ರಾಜಸ್ತಾನ ವಿಧಾನಸಭಾ ಚುನಾವಣೆ, ಈ ಬಾರಿ ಅಧಿಕಾರ ಯಾರ ಕೈಗೆ, ಸಮೀಕ್ಷೆ ವಿವರ
ಜೈಪುರ, ಅಕ್ಟೋಬರ್ 18: ರಾಜಸ್ತಾನ ವಿಧಾನಸಭಾ ಚುನಾವಣೆ ಮುಂಬರುವ ನವೆಂಬರ್ 25ಕ್ಕೆ ನಡೆಯಲಿದ್ದು, ಡಿಸೆಂಬರ್ 3ರಂದು ಈ ಭಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಸಮೀಕ್ಷೆ ವಿವರಗಳು ಹೊರಬಿದ್ದಿವೆ.
The GZR Team conducted a qualitative report and opinion poll in #Rajasthan from September 15th to October 5th in 80 constituencies.
— Ground Zero Research (@GroundZResearch) October 18, 2023
The survey covered all castes, cohorts, and issues through face-to-face interviews.#RajasthanElection2023#OpinionPoll#GZROpinionPoll pic.twitter.com/uJl4mAJkaP
ಗ್ರೌಂಡ್ ಜಿರೋ ರಿಸರ್ಸ್ ಸಂಸ್ಥೆ ರಾಜಸ್ಥಾನದಲ್ಲಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 5 ರವರೆಗೆ 80 ಕ್ಷೇತ್ರಗಳಲ್ಲಿ ಗುಣಾತ್ಮಕ ವರದಿ ಮತ್ತು ಅಭಿಪ್ರಾಯ ಸಂಗ್ರಹವನ್ನು ನಡೆಸಿದೆ. ಸಮೀಕ್ಷೆಯು ಎಲ್ಲಾ ಜಾತಿಗಳು, ಸಮುದಾಯಗಳು ಮತ್ತು ಸಮಸ್ಯೆಗಳನ್ನು ಮುಖಾಮುಖಿ ಸಂದರ್ಶನಗಳ ಮೂಲಕ ಒಳಗೊಂಡಿದೆ ಎಂದು ಅದು ತಿಳಿಸಿದೆ.

ಕೇಂದ್ರ ಚುನಾವಣಾ ಆಯೋಗವು ಈ ಹಿಂದೆ ರಾಜಸ್ತಾನದಲ್ಲಿ ನವೆಂಬರ್ 23ರಂದು ಚುನಾವಣೆ ನಡೆಸುವುದಾಗಿ ಘೋಷಿಸಿತ್ತು. ಆದರೆ ನವೆಂಬರ್ 23ರಂದು ಸಾವಿರಾರು ಮದುವೆ ಕಾರ್ಯಕ್ರಮಗಳು ರಾಜ್ಯದಲ್ಲಿ ನಡೆಯಲಿರುವ ಸುಳಿವು ಅರಿತ ಚುನಾವಣಾ ಆಯೋಗ ಎರಡು ದಿನ ಮುಂದಕ್ಕೆ ದಿನಾಂಕ ಮುಂದೂಡಿ ನವೆಂಬರ್ 25ರಂದು ಚುನಾವಣೆ ನಡೆಸಲಿದೆ.
ಈ ಹಿನ್ನೆಲೆಯಲ್ಲಿ ರಾಜಸ್ತಾನದಲ್ಲಿ ಆಡಳಿತರೂಢ ಪಕ್ಷವಾಗಿ ಕಾಂಗ್ರೆಸ್ ಇದೆ. ಇದು ಮತ್ತೊಂದು ಬಾರಿ ಅಧಿಕಾರವನ್ನು ಹಿಡಿಯಲು ಮುಂದಾಗಿದ್ದರೆ ಕಾಂಗ್ರೆಸ್‌ನ್ನು ಹಿಂದಿಕ್ಕಿ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸಿದೆ. ಹೀಗಾಗಿ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಗ್ರೌಂಡ್ ಜಿರೋ ರಿಸರ್ಸ್ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ, ಇದರ ಅಂಕಿ ಅಂಶಗಳು ಈಗ ಹೊರಬಿದ್ದಿವೆ.
ಗ್ರೌಂಡ್ ಜಿರೋ ರಿಸರ್ಸ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, 200 ಸದಸ್ಯ ಬಲದ ರಾಜಸ್ತಾನದಲ್ಲಿ ಬಿಜೆಪಿಗೆ ಈ ಬಾರಿ 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇದೇ ಶೇಕಡ ಮತ ಪ್ರಮಾಣ 44% ಗಿಂತಲೂ ಹೆಚ್ಚು ಎಂದು ಹೇಳಿದೆ. ಇದೇ ಆಡಳಿತರೂಢ ಕಾಂಗ್ರೆಸ್‌ಗೆ ಈ ಬಾರಿ 70ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಸ್ಥಾನ ಗಳಿಸಲಿದೆ. ಶೇಕಡ ಮತ ಪ್ರಮಾಣ 40%ಗಿಂತ ಹೆಚ್ಚು. ಇತರೆ ಸ್ಥಾನಗಳು 10ಕ್ಕೂ ಹೆಚ್ಚು ಬರಲಿವೆ. ಇದು ಶೇಕಡ ಮತ ಪ್ರಮಾಣ 16ಕ್ಕೂ ಹೆಚ್ಚು ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ಗ್ರೌಂಡ್ ಜಿರೋ ರಿಸರ್ಸ್ ನಡೆಸಿದ ನಿಮ್ಮ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಸಮೀಕ್ಷೆಗೆ ಜನರು ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಈ ಪ್ರಕಾರ ಶೇಕಡ 33ರಷ್ಟು ಮಂದಿ ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಆಗಲಿ ಎಂದರೆ ಬಿಜೆಪಿಯ ಮಾಜಿ ಸಿಎಂ ವಸುಂಧರಾ ರಾಜೆ ಪರ ಶೇಕಡ 29ರಷ್ಟು ಒಲವು ತೋರಿದ್ದಾರೆ.
ಇನ್ನು ಕಾಂಗ್ರೆಸ್‌ನ ಸಚಿನ್ ಪೈಲಟ್ ಪರ ಶೇಕಡ 16ರಷ್ಟು ಒಲವು ಹೊಂದಿದ್ದಾರೆ. ಇನ್ನು ಬಿಜೆಪಿಯಿಂದ ಯಾರದರೂ ಪರವಾಗಿಲ್ಲ ಎನ್ನುವ ಮಂದಿ ಶೇಕಡ 15ರಷ್ಟು ಇದ್ದರೆ, ಕಾಂಗ್ರೆಸ್‌ನಿಂದ ಯಾರಾದರೂ ಪರವಾಗಿಲ್ಲ ಎನ್ನುವ ಮಂದಿ ಶೇಕಡ 5ರಷ್ಟು ಇದ್ದಾರೆ. ಈಗಿರುವ ಯಾರು ಬೇಡ ಬೇರೆಯವರು ಆಗಲಿ ಎನ್ನು ಮಂದಿ ಶೇಕಡ 5ರಷ್ಟು ಇದ್ದಾರೆ ಎಂದು ಸಮೀಕ್ಷೆ ಅಂಕಿಅಂಶಗಳನ್ನು ನೀಡಿದೆ.
ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದೆ. ಕರ್ನಾಟಕದಂತೆಯೇ ರಾಜಸ್ಥಾನದಲ್ಲಿಯೂ ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಘೋಷಣೆಗಳನ್ನು ಮಾಡಿದೆ. ಇದು ರಾಜಸ್ಥಾನದಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಕಾಂಗ್ರೆಸ್ ಎದುರಾಳಿಯಾಗಿರುವ ಬಿಜೆಪಿ ಹೈಕಮಾಂಡ್ ಹೊಸ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರತವಾಗಿದೆ. ಬಿಜೆಪಿ ರಾಜ್ಯ ಘಟಕದಲ್ಲಿರುವ ಬಂಡಾಯವನ್ನು ಶಮನಗೊಳಿಸುವುದು ಹೈಕಮಾಂಡ್ ಮುಂದಿರುವ ಸವಾಲಾಗಿದೆ. ಕಳೆದ ವಾರ ರಾಜಸ್ಥಾನ ಜೈಪುರದಲ್ಲಿ ಬೀಡುಬಿಟ್ಟಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಸ್ಥಳೀಯ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications