Get Updates
Get notified of breaking news, exclusive insights, and must-see stories!

ಗವರ್ನರ್ ಎತ್ತಂಗಡಿ: ಮೋದಿ ಸರಕಾರದ ನಿರ್ಧಾರ ಸರಿಯೇ?

ನವದೆಹಲಿ, ಜೂ 19: ಹೊಸ ನೀರು ಬಂದಾಗ ಹಳೆ ನೀರು ಚೆಲ್ಲುವಂತೆ, ಕೇಂದ್ರದಲ್ಲಿ ಹೊಸ ಸರಕಾರ ಬಂದಾಗ ರಾಜ್ಯಪಾಲರೂ ಎತ್ತಂಗಡಿಯಾಗುವುದು ನಮ್ಮ ದೇಶದ ಸಂವಿಧಾನದಲ್ಲಿ ನಡೆದುಕೊಂಡು ಬರುತ್ತಿರುವ ಪದ್ದತಿ. ಈ ಕ್ರಮ ಸರಿಯೋ, ತಪ್ಪೋ ಒಟ್ಟಿನಲ್ಲಿ ಮೋದಿ ಸರಕಾರ ಅದನ್ನೇ ಮಾಡಲು ಹೊರಟಿದೆ, ಆದರೆ ಕೇಂದ್ರ ಸರಕಾರದ ಈ ಕ್ರಮಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ.

ಕಾಂಗ್ರೆಸ್ಸಿನಲ್ಲಿ ಹಲವು ಸ್ಥಾನಮಾನ ಅನುಭವಿಸಿ ರಾಜ್ಯಪಾಲರ ಹುದ್ದೆಯಲ್ಲಿ ಅಲಂಕರಿಸಿರುವವರು ಈಗ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ರಾಜೀನಾಮೆ ನಾವ್ಯಾಕೆ ನೀಡಬೇಕು, ಒಂದು ವೇಳೆ ರಾಜೀನಾಮೆ ನೀಡಬೇಕಾದರೆ ಲಿಖಿತ ರೂಪದಲ್ಲಿ ಕಾರಣ ನೀಡಿ ಎಂದು ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

ದೇಶದ ಸರ್ವೋಚ್ಚ ನ್ಯಾಯಾಲಯ ಕೂಡಾ ರಾಜ್ಯಪಾಲರ ಅವಧಿ ಮುಗಿದಿದ್ದರೆ ಓಕೆ, ಅವರಾಗಿಯೇ ಪದವಿ ತ್ಯಜಿಸಲು ಮುಂದೆ ಬಂದರೆ ಓಕೆ, ಆದರೆ ಭಲವಂತದಿಂದ ರಾಜೀನಾಮೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ನಾಲ್ಕು ವರ್ಷಗಳ ಹಿಂದೆ ನೀಡಿದ್ದ ತೀರ್ಪನ್ನು ಪುನರುಚ್ಚರಸಿ ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ. (ಅವಧಿಗೂ ಮುನ್ನ ನಾನೇಕೆ ರಾಜೀನಾಮೆ ಕೊಡ್ಲಿ)

ಸಚಿವ ಸ್ಥಾನದಿಂದ ವಂಚಿತರಾದವರಿಗೆ ರಾಜ್ಯಪಾಲರ ಹುದ್ದೆ ನೀಡಿ ಸುಮ್ಮನಾಗಿಸುವುದು ಮೋದಿ ಬಳಸುತ್ತಿರುವ ಹೊಸ ತಂತ್ರಜ್ಞಾನವೇನೂ ಅಲ್ಲ. ಅದು ಎಲ್ಲಾ ಪಕ್ಷದಲ್ಲೂ ಭಿನ್ನಮತ ಕ್ಷಮನಗೊಳಿಸಲು ಇರುವ ಕೊನೆಯ ದಾಳ. ಮೋದಿ ಸರಕಾರ ಅದನ್ನೇ ಮಾಡಲು ಹೊರಟಿದೆ ಎನ್ನುವುದು ವಾಸ್ತವತೆಯಾದರೂ 'His Excellency' ಎನ್ನುವ ಘನವೆತ್ತ ಹುದ್ದೆಯನ್ನು ರಾಜಕೀಯ ಪಕ್ಷಗಳು ತಮ್ಮ ರಾಜಕೀಯಾದಾಟಕ್ಕೆ ಬಳಸಿಕೊಳ್ಳುತ್ತಿರುವುದು ಆಕ್ಷೇಪಾರ್ಹ.

1977ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯಪಾಲರನ್ನು ಬದಲಾಯಿಸುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ತದನಂತರ ಕಾಂಗ್ರೆಸ್ ಪಕ್ಷ ಅದನ್ನು ಮುಂದುವರಿಸಿಕೊಂಡು ಹೋಯಿತು. ಈಗ ಬಿಜೆಪಿ ಸರದಿ. ಹನ್ನರಡಕ್ಕೂ ಹೆಚ್ಚು ರಾಜ್ಯಪಾಲರನ್ನು ಬದಲಾಯಿಸುವ ಕೆಲಸಕ್ಕೆ ಮೋದಿ ಸರಕಾರ ಮುಂದಾಗಿದೆ.

ಉತ್ತರಪ್ರದೇಶದ ರಾಜ್ಯಪಾಲ ಬಿ ಎಲ್ ಜೋಷಿ ಮತ್ತು ಛತ್ತೀಸಗಢದ ರಾಜ್ಯಪಾಲ ಶೇಖರ್ ದತ್ ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ರವಾನಿಸಿದ್ದಾರೆ. ರಾಜ್ಯಪಾಲ ಹುದ್ದೆ ತ್ಯಜಿಸಲು ನಿರಾಕರಿಸುತ್ತಿರುವ ರಾಜ್ಯಪಾಲರುಗಳು ಯಾರು? ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿಕ್ರಿಯೆ ಏನು? ಸ್ಲೈಡಿನಲ್ಲಿದೆ.

(ಫೋಟೋ:ಪಿಟಿಐ)

ಕರ್ನಾಟಕ ರಾಜ್ಯಪಾಲರು

ಕರ್ನಾಟಕ ರಾಜ್ಯಪಾಲರು

ಅವಧಿಗೆ ಮುನ್ನ ರಾಜ್ಯಪಾಲರು ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುವ ಪರಿಪಾಠ ಸರಿಯಲ್ಲ. ರಾಜ್ಯಪಾಲರು ನೇರವಾಗಿ ರಾಷ್ಟ್ರಪತಿಗಳ ಕಚೇರಿ ವ್ಯಾಪ್ತಿಗೆ ಬರುತ್ತಾರೆ. ನನ್ನ ಅವಧಿ ಪೂರ್ಣಗೊಂಡಿದೆ. ಆದರೆ ಇತರ ರಾಜ್ಯಪಾಲರುಗಳು ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುವುದು ಸೂಕ್ತವಲ್ಲ ಎಂದು ಕರ್ನಾಟಕದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರಧಾನಿ ಮೋದಿ ಭೇಟಿಯ ನಂತರ ದೆಹಲಿಯಲ್ಲಿ ಗುರುವಾರ (ಜೂ 19) ಮಾಧ್ಯಮದವರಿಗೆ ತಿಳಿಸಿದ್ದಾರೆ.

ಶೀಲಾ ದೀಕ್ಷಿತ್

ಶೀಲಾ ದೀಕ್ಷಿತ್

ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಯನೀಯವಾಗಿ ಸೋತ ನಂತರ ಕೇರಳದ ರಾಜ್ಯಪಾಲರಾಗಿ ಆಯ್ಕೆಯಾದ ಶೀಲಾ ದೀಕ್ಷಿತ್ ಈಗ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ರಾಜೀನಾಮೆ ನೀಡುವಂತೆ ಲಿಖಿತ ರೂಪದಲ್ಲಿ ತಿಳಿಸಿ ಎಂದು ಕೇಂದ್ರಕ್ಕೆ ಸಡ್ಡು ಹೊಡೆದಿದ್ದಾರೆ.

ಪಂಜಾಬ್ ಗವರ್ನರ್

ಪಂಜಾಬ್ ಗವರ್ನರ್

ಮಾಜಿ ಕೇಂದ್ರ ಗೃಹ ಸಚಿವ ಮತ್ತು ಪಂಜಾಬಿನ ರಾಜ್ಯಪಾಲರಾಗಿರುವ ಶಿವರಾಜ್ ಪಾಟೀಲ್ ಕೂಡಾ ಕೇಂದ್ರದ ನಿರ್ಧಾರಕ್ಕೆ ನೋ ಎಂದಿದ್ದಾರೆ. ಕೇಂದ್ರ ಏನದರೂ ಕ್ರಮ ತೆಗೆದುಕೊಳ್ಳಲಿ ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಎಂ ಕೆ ನಾರಾಯಣನ್ ಕೂಡಾ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಇವರು ಜನವರಿ 2010ರಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.

ರಾಮ್ ನರೇಶ್ ಯಾದವ್

ರಾಮ್ ನರೇಶ್ ಯಾದವ್

ಮಧ್ಯಪ್ರದೇಶದ ರಾಜ್ಯಪಾಲರಾದ ರಾಮ್ ನರೇಶ್ ಯಾದವ್ ಕೂಡಾ ರಾಜೀನಾಮೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಇವರು ಆಗಸ್ಟ್ 2011ರಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.

ಮಹಾರಾಷ್ಟ್ರ

ಮಹಾರಾಷ್ಟ್ರ

ಮಹಾರಾಷ್ಟ್ರದ ರಾಜ್ಯಪಾಲರಾಗಿರುವ ಕೆ ಶಂಕರನಾರಾಯಣನ್ ಕೂಡಾ ರಾಜೀನಾಮೆ ನೀಡುವುದಿಲ್ಲ. ರಾಜೀನಾಮೆ ನೀಡಲು ಸೂಕ್ತ ಕಾರಣ ನೀಡಿ, ಅದು ನನಗೆ ಸೂಕ್ತವೆನಿಸಿದರೆ ನಾನಾಗಿಯೇ ರಾಜೀನಾಮೆ ನೀಡುತ್ತೇನೆಂದು ತಿರುಗಿಬಿದ್ದಿದ್ದಾರೆ. ಇವರು ಜನವರಿ 2010ರಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ರಾಜೀನಾಮೆ ನೀಡಲು ನಿರಾಕರಿಸಿರುವ ರಾಜ್ಯಪಾಲರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸುತ್ತಾ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಇದೊಂದು ಮಾಮೂಲಿ ಪ್ರಕ್ರಿಯೆ, ನಮ್ಮ ಸರಕಾರ ಅದನ್ನೇ ಮಾಡಲು ಹೊರಟಿದೆ, ಒಂದು ವೇಳೆ ನಾನು ಆ ಸ್ಥಾನದಲ್ಲಿ ಇದ್ದರೆ ರಾಜೀನಾಮೆ ಬಿಸಾಕಿ ಬರುತ್ತಿದ್ದೆ ಎಂದಿದ್ದಾರೆ.

ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ

ಸರಿಯಾದ ಕಾರಣ ನೀಡದೇ ರಾಜ್ಯಪಾಲರನ್ನು ಎತ್ತಂಗಡಿ ಮಾಡುವುದು ಸಂವಿಧಾನಕ್ಕೆ ಮಾಡುವ ಅಪಚಾರವೆಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ಅಭಿಪ್ರಾಯ ಪಟ್ಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+