Get Updates
Get notified of breaking news, exclusive insights, and must-see stories!

ರಾಖಿ ಸಾವಂತ್ ಟ್ರೈಬಲ್ ಲುಕ್‌ಗೆ ಆದಿವಾಸಿ ಸಮುದಾಯ ಕೆಂಗಣ್ಣು; ಎಫ್‌ಐಆರ್ ದಾಖಲು

ರಾಂಚಿ, ಏ. 21: ಸದಾ ಏನಾದರೊಂದು ವಿವಾದಗಳಿಗೆ ಗುರಿಯಾಗುತ್ತಲೇ ಇರುವ ಅಥವಾ ವಿವಾದ ಸೃಷ್ಟಿಸುತ್ತಲೇ ಇರುವ ನಟಿ ಕಮ್ ಡ್ಯಾನ್ಸರ್ ರಾಖಿ ಸಾವಂತ್ ಇದೀಗ ಕೆಲ ಬುಡಕಟ್ಟು ಸಮುದಾಯಗಳ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆದಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಹಾಕಲಾಗಿದ್ದ ಇವರ ಒಂದು ವಿಡಿಯೋ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಈ ವಿಡಿಯೋದಲ್ಲಿ ರಾಖಿ ಸಾವಂತ್ (Rakhi Sawant) ಅವರು ಅಶ್ಲೀಲ ಉಡುಗೆ ತೊಟ್ಟಿದ್ದಾರೆ. ಇದು ಟ್ರೈಬಲ್ ಲುಕ್ ಎಂದು ಹೇಳಿ ಬುಡಕಟ್ಟು ಸಮುದಾಯದವರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಬುಡಕಟ್ಟು ಸಮುದಾಯದವರ ಸಾಂಪ್ರದಾಯಿಕ ತೊಡುಗೆ ಹೆಸರಿನಲ್ಲಿ ಅಶ್ಲೀಲ ಉಡುಗೆ ಹಾಕಿದ ರಾಖಿ ಸಾವಂತ್ ಅವರಿಂದ ತಮ್ಮ ಸಮುದಾಯಗಳವರ ಭಾವನೆಗೆ ಧಕ್ಕೆ ಆಗಿದೆ ಎಂದು ಬುಡಕಟ್ಟು ಸಂಘಟನೆಯೊಂದು ದೂರು ನೀಡಿದೆ. ಈ ಸಂಬಂಧ ಜಾರ್ಖಂಡ್‌ನ ಕೇಂದ್ರೀಯ ಸಾರಣ ಸಮಿತಿಯಿಂದ ಎಫ್‌ಐಆರ್ ದಾಖಲಾಗಿದೆ ಎಂದು ಇಂಡಿಯಾ ಡಾಟ್ ಕಾಮ್ ವೆಬ್‌ಸೈಟ್‌ನಲ್ಲಿ ವರದಿಯಾಗಿದೆ.

"ರಾಖಿ ಸಾವಂತ್ ಅವರು ಆದಿವಾಸಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಎಸ್‌ಸಿ ಎಸ್‌ಟಿ ಕಾಯ್ದೆ ಅಡಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು... ಬುಡಕಟ್ಟು ಸಮುದಾಯದ ಮುಂದೆ ರಾಖಿ ಸಾವಂತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರತಿಭಟನೆ ಮುಂದುವರಿಸಲಾಗುತ್ತದೆ" ಎಂದು ಕೇಂದ್ರೀಯ ಸಾರಣ ಸಮಿತಿ ಎಚ್ಚರಿಕೆ ನೀಡಿರುವುದು ತಿಳಿದುಬಂದಿದೆ.

FIR filed as tribal community anguish over Rakhi Sawant tribal look

ವೈರಲ್ ಭಯಾನಿ ಎಂಬ ಮಾಧ್ಯಮವೊಂದರ ಇನ್ಸ್‌ಟಾಗ್ರಾಮ್ ಅಕೌಂಟ್‌ನಲ್ಲಿ ರಾಖಿ ಸಾವಂತ್ ಅವರ ಈ ವಿವಾದಾತ್ಮಕ ವಿಡಿಯೋ ಇತ್ತೀಚೆಗೆ ಪೋಸ್ಟ್ ಆಗಿತ್ತು. ರಾಖಿ ಸಾವಂತ್ ಆದಿವಾಸಿ ಸ್ಟೈಲ್ ಹೆಸರಲ್ಲಿ ಅಶ್ಲೀಲವಾಗಿ ಪೋಸ್ ಕೊಟ್ಟಿದ್ದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳಿಗೆ ಆಹಾರ ಒದಗಿಸಿದೆ. ರಾಖಿ ಸಾವಂತ್ ಅವರ ಫ್ಯಾಷನ್ ಟೇಸ್ಟ್ ಅನ್ನು ಮತ್ತೊಬ್ಬ ನಟಿ ಉರ್ಫಿ ಜಾವೇದ್ (Urfi Javed) ಅವರಿಗೆ ಕೆಲವರು ಹೋಲಿಸಿದ್ದಾರೆ.

"ರಾಖಿ ಸಾವಂತ್ ಉರ್ಫಿ ಜಾವೇದ್ ಅವರ ಪೂರ್ವಿಕಳು ಎಂಬುದು ಈಗ ಸ್ಪಷ್ಟ ಆಯಿತು" ಎಂದು ಒಬ್ಬರು ಬರೆದಿದ್ದಾರೆ. "ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ವಿವಾಹ ಮಹೋತ್ಸವಕ್ಕೆ ಹೋಗಲು ರಾಖಿ ಈ ರೀತಿ ಡ್ರೆಸ್ ಹಾಕಿದ್ದಾರಾ?" ಎಂದು ಮತ್ತೊಬ್ಬರು ಹಾಸ್ಯ ಮಾಡಿದ್ದಾರೆ.

FIR filed as tribal community anguish over Rakhi Sawant tribal look

ವಿವಾದಗಳ ರಾಣಿ ರಾಖಿ ಸಾವಂತ್:
1997ರಲ್ಲಿ ಚಿತ್ರರಂಗಕ್ಕೆ ಬಂದ ರಾಖಿ ಸಾವಂತ್ ಹಲವು ಬಾರಿ ವಿವಾದಗಳ ಕೇಂದ್ರ ಬಿಂದುವಾಗಿದ್ದಾರೆ. ಅದರಲ್ಲಿ ಕೆಲವು ಪ್ರಮುಖ ಘಟನೆಗಳೂ ಇವೆ. 2016ರಲ್ಲಿ ಅವರು ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿಯನ್ನು ಕೊಲೆಗಾರ ಎಂದು ಕರೆದಿದ್ದರು. ಇದರಿಂದ ಪ್ರಬಲ ವಾಲ್ಮೀಕಿ ಸಮುದಾಯ ರೊಚ್ಚಿಗೆದ್ದಿತ್ತು.

2006ರಲ್ಲಿ ರಾಖಿ ಸಾವಂತ್ ಮತ್ತು ಗಾಯಕ ಮೀಕಾ ಸಿಂಗ್ ಕಿಸ್ ಮಾಡುತ್ತಿರುವ ದೃಶ್ಯ ವೈರಲ್ ಆಗಿತ್ತು. ರಾಖಿ ಬರ್ತ್‌ಡೇ ಪಾರ್ಟಿ ಸಂದರ್ಭದಲ್ಲಿ ಈ ಘಟನೆ ಆಗಿತ್ತು. ಮೀಕಾ ಸಿಂಗ್ ದಿಢೀರನೇ ತನಗೆ ಕಿಸ್ ಕೊಟ್ಟರು ಎಂದು ರಾಖಿ ದೂರು ಕೊಟ್ಟಿದ್ದರು. ಆದರೆ, ರಾಖಿಯೇ ಮೊದಲು ಮುತ್ತಿಟ್ಟಿದ್ದು ಎಂದು ಮಿಕಾ ಹೇಳಿದ್ದರು. ಆ ವಿವಾದ ಹೆಚ್ಚು ದೂರ ಬೆಳೆಯಲಿಲ್ಲ.

FIR filed as tribal community anguish over Rakhi Sawant tribal look

ಬಾಯ್‌ಫ್ರೆಂಡ್ಸ್, ಮದುವೆ ಮತ್ತು ಡಿವೋರ್ಸ್:
ರಾಖಿ ಸಾವಂತ್ ಅವರು ನಾಲ್ವರು ವ್ಯಕ್ತಿಗಳ ಜೊತೆ ಅಫೇರ್ ಹೊಂದಿದ ವಿಚಾರ ಜಗಜ್ಜಾಹೀರಾಗಿದೆ. ಅಭಿಷೇಕ್ ಅವಸ್ತಿ, ಇಲೇಶ್ ಪರುಜನ್‌ವಾಲ, ದೀಪಕ್ ಕಲಾಲ್ ಮತ್ತು ರಿತೇಶ್ ಜೊತೆ ರಾಖಿ ರಿಲೇಶನ್‌ಶಿಪ್ ಇತ್ತು. ಇವರಲ್ಲಿ ರಿತೇಶ್ ಅವರನ್ನು ತಾನು ಮದುವೆಯಾಗಿರುವುದಾಗಿ ರಾಖಿ ಹೇಳಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಮುನ್ನ ಅವರು ತಮ್ಮ ಈ ರಹಸ್ಯ ಮದುವೆ ವಿಚಾರವನ್ನ ಬಹಿರಂಗಪಡಿಸಿದ್ದರು.

ಆದರೆ, ಇವರ ದಾಂಪತ್ಯ ಹೆಚ್ಚು ದಿನ ಉಳಿಯಲಿಲ್ಲ. ಬೇಗನೇ ವಿಚ್ಛೇದನ ಹೊಂದಿದರು. ರಿತೇಶ್ ನನ್ನನ್ನು ಬಹಳ ದುರುಪಯೋಗಿಸಿಕೊಂಡರು ಎಂದು ಡಿವೋರ್ಸ್ ಬಳಿಕ ರಾಖಿ ಅಲವತ್ತುಕೊಂಡರು.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+