Ram Mandir Inauguration: ಈ ಸಮುದಾಯದ ಜನ 500 ವರ್ಷಗಳ ನಂತರ ಪೇಟ, ಚಪ್ಪಲಿಯನ್ನು ಹಾಕುವರು- ಯಾಕೆ ಗೊತ್ತಾ?
ಅಯೋಧ್ಯೆ ಡಿಸೆಂಬರ್ 29: ಅಯೋಧ್ಯೆಯ ಸುತ್ತಮುತ್ತಲಿನ 105 ಹಳ್ಳಿಗಳಲ್ಲಿ ವಾಸಿಸುವ ಸೂರ್ಯವಂಶಿ ಕ್ಷತ್ರಿಯ ಸಮುದಾಯದ 1.5 ಲಕ್ಷಕ್ಕೂ ಹೆಚ್ಚು ಜನರು 500 ವರ್ಷಗಳ ನಂತರ ಜನವರಿ 22 ರಂದು ಪೇಟ ಮತ್ತು ಪಾದರಕ್ಷೆಗಳನ್ನು ಧರಿಸಲಿದ್ದಾರೆ.
ರಾಮಮಂದಿರವನ್ನು ಧ್ವಂಸಗೊಳಿಸಿದಾಗ ಸಮುದಾಯದ ಜನರು ರಾಮಮಂದಿರವನ್ನು ಮರುನಿರ್ಮಾಣ ಮಾಡುವವರೆಗೆ ಪೇಟ ಮತ್ತು ಚಪ್ಪಲಿಗಳನ್ನು ಧರಿಸುವುದಿಲ್ಲ ಮತ್ತು ಛತ್ರಿಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಸದ್ಯ ಅಯೋಧ್ಯೆಯಲ್ಲಿ ಭವ್ಯವಾದ ದೇವಾಲಯವು ಪೂರ್ಣಗೊಳ್ಳುತ್ತಿರುವ ಕಾರಣ ಅವರೆಲ್ಲರೂ ಪೇಟ, ಪಾದರಕ್ಷೆ ಹಾಗೂ ಛತ್ರಿಯನ್ನು ಬಳಸಲಿದ್ದಾರೆ.

ಈ ಸಮುದಾಯ ಅಯೋಧ್ಯೆ ಮತ್ತು ಬಸ್ತಿ ಜಿಲ್ಲೆಗಳಲ್ಲಿ 105 ಹಳ್ಳಿಗಳಲ್ಲಿ ನೆಲೆಸಿದೆ. ಅವರೆಲ್ಲರೂ ರಾಮನನ್ನು ತಮ್ಮ ಉತ್ತರಾಧಿಕಾರಿಗಳೆಂದು ನಂಬುತ್ತಾರೆ. 2019ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ವಿವಾದಿತ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿದ್ದರಿಂದ ಈ ಎಲ್ಲಾ ಗ್ರಾಮಸ್ಥರು ಈ ಅದ್ಬುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ರಾಮ ಮಂದಿರವನ್ನು ಮರುನಿರ್ಮಾಣ ಮಾಡುವವರೆಗೆ ಪೇಟ ಮತ್ತು ಚರ್ಮದ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ರಾಮನ ಮನೆ ನಾಶವಾದಾಗ ಅವರಿಗೆ ಒಳ್ಳೆಯ ಬಟ್ಟೆ ಮತ್ತು ಪಾದರಕ್ಷೆಗಳನ್ನು ಧರಿಸುವ ಹಕ್ಕಿಲ್ಲ ಎಂದು ಅವರು ನಂಬಿದ್ದರು. ಈಗಾಗಲೇ ಹಳ್ಳಿಗಳಲ್ಲಿ 400 ಕ್ಕೂ ಹೆಚ್ಚು ಪೇಟಗಳನ್ನು ವಿತರಿಸಲಾಗಿದೆ. ತಮ್ಮ ಪೂರ್ವಜರ ಪ್ರತಿಜ್ಞೆಗಳನ್ನು ಅನುಸರಿಸುತ್ತಿರುವ ಜನ ರಾಮಮಂದಿರ ಉದ್ಘಾಟನೆಯ ದಿನದಂದು ಪೇಟಗಳನ್ನು ಧರಿಸಲಿದ್ದಾರೆ.
ಜನವರಿ 22 ರಂದು ನಡೆಯುವ ಸಮಾರಂಭವು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಭವ್ಯ ಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪನೆಗೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ನೂರಾರು ಜನರು ಪಾಲ್ಗೊಳ್ಳಲಿದ್ದಾರೆ. ಟ್ರಸ್ಟ್ ದೇಶಾದ್ಯಂತ ಸುಮಾರು 4000 ಸಂತರನ್ನು ಆಹ್ವಾನಿಸಿದೆ. ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದೆ. ಭಾರತದಾದ್ಯಂತ ಹಿಂದೂ ದೇವಾಲಯಗಳು ಮತ್ತು ವ್ಯಕ್ತಿಗಳು ಸಹ ಈ ವಿಶೇಷ ದಿನಕ್ಕಾಗಿ ಎದುರುನೋಡುತ್ತಿದ್ದಾರೆ.
ರಾಮಮಂದಿರ ಉದ್ಘಾಟನೆಗೂ ಮುಂಚಿತವಾಗಿ ರಾಮನಿಗೆ ಉಡುಗೊರೆಗಳು ದೇಶದೆಲ್ಲೆಡೆಯ ದೇವಸ್ಥಾನಗಳಿಂದ ಹಾಗೂ ವ್ಯಕ್ತಿಗಳಿಂದ ಬರುವ ಸಾಧ್ಯತೆ ಇದೆ. ಈ ಸುಸಂದರ್ಭದಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 30 ರಂದೇ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಆಗಮಿಸಲಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕಾರ್ಯಕ್ರಮದ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಲು ಇಂದು ದೇವಾಲಯದ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.
ದೇವಾಲಯ ಉದ್ಘಾಟನೆಗೂ ಮುನ್ನ ಭಾರತದಾದ್ಯಂತ ಇರುವ ದೇವಾಲಯಗಳು ಮತ್ತು ಟ್ರಸ್ಟ್‌ಗಳು ರಾಮ್ ಲಲ್ಲಾಗೆ ಉಡುಗೊರೆಗಳನ್ನು ಕಳುಹಿಸುತ್ತಿವೆ. ದೇವರಿಗೆ ಬಡಿಸುವ ಪ್ರಸಾದದ ಪದಾರ್ಥಗಳಿಂದ ಹಿಡಿದು ವಿಗ್ರಹವನ್ನು ಅಲಂಕರಿಸುವ ಬಟ್ಟೆಗಳವರೆಗೆ ಎಲ್ಲವನ್ನೂ ದೇಶಾದ್ಯಂತ ಮತ್ತು ನೆರೆಯ ನೇಪಾಳದಿಂದ ಅಯೋಧ್ಯೆಗೆ ಕಳುಹಿಸಲು ಸಿದ್ಧತೆಗಳು ನಡೆದಿವೆ.












Click it and Unblock the Notifications