ಬಂಗಾಲದ ಮುಸ್ಲಿಂ ಕಾರ್ಮಿಕನ ಕಗ್ಗೊಲೆ, ವಿಡಿಯೋ ವೈರಲ್

Posted By:
Subscribe to Oneindia Kannada

ಜೈಪುರ, ಡಿಸೆಂಬರ್ 07: ಪಶ್ಚಿಮ ಬಂಗಾಲ ಮೂಲದ ಮುಸ್ಲಿಂ ಕಾರ್ಮಿಕನೊಬ್ಬನನ್ನು ಕೊಚ್ಚಿ ಕೊಲೆಗೈದಿರುವ ದೃಶ್ಯಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ವಿಡಿಯೋದಲ್ಲಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಮೃತ ವ್ಯಕ್ತಿಯನ್ನು 48 ವರ್ಷ ವಯಸ್ಸಿನ ಪಶ್ಚಿಮ ಬಂಗಾಲದ ಮಾಲ್ಡಾ ಮೂಲದ ಮೊಹಮ್ಮದ್ ಅಫ್ರಾಜುಲ್ ಎಂದು ಗುರುತಿಸಲಾಗಿದೆ. ಅಫ್ರಾಜುಲ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ರಾಜ್ಸಮಂದ್ ಪ್ರದೇಶದ ನಿವಾಸಿ ಶಂಭುಲಾಲ್ ರೆಗಾರ್ ಎಂದು ಗುರುತಿಸಲಾಗಿದೆ.

Rajasthan : Muslim labourer Murder video goes viral on Social Media

'ಬುಧವಾರದಂದು ಅರ್ಧ ಬೆಂದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಯಿತು. ಗುರುತು ಪತ್ತೆ ನಂತರ, ವಿಡಿಯೋ ಬಗ್ಗೆ ತಿಳಿದ ನಂತರ ಈ ಬಗ್ಗೆ ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ' ಎಂದು ರಾಜ್ ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರಾಮ್ ಸುಮೇರ್ ಮೀನಾ ಅವರು ಹೇಳಿದ್ದಾರೆ.

ಆರೋಪಿಗೆ ಸೇರಿರುವ ವಾಹನ ಪತ್ತೆಯಾಗಿದೆ. ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಐಪಿಸಿ ಸೆಕ್ಷನ್ 302, 201 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊಲೆಯ ಉದ್ದೇಶ ತಿಳಿದು ಬಂದಿಲ್ಲ. ವಿಡಿಯೋದಲ್ಲಿ ಆರೋಪಿ ಮಾಡಿರುವ ಕೋಮು ಭಾವನೆ ಕೆರಳಿಸುವಂಥ ಮಾತುಗಳ ಬಗ್ಗೆ ಕೂಡಾ ತನಿಖೆ ಜಾರಿಯಲ್ಲಿದೆ ಎಂದು ರಾಜ್ಸಮಂದ್ ಎಸ್ಪಿ ಮನೋಜ್ ಕುಮಾರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Muslim labourer from West Bengal was allegedly hacked to death and his half-charred body was found in Rajsamand district of Rajasthan. A video on social media, suspected to be of the murder, shows a man being hacked to death.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ