ಅಪರೂಪದ ಸಂಸದೀಯ ಪಟು ಯೆಚೂರಿಗೆ ಭಾವಪೂರ್ಣ ವಿದಾಯ

Subscribe to Oneindia Kannada

ನವದೆಹಲಿ, ಆಗಸ್ಟ್ 11: ಗುರುವಾರ ರಾಜ್ಯಸಭೆಯ ಸದನ ಹಳೆಯ ನೆನಪುಗಳ ಮರುಕಳಿಕೆ, ಹೊಗಳಿಕೆ, ಹಾಸ್ಯ ಚಟಾಕಿ ಮತ್ತು ಕಣ್ಣೀರಿಗೆ ಸಾಕ್ಷಿಯಾಯಿತು. ಇದಕ್ಕೆ ಕಾರಣವಾಗಿದ್ದು ರಾಜ್ಯಸಭಾ ಸದಸ್ಯ ಸೀತಾರಾಮ್ ಯೆಚೂರಿಯವರ ನಿವೃತ್ತಿ.

ಕಲಾಪಗಳಿಗೆ ಸತತ ಗೈರಾಗುವ ಬಿಜೆಪಿ ಸಂಸದರಿಗೆ ಕಾದಿದೆ ಶಿಕ್ಷೆ!

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ರಾಜ್ಯಸಭಾ ಸದಸ್ಯರಾಗಿ ಇದೇ 18ಕ್ಕೆ ನಿವೃತ್ತರಾಗಲಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಗುರುವಾರ ಸದನದ ಎಲ್ಲಾ ಪಕ್ಷಗಳ ಸದಸ್ಯರು ಭಾವನಾತ್ಮಕ ಬೀಳ್ಕೊಡುಗೆ ನೀಡಿದರು.

ಅಹ್ಮದ್ ಪಟೇಲ್ ಗೆಲುವು ಪ್ರಶ್ನಿಸಿ ನ್ಯಾಯಲಯಕ್ಕೆ ಬಿಜೆಪಿ ದೂರು

ಯೆಚೂರಿ ಕುರಿತು ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಮತು ಯೆಚೂರಿ ನಡುವಿನ ಒಡನಾಟವನ್ನು ನೆನಪಿಸಿಕೊಂಡರು. "ಯೆಚೂರಿ ಮತ್ತು ನಾನು ವಿದ್ಯಾರ್ಥಿ ದಿನಗಳಿಂದ ಸಂಸತ್ತಿವರೆಗೂ ಒಟ್ಟಿಗೇ ಬೆಳೆದವರು. ಪ್ರತಿ ಚರ್ಚೆಯಲ್ಲೂ ಯೆಚೂರಿ ಸಂಸತ್ತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ; ತಮ್ಮ ಮಾತುಗಳಿಂದ ಅವರು ಸದನಸ ಚರ್ಚೆಯ ಮಟ್ಟವನ್ನು ಹೆಚ್ಚಿಸಿದ್ದಾರೆ," ಎಂದು ಹೊಗಳಿದರು.

ಯೆಚೂರಿ ಕಾಲೆಳೆದ ಜೇಟ್ಲಿ

ಯೆಚೂರಿ ಕಾಲೆಳೆದ ಜೇಟ್ಲಿ

ಮಾತಾಡುತ್ತಾ ತಮಾಷೆಗೆ ಯೆಚೂರಿ ಕಾಲೆಳೆದ ಅರುಣ್ ಜೇಟ್ಲಿ, "ಯೆಚೂರಿ ಯಾವತ್ತೂ ಸರ್ಕಾರದ ಭಾಗವಾಗಿರಲಿಲ್ಲ. ಹೀಗಾಗಿ ಜಾರಿ ಮಾಡಲು ಸಾಧ್ಯವಿಲ್ಲ ಆದರ್ಶಪ್ರಾಯ ಸಲಹೆಗಳನ್ನು ನೀಡಲು ಅವರಿಗೆ ಸಾಧ್ಯವಾಗುತ್ತಿತ್ತು," ಎಂದು ಕಿಚಾಯಿಸಿದರು.

 ಸಿಪಿಎಂನ ನಿಯಮಗಳೇಕೆ ಬದಲಾಗವುದಿಲ್ಲ

ಸಿಪಿಎಂನ ನಿಯಮಗಳೇಕೆ ಬದಲಾಗವುದಿಲ್ಲ

ಮೂರನೇ ಅವಧಿಗೆ ಯೆಚೂರಿಯವರನ್ನು ರಾಜ್ಯಸಭೆಗೆ ಆಯ್ಕೆ ಮಾಡದಿರಲು ಸಿಪಿಎಂ ನಿರ್ಧರಿಸಿರುವುದರ ಬಗ್ಗೆ ಗಮನ ಸೆಳೆದ ಸಮಾಜವಾದಿ ಪಾರ್ಟಿಯ ರಾಮ್ ಗೋಪಾಲ್ ಯಾದವ್ "ದೇಶದ ಸಂವಿಧಾನವೇ ತಿದ್ದುಪಡಿಯಾಗುತ್ತದೆ. ಸಿಪಿಎಂನ ನಿಯಮಗಳೇಕೆ ಬದಲಾಗವುದಿಲ್ಲ?," ಎಂದು ಪ್ರಶ್ನಿಸಿದರು.

 ನಾವು ನಿನ್ನನ್ನು ನೆನಪಿಸಿಕೊಳ್ಳುತ್ತೇವೆ

ನಾವು ನಿನ್ನನ್ನು ನೆನಪಿಸಿಕೊಳ್ಳುತ್ತೇವೆ

‘ಯೆಚೂರಿಯವರ ಪ್ರಖರತೆಯನ್ನು ಗಮನಿಸುತ್ತಿರು' ಎಂದು ಸಿಪಿಎಂನ ಹರಿಕಿಶನ್ ಸಿಂಗ್ ಸುರ್ಜಿತ್ ಹೇಳುತ್ತಿದ್ದ ಮಾತುಗಳನ್ನು ನೆನಪಿಸಿಕೊಂಡ ರಾಮ್ ಗೋಪಾಲ್ ಯಾದವ್ "ಯೆಚೂರಿ, ನಾವು ನಿನ್ನನ್ನು ನೆನಪಿಸಿಕೊಳ್ಳುತ್ತೇವೆ..." ಎನ್ನುತ್ತಿದ್ದತೆ ಭಾವನಾತ್ಮಕತೆಗೆ ಜಾರಿ ಮಾತು ನಿಲ್ಲಿಸಿದರು.

 ಯೆಚೂರಿ ರಾಷ್ಟ್ರೀಯ ಖಜಾನೆ

ಯೆಚೂರಿ ರಾಷ್ಟ್ರೀಯ ಖಜಾನೆ

‘ಯೆಚೂರಿ ರಾಷ್ಟ್ರೀಯ ಖಜಾನೆ. ತನ್ನ ಸದಸ್ಯರನ್ನು ಮೂರನೇ ಬಾರಿಗೆ ಸಿಪಿಎಂ ರಾಜ್ಯಸಭೆಗೆ ಆಯ್ಕೆಯ ಮಾಡುವುದನ್ನು ಏಕೆ ಒಪ್ಪುವುದಿಲ್ಲ!" ಎಂದು ವಿಸ್ಮಯ ವ್ಯಕ್ತಪಡಿಸಿದರು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಅಝಾದ್.

Ahmed Patel Reacts About Karnataka IT Raid Unprecedented Witch-Hunt Just To Win One Rajya Sabha Seat
 ಮರು ಆಯ್ಕೆ ಮಾಡದೆ ಚಾರಿತ್ರಿಕ ಪ್ರಮಾದ

ಮರು ಆಯ್ಕೆ ಮಾಡದೆ ಚಾರಿತ್ರಿಕ ಪ್ರಮಾದ

"ಜ್ಯೋತಿ ಬಸು ಅವರು ಪ್ರಧಾನಿ ಆಗಬಾರದು ಎಂದು ಆದೇಶ ಹೊರಡಿಸಿ ಸಿಪಿಎಂ ಚಾರಿತ್ರಿಕ ಪ್ರಮಾದ ಮಾಡಿತ್ತು. ಈಗ ರಾಜ್ಯಸಭೆಗೆ ಯಚೂರಿಯವರನ್ನು ಮರು ಆಯ್ಕೆ ಮಾಡದೆ ಇನ್ನೊಂದು ಚಾರಿತ್ರಿಕ ಪ್ರಮಾದವೆಸಗಿದೆ" ಎಂದು ಅಕಾಲಿದಳದ ನರೇಶ್ ಗುಜ್ರಾಲ್ ಹೇಳಿದರು.

ಹೀಗೆ ಇಂದಿನ ಕಾಲದಲ್ಲೂ ಎಲ್ಲಾ ಪಕ್ಷಗಳ ನಾಯಕರಿಂದ ಹೊಗಳಿಸಿಕೊಂಡು ರಾಜ್ಯಸಭೆಯಿಂದ ನಿರ್ಗಮಿಸಲು ಅಪ್ರತಿಮ ಸಂಸದೀಯಪಟು ಸೀತಾರಾಮ್ ಯೆಚೂರಿ ಸಿದ್ದವಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rajya Sabha yesterday bid an emotional farewell to CPM general secretary Sitaram Yechury. Yechury will be retiring from upper House of Parliament on August 18th.
Please Wait while comments are loading...