ರಾಜಸ್ಥಾನ: ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಿದ್ದ ತಂದೆ ಬಂಧನ

ಜೈಪುರ, ಜನವರಿ 31: ತನ್ನ ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಿದ್ದ ತಂದೆಯೊಬ್ಬರನ್ನು 'ಕೊಲೆ ಯತ್ನ'ದ ಆರೋಪದಡಿ ಬಂಧಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ತನ್ನ ಪ್ಯಾಂಟ್ ಅನ್ನು ಕೊಳೆ ಮಾಡಿದರೆಂದು ಐದು ವರ್ಷದ ಮಗ ಮತ್ತು ಮೂರು ವರ್ಷದ ಮಗಳನ್ನು ಹಗ್ಗದಲ್ಲಿ ಕಟ್ಟಿ, ಹೊಡೆದು, ಬಡಿದು ತಂದೆಯೇ ಚಿತ್ರಹಿಂಸೆ ನೀಡುತ್ತಿದ್ದ ದೃಶ್ಯವನ್ನು ಆ ವ್ಯಕ್ತಿಯ ಸಹೋದರ ವಿಡಿಯೋ ಮಾಡಿ ಪೊಲೀಸರಿಗೆ ಕಳಿಸಿದ್ದಾರೆ.

ಪುಟ್ಟ ಮಕ್ಕಳಿಗೆ ಪಶುಗಳಿಗೆ ಥಳಿಸಿದಂತೆ ಥಳಿಸುತ್ತಿದ್ದ ಈ ಮನಕಲಕುವ ವಿಡಿಯೋ ನೋಡಿದ ಪೊಲೀಸರು ವ್ಯಕ್ತಿಯ ವಿಳಾಸ ಪತ್ತೆ ಹಚ್ಚಿ ಜ.30 ರಂದು ಆತನನ್ನು ಬಂಧಿಸಿದ್ದಾರೆ.

Rajasthan: father who thashes his children mercilessly, arrested

ಬಂಧನಕ್ಕೊಳಗಾದ ತಂದೆ ಚೈನ್ ಸಿಂಗ್, ನನ್ನ ಪ್ಯಾಂಟ್ ಅನ್ನು ಇಬ್ಬರು ಮಕ್ಕಳೂ ಸೇರಿ ಕೊಳೆ ಮಾಡಿದ್ದರು. ಅದಕ್ಕೆಂದೇ ಶಿಕ್ಷೆ ನೀಡಿದೆ. ಅದರಲ್ಲೇನು ತಪ್ಪು ಎಂದು ಪೊಲೀಸರನ್ನೇ ಪ್ರಶ್ನಿಸಿದ್ದಾನೆ! ಮಕ್ಕಳನ್ನು ಥಳಿಸಿದ ಚೈನ್ ಸಿಂಗ್ ನನ್ನು ಮಾತ್ರವಲ್ಲ, ಮಕ್ಕಳ ಚೀರಾಟ ಕೇಳುತ್ತಿದ್ದರೂ ಈ ದೃಶ್ಯವನ್ನು ವಿಡಿಯೋ ಮಾಡುವುದರಲ್ಲಿಯೇ ಮಗ್ನನಾದ ಸಹೋದರ ವಟ್ಟಾ ಸಿಂಗ್ ನನ್ನೂ ಪೊಲೀಸರು ಬಂಧಿಸಿದ್ದಾರೆ.

ಮಕ್ಕಳ ನ್ಯಾಯ ಕಾಯ್ದೆಯ ಅಡಿಯಲ್ಲಿ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಕೆಂಗೇರಿಯಲ್ಲಿ ಮಗು ಸುಳ್ಳು ಹೇಳಿತು ಎಂದು ತಂದೆಯೊಂದ ನಿರ್ದಯವಾಗಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+