Get Updates
Get notified of breaking news, exclusive insights, and must-see stories!

ಡಿಆರ್‌ಡಿಒ 2-ಡಿಜಿ ಔಷಧಿ ಲೋಕಾರ್ಪಣೆ ಮಾಡಿದ ರಾಜನಾಥ್ ಸಿಂಗ್

ನವದೆಹಲಿ, ಮೇ 17: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸ್ (ಐಎನ್ಎಂಎಎಸ್), ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ (ಡಿಆರ್‌ಎಲ್) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಆಂಟಿ-ಕೋವಿಡ್ -19 ಚಿಕಿತ್ಸಕ ಔಷಧಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೋಕಾರ್ಪಣೆ ಮಾಡಿದರು.

ಮೊದಲ ಹಂತದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧಿಯ 10,000 ಡೋಸ್‌ಗಳನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದೆ. ರಾಜನಾಥ್ ಸಿಂಗ್ ಅವರ ಜೊತೆಯಲ್ಲಿ ಕೇಂದ್ರ ಆರೋ

Rajnath Singh Launches first batch of DRDOs 2DG medicine for treating Covid-19

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) 2020 ರ ಮೇ ತಿಂಗಳಲ್ಲಿ ಕೋವಿಡ್-19 ರೋಗಿಗಳಲ್ಲಿ 2-ಡಿಜಿ ಯ ಎರಡನೇ ಅಲೆಯ ಚಿಕಿತ್ಸೆಯ ಪ್ರಯೋಗಕ್ಕೆ ಅನುಮತಿ ನೀಡಿತ್ತು.

ಪ್ರಯೋಗದ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. 2-ಡಿಜಿ ಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳ ಹೆಚ್ಚಿನ ಪ್ರಮಾಣವು ಕೋವಿಡ್ ರೋಗಿಗಳಲ್ಲಿ ಆರ್‌ಟಿ-ಪಿಸಿಆರ್‌ನಲ್ಲಿ ನೆಗಟಿವ್‌ಅನ್ನು ತೋರಿಸಿದೆ. ಕೋವಿಡ್-19 ರಿಂದ ಬಳಲುತ್ತಿರುವ ಜನರಿಗೆ ಈ ಔಷಧವು ಅಪಾರ ಪ್ರಯೋಜನವನ್ನು ನೀಡುತ್ತದೆ.

110 ರೋಗಿಗಳ ಮೇಲೆ ಎರಡನೇ ಹಂತದ ಪ್ರಯೋಗ

110 ರೋಗಿಗಳ ಮೇಲೆ ಎರಡನೇ ಹಂತದ ಪ್ರಯೋಗ

ಎರಡನೇ ಹಂತದ ಪ್ರಯೋಗವನ್ನು ಆರು ಆಸ್ಪತ್ರೆಗಳಲ್ಲಿ ನಡೆಸಲಾಯಿತು ಮತ್ತು ಎರಡು-ಬಿ ಹಂತದ (ಡೋಸ್ ಶ್ರೇಣಿ) ಚಿಕಿತ್ಸಾ ಪ್ರಯೋಗವನ್ನು ದೇಶಾದ್ಯಂತ 11 ಆಸ್ಪತ್ರೆಗಳಲ್ಲಿ ನಡೆಸಲಾಯಿತು. 110 ರೋಗಿಗಳ ಮೇಲೆ ಎರಡನೇ ಹಂತದ ಪ್ರಯೋಗವನ್ನು ನಡೆಸಲಾಯಿತು.

ಔಷಧದ ಪರಿಣಾಮ ಕಂಡುಕೊಳ್ಳುವ ಹಂತದಲ್ಲಿ, 2-ಡಿಜಿ ಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ವಿವಿಧ ಅಂತಿಮ ಹಂತಗಳಲ್ಲಿ ಸ್ಟ್ಯಾಂಡರ್ಡ್ ಆಫ್ ಕೇರ್ (SoC) ಗಿಂತ ವೇಗವಾಗಿ ಚೇತರಿಕೆ ತೋರಿಸಿದರು. ಎಸ್ ಒ ಸಿ ಗೆ ಹೋಲಿಸಿದಾಗ ನಿರ್ದಿಷ್ಟ ಪ್ರಮುಖ ಚಿಹ್ನೆಗಳ ನಿಯತಾಂಕಗಳ ಸಾಮಾನ್ಯೀಕರಣವನ್ನು ಸಾಧಿಸುವ ಸರಾಸರಿ ಸಮಯದ ದೃಷ್ಟಿಯಿಂದ ಗಮನಾರ್ಹವಾಗಿ ಅನುಕೂಲಕರ ಪ್ರವೃತ್ತಿ (2.5 ದಿನಗಳ ವ್ಯತ್ಯಾಸ) ಕಂಡುಬಂದಿದೆ.ಯಶಸ್ವಿ ಫಲಿತಾಂಶಗಳ ಆಧಾರದ ಮೇಲೆ, ಡಿಸಿಜಿಐ 2020 ರ ನವೆಂಬರ್ ನಲ್ಲಿ ಹಂತ -3 ಚಿಕಿತ್ಸಾ ಪ್ರಯೋಗಗಳಿಗೆ ಅನುಮತಿ ನೀಡಿತು.

220 ರೋಗಿಗಳ ಮೇಲೆ ಹಂತ -3 ಚಿಕಿತ್ಸಾ ಪ್ರಯೋಗ

ಡಿಸೆಂಬರ್ 2020 ರಿಂದ ಮಾರ್ಚ್ 2021 ರ ನಡುವೆ 220 ರೋಗಿಗಳ ಮೇಲೆ ಹಂತ -3 ಚಿಕಿತ್ಸಾ ಪ್ರಯೋಗವನ್ನು ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ 27 ಕೋವಿಡ್ ಆಸ್ಪತ್ರೆಗಳಲ್ಲಿ ನಡೆಸಲಾಯಿತು. ಹಂತ -3 ಕ್ಲಿನಿಕಲ್ ಪ್ರಯೋಗದ ವಿವರವಾದ ದತ್ತಾಂಶವನ್ನು ಡಿಸಿಜಿಐಗೆ ನೀಡಲಾಯಿತು. 2-ಡಿಜಿ ವಿಭಾಗದಲ್ಲಿ, ಗಮನಾರ್ಹವಾಗಿ ಹೆಚ್ಚಿನ ರೋಗಿಗಳು ಸುಧಾರಿಸಿದರು ಮತ್ತು ಎಸ್ ಒ ಸಿ ಗೆ ಹೋಲಿಸಿದರೆ 3ನೇ ದಿನದ ಹೊತ್ತಿಗೆ ಪೂರಕ ಆಮ್ಲಜನಕ ಅವಲಂಬನೆಯಿಂದ (42% ಮತ್ತು 31%) ಮುಕ್ತರಾದರು, ಇದು ಆಮ್ಲಜನಕ ಚಿಕಿತ್ಸೆ / ಅವಲಂಬನೆಯಿಂದ ಆರಂಭಿಕ ಪರಿಹಾರವನ್ನು ಸೂಚಿಸುತ್ತದೆ.

ಸುಲಭವಾಗಿ ಉತ್ಪಾದಿಸಬಹುದು

ಸುಲಭವಾಗಿ ಉತ್ಪಾದಿಸಬಹುದು

65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ರೋಗಿಗಳಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ. ಮೇ 01, 2021 ರಂದು, ತೀವ್ರವಾದ ಕೋವಿಡ್-19 ರೋಗಿಗಳಿಗೆ ಮಧ್ಯಮ ಪ್ರಮಾಣದಲ್ಲಿ ಸಹಾಯಕ ಚಿಕಿತ್ಸೆಯಾಗಿ ಈ ಔಷಧಿಯನ್ನು ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿತು. ಜೆನೆರಿಕ್ ಅಣು ಮತ್ತು ಗ್ಲೂಕೋಸ್‌ನ ಅನಲಾಗ್ ಆಗಿರುವುದರಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ದೇಶದಲ್ಲಿ ಸಾಕಷ್ಟು ಲಭ್ಯವಾಗಿಸಬಹುದು.

ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ

ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ

ಈ ಔಷಧವು ಪುಡಿ ರೂಪದಲ್ಲಿ ಸ್ಯಾಚೆಟ್‌ನಲ್ಲಿ ಬರುತ್ತದೆ, ಇದನ್ನು ನೀರಿನಲ್ಲಿ ಕರಗಿಸಿ ಮೌಖಿಕವಾಗಿ ತೆಗೆದುಕೊಳ್ಳಲಾಗುತ್ತದೆ. ಇದು ವೈರಸ್ ಸೋಂಕಿತ ಕೋಶಗಳಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ವೈರಲ್ ಸಂಶ್ಲೇಷಣೆ ಮತ್ತು ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುವ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ. ವೈರಸ್ (ವೈರಾಣು) ಸೋಂಕಿತ ಕೋಶಗಳಲ್ಲಿ ಇದರ ಆಯ್ದ ಶೇಖರಣೆಗೊಳ್ಳುವಿಕೆಯು ಈ ಔಷಧಿಯ ವಿಶೇಷತೆಯಾಗಿದೆ.

ಏನಿದು ಡಿಆರ್‌ಡಿಒ Anti-ಕೋವಿಡ್ ಡ್ರಗ್ಸ್? ಹೇಗೆ ಉಪಯುಕ್ತ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+