ಅಯೋಧ್ಯೆ ರಾಮ ಮಂದಿರ ನಿರ್ಮಾಣ: ಅತಿಹೆಚ್ಚು ದೇಣಿಗೆ ನೀಡಿದವರ ಪಟ್ಟಿ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಾತ್ಯಾತೀತವಾಗಿ ದೇಣಿಗೆ ಹರಿದು ಬರುತ್ತಿದ್ದು, ವಿಶ್ವ ಹಿಂದೂ ಪರಿಷತ್ ಇದರ ನೇತೃತ್ವವನ್ನು ವಹಿಸಿಕೊಂಡಿದೆ.
ಕರ್ನಾಟಕದಲ್ಲಿ ಸಂಘ ಪರಿವಾರದ ಸದಸ್ಯರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಈ ಸಂಬಂಧ ಭೇಟಿಯಾಗಿದ್ದರು. ಈ ಇಬ್ಬರು ಎಷ್ಟು ದೇಣಿಗೆ ನೀಡಿದ್ದಾರೆ ಎನ್ನುವ ವಿಚಾರ ಸದ್ಯ ಬಹಿರಂಗವಾಗಿಲ್ಲ.
ಕೇವಲ 15 ದಿನಗಳಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹರಿದು ಬಂದ ದೇಣಿಗೆ ಮೊತ್ತದ ಲೆಕ್ಕ ಹೀಗಿದೆ
ರಾಮ ಜನ್ಮಭೂಮಿ ಟ್ರಸ್ಟಿನ ಸದಸ್ಯ ಮತ್ತು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮಂಗಳವಾರ (ಫೆ 9) ಹೇಳಿಕೆಯನ್ನು ನೀಡಿದ್ದು, "ಜನವರಿ ಹದಿನೈದರಿಂದ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ್ದೇವೆ. ಜನರ ಪ್ರತಿಕ್ರಿಯೆ ನೋಡಿ ಅತೀವ ಸಂತಸವಾಗುತ್ತಿದೆ"ಎಂದು ಹೇಳಿದ್ದಾರೆ.
ಅಚ್ಚರಿ: ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕ್ರಿಶ್ಚಿಯನ್ನರ ಹಣ!
"ಎಲ್ಲಾ ವರ್ಗದ ಜನರು ನಿಧಿ ಅಭಿಯಾನಕ್ಕೆ ಸಹಕರಿಸುತ್ತಿದ್ದಾರೆ. ಹಿಂದೂ ಸಮಾಜದ ಒಗ್ಗಟ್ಟು ಮತ್ತು ಅಭಿವೃದ್ದಿಗೆ ನಿಧಿ ಅಭಿಯಾನ ಒಂದು ಕಾರಣವಾಗಲಿದೆ"ಎಂದು ಹೇಳಿರುವ ಪೇಜಾವರ ಶ್ರೀಗಳು, ಫೆಬ್ರವರಿ ಒಂಬತ್ತರ ವರೆಗೆ ಒಟ್ಟು ಸಂಗ್ರಹದವಾದ ಮೊತ್ತದ ಬಗ್ಗೆ ಹೇಳಿದ್ದಾರೆ. ಅತಿಹೆಚ್ಚು ದೇಣಿಗೆ ನೀಡಿದವರ ಪಟ್ಟಿ:

ಪೇಜಾವರ ಶ್ರೀ
"ರಾಮ ಮಂದಿರ ನಿರ್ಮಾಣಕ್ಕೆ ಒಟ್ಟಾರೆಯಾಗಿ 1,100 ಕೋಟಿ ರೂಪಾಯಿ ವೆಚ್ಚ ತಗುಲಲಿದೆ. ಆದರೆ ನಾವು ಯಾವುದೇ ಗುರಿಯನ್ನು ಇಟ್ಟುಕೊಂಡಿಲ್ಲ. ಇದುವರೆಗೆ ಅಂದರೆ 25 ದಿನಗಳಲ್ಲಿ ಒಂದು ಸಾವಿರ ಕೋಟಿಗಿಂತಲೂ ಹೆಚ್ಚು ನಿಧಿ ಸಂಗ್ರಹವಾಗಿದೆ. ದಕ್ಷಿಣ ಭಾರತದಲ್ಲಿ ನಿಧಿ ಸಂಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದಿಂದ ಎಂಬತ್ತು ಕೋಟಿ ಸಂಗ್ರಹವಾಗಿದೆ"ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಆಧ್ಯಾತ್ಮಕ ಮುಖಂಡರೊಬ್ಬರೇ ಹನ್ನೊಂದು ಕೋಟಿ ನೀಡಿದ್ದಾರೆ.

ಸದ್ಯ ಲಭ್ಯವಿರುವ ಪಟ್ಟಿ
ಗುಜರಾತ್ ಮೂಲದ ಆಧ್ಯಾತ್ಮಕ ಮುಖಂಡ ಮೊರಾರಿ ಬಾಪು - 11.3 ಕೋಟಿ
ಸ್ವಾಮಿ ಗೋವಿಂದ ದೇವ್ ಟ್ರಸ್ಟ್, ಗುಜರಾತ್ - 8 ಕೋಟಿ
ಗೋವಿಂದ ಧೋಲಾಕಿಯಾ, ವಜ್ರದ ವ್ಯಾಪಾರಿ - 11 ಕೋಟಿ
ಉದ್ಯಮಿ ಮೋಹನ್ ಸೇರಿ ಕಂಚಿ ಕಾಮಕೋಟಿ ಮಠ - 6 ಕೋಟಿ
ಮಹೇಶ್ ಕಬೂತರ್ವಾಲ , ಉದ್ಯಮಿ - 5 ಕೋಟಿ
ಸುರೇಂದ್ರ ಸಿಂಗ್, ಮಾಜಿ ಶಾಸಕ - 1.11 ಕೋಟಿ

ಸಂಸದ, ಮಾಜಿ ಕ್ರಿಕೆಟಿಗ ಗೌತಂ ಗಂಭೀರ್
ಶಿವಸೇನೆ - 1 ಕೋಟಿ
ರಿಷಿಕೇಶದ ಸ್ವಾಮಿ ಶಂಕರ್ ದಾಸ್ - 1 ಕೋಟಿ
ಸಂಸದ, ಮಾಜಿ ಕ್ರಿಕೆಟಿಗ ಗೌತಂ ಗಂಭೀರ್ - 1 ಕೋಟಿ
ರಾಜಸ್ಥಾನ ಮತ್ತು ಮಧ್ಯಪ್ರದೇಶದ ಅರವತ್ತು ಮಂದಿ - ತಲಾ 1 ಕೋಟಿ
ಪವನ್ ಕಲ್ಯಾಣ್ , ನಟ - 30 ಲಕ್ಷ
ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ - 11 ಲಕ್ಷ

ಡಾ.ವೀರೇಂದ್ರ ಹೆಗ್ಗಡೆ
ಲವ್ ಜೀ ಬಾಧಶಾ - 1 ಕೋಟಿ
ರಾಮನಾಥ್ ಕೋವಿಂದ್, ರಾಷ್ಟ್ರಪತಿ - 5 ಲಕ್ಷ
ರವಿಶಂಕರ್ ಪ್ರಸಾದ್, ಕೇಂದ್ರ ಸಚಿವರು - 11ಲಕ್ಷ
ಜೆಡಿಎಸ್ ಶಾಸಕ ಆರ್ ಮಂಜುನಾಥ್ - 25 ಲಕ್ಷ
ಡಾ.ವೀರೇಂದ್ರ ಹೆಗ್ಗಡೆ - 25 ಲಕ್ಷ
ಅನುರಾಗ್ ರಸ್ತೋಗಿ, ಉದ್ಯಮಿ - 33 ಕೆಜಿಯ ಬೆಳ್ಳಿಯ ಇಟ್ಟಿಗೆ