಸೀತಾಮಾತೆ ಚಿತ್ರವಿದೆ. ಇದರ ಮೇಲೆ 'ರಾಮ ನವಮಿ 2024' ಎಂದು ಬರೆಯಲಾಗಿದ್ದು, ಏಪ್ರಿಲ್ 18, 1967ರಂದು ರಾಮನವಮಿಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+