3 ತಿಂಗಳಲ್ಲಿ ಮಹಾ ಮಳೆಗೆ ಬಲಿಯಾದವರೆಷ್ಟು? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 9: ಈ ವರ್ಷ ಮುಂಗಾರು ವಿಳಂಬವಾಗಿದ್ದರೂ ಕೂಡ ಸಾಕಪ್ಪಾ ಎನ್ನುವಷ್ಟು ಮಳೆ ಅವಾಂತರವನ್ನು ಸೃಷ್ಟಿಸಿದೆ.
ಮಹಾರಾಷ್ಟ್ರ, ಮುಂಬೈನಿಂದ ಆರಂಭವಾದ ಮಳೆಯು ಈಗ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗಿನಲ್ಲಿ ಮಳೆ ಪ್ರವಾಹವನ್ನೇ ತಂದೊಡ್ಡಿದೆ.
ಈ ವರ್ಷ ಮಳೆಗೆ ದೇಶಾದ್ಯಂತ ಒಟ್ಟು 496 ಮಂದಿ ಮೃತಪಟ್ಟಿದ್ದಾರೆ.ಅದರಲ್ಲಿ ಮಹಾರಾಷ್ಟ್ರದಲ್ಲಿ 137, ಕರ್ನಾಟಕದಲ್ಲಿ 57, ಒಡಿಶಾದಲ್ಲಿ 64 ಮಂದಿ ಬಲಿಯಾಗಿದ್ದಾರೆ. ಮೃತ ಜಾನುವಾರುಗಳ ಲೆಕ್ಕ ಹಾಕುವುದಾದರೆ ಒಟ್ಟು 7102 ಸಾವಿನಲ್ಲಿ 6281 ಜಾನುವಾರುಗಳು ಒಡಿಶಾದಲ್ಲಿ ಮೃತಪಟ್ಟಿವೆ.

ಅಸ್ಸಾಂ 364, ಗುಜರಾತ್ 220, ಕರ್ನಾಟಕದಲ್ಲಿ 102 ಜಾನುವಾರುಗಳು ಮೃತಪಟ್ಟಿವೆ. ಒಟ್ಟು 6 ಲಕ್ಷ ಮನೆಗಳಿಗೆ ಹಾನಿಯಾಗಿವೆ. 4 ಲಕ್ಷ ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿವೆ. ಒಡಿಶಾದಲ್ಲಿ 2.52 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಹಾನಿಯಾಗಿದೆ.
ಏಪ್ರಿಲ್ 2016 ರಿಂದ ಜುಲೈ 2019ರವರೆಗೆ ದೇಶದಲ್ಲಿ 6582 ಸಾವು ಸಂಭವಿಸಿದೆ. ಕೇರಳದಲ್ಲಿ ಶೇ.11, ಪಶ್ಚಿಮ ಬಂಗಾಳದಲ್ಲಿ ಶೇ 10.1, ಮಹಾರಾಷ್ಟ್ರದಲ್ಲಿ 7.9, ಹಿಮಾಚಲಪ್ರದೇಶದಲ್ಲಿ ಶೇ. 7ರಷ್ಟಿದೆ.
ಬೆಳಗಾವಿ, ಶಿವಮೊಗ್ಗ ಉತ್ತರ ಕನ್ನಡದಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.












Click it and Unblock the Notifications