ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಆರೋಗ್ಯ ಸಚಿವ!
Recommended Video

ಜೈಪುರ, ಫೆಬ್ರವರಿ 15: ಒಂದೆಡೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸ್ವಚ್ಛ ಭಾರತ ಎಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ಬಿಜೆಪಿಯ ಸಚಿವರೊಬ್ಬರು ಸಾರ್ವಜನಿಕ ಸ್ಥಳದಲ್ಲಿ, ಅದರಲ್ಲೂ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ಸ್ವಚ್ಛ ಭಾರತ ಎಂಬ ಪರಿಕಲ್ಪನೆಗೆ ಅವಮಾನ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಇನ್ನೂ ವಿಪರ್ಯಾಸ ಎಂದರೆ ಇವರು ರಾಜಸ್ಥಾನದ ಆರೋಗ್ಯ ಸಚಿವರು! ಹೌದು ಆರೋಗ್ಯ ಸಚಿವ ಕಳಿಚರಣ್ ಸರಾಫ್ ಎಂಬುವವರು ಸಾರ್ವಜನಿಕ ಸ್ಥಳದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯವನ್ನು ಯಾರೋ ಫೋಟೋ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಈ ಚಿತ್ರವೀಗ ವೈರಲ್ ಆಗಿದ್ದು, ಸ್ವಚ್ಛ ಭಾರತದ ಬಗ್ಗೆ ಮಾತನಾಡುವವರ ಅಸಲಿಯತ್ತು ಇದು ನೋಡಿ ಎಂದು ಲೇವಡಿ ಮಾಡುತ್ತಿದ್ದಾರೆ!

ಜನರಲ್ಲಿ ಆರೋಗ್ಯ ಕಾಳಜಿ, ನೈರ್ಮಲ್ಯ, ಸ್ವಚ್ಛತೆಯ ಅರಿವು ಮೂಡಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿಗಳೇ ಇಂಥ ಕೆಲಸ ಮಾಡಿದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಸಹ ಈ ಚಿತ್ರವನ್ನಿಟ್ಟುಕೊಂಡು ಬಿಜೆಪಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದೆ.












Click it and Unblock the Notifications