ರಾಜ್ಯಸಭೆಯಲ್ಲಿಯೂ ಇಬಿಸಿ ಕೋಟಾ ಮಸೂದೆಗೆ ಅಂಗೀಕಾರ
ನವದೆಹಲಿ, ಜನವರಿ 09 : ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ.
ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಬುಧವಾರ ಮಸೂದೆ ಕುರಿತು ರಾಜ್ಯಸಭೆಯಲ್ಲಿ ವಿವಿರವಾದ ಚರ್ಚೆ ನಡೆಯಿತು. ಅಂತಿಮವಾಗಿ 165 ಮತಗಳ ಮೂಲಕ ಮಸೂದೆಯನ್ನು ಅಂಗೀಕಾರ ಮಾಡಲಾಯಿತು.

ಮಂಗಳವಾರ ಮೇಲ್ಜಾತಿ ಮೀಸಲು ವಿಧೇಯಕ ಲೋಕಸಭೆಯಲ್ಲಿ 323 ಮತಗಳೊಂದಿಗೆ ಅಂಗೀಕಾರವಾಗಿತ್ತು. ಇಂದು ರಾಜ್ಯಸಭೆಯಲ್ಲಿಯೂ ಅಂಗೀಕಾರವಾಗಿದ್ದು, ರಾಷ್ಟ್ರಪತಿಗಳಿಗೆ ಕಳುಹಿಸಿ ಕೊಡಲಾಗುತ್ತದೆ.
Parliament passes bill granting 10% quota to economically-weaker sections of general category
— ANI Digital (@ani_digital) January 9, 2019
Read @ANI Story | https://t.co/vbppt30ixq pic.twitter.com/Z02jRTbsWY
ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮೇಲ್ಜಾತಿ ಮೀಸಲು ವಿಧೇಯಕ ಅಂಗೀಕಾರಗೊಳ್ಳುವ ಮೂಲಕ ಸಾಮಾನ್ಯ ವರ್ಗದ ಬಡವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ಒದಗಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲು ಒಪ್ಪಿಗೆ ಸಿಕ್ಕಿದಂತಾಗಿದೆ.
ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಸಮುದಾಯಗಳನ್ನು ಹೊರತುಪಡಿಸಿ ಬ್ರಾಹ್ಮಣ, ರಜಪೂತ, ಠಾಕೂರ್, ಜಾಟ್, ಮರಾಠ, ಭೂಮಿಹಾರ್, ಕಾಪು, ಕಮ್ಮ ಸೇರಿದಂತೆ ವಿವಿಧ ಸಮುದಾಯಗಳಿಗೆ ಸಂವಿಧಾನ ತಿದ್ದುಪಡಿಯಿಂದಾಗಿ ಸಹಾಯಕವಾಗಲಿದೆ.
ಮಸೂದೆಗೆ ಒಪ್ಪಿಗೆ ಸಿಕ್ಕಿರುವುದರಿಂದ ಸಂವಿಧಾನದ 124ನೇ ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ. ಈ ಮಸೂದೆ ಸಂಸತ್‌ನಲ್ಲಿ ಪಾಸ್ ಆಗಿದ್ದು, ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಕಾನೂನು ಆಗಿ ಜಾರಿಗೆ ಬರಲಿದೆ.












Click it and Unblock the Notifications