Rain Alert: ಗುಡುಗು & ಸಿಡಿಲು ಸಹಿತ ಭೀಕರ ಮಳೆ, 40 ಜನರ ಜೀವ ಬಲಿ?

ಮನುಷ್ಯ ಪ್ರಕೃತಿ ಮೇಲೆ ಮಾಡುತ್ತಿರುವ ದೌರ್ಜನ್ಯಕ್ಕೆ, ಪ್ರಕೃತಿ ಕೂಡ ದೊಡ್ಡ ಮಟ್ಟದಲ್ಲಿ ರಿವೇಂಜ್ ತೆಗೆದುಕೊಳ್ಳುತ್ತಿದೆ. ಒಂದು ಕಡೆ ಕರ್ನಾಟಕ ರಾಜ್ಯವೂ ಸೇರಿದಂತೆ ದಕ್ಷಿಣ ಭಾರತ ಬಿರು ಬಿಸಿಲಿನಲ್ಲಿ ನರಳಿ ಹೋಗುತ್ತಿದೆ. ಆದರೆ ಇನ್ನೊಂದು ಕಡೆ ಉತ್ತರ ಭಾರತ & ಭಾರತದ ಶತ್ರು ಪಾಪಿ ಪಾಕಿಸ್ತಾನ ಮಳೆಯ ಏಟಿಗೆ ಥರ ಥರ ನಡುಗಿ ಹೋಗಿದೆ. ಹಾಗೇ ಭೀಕರ ಮಳೆ ಪರಿಣಾಮ ಹತ್ತಾರು ಜನರು ಜೀವ ಬಿಟ್ಟಿದ್ದಾರೆ. ಇನ್ನೊಂದು ಕಡೆ ಕರ್ನಾಟಕದಲ್ಲೂ ಮಳೆ ಬರುತ್ತಾ? ಬನ್ನಿ ತಿಳಿಯೋಣ.

ಬೇಸಿಗೆ ಸಮಯದಲ್ಲಿ ಭೂಮಿ ಕೊತ ಕೊತ ಕುದಿಯುತ್ತದೆ, ಯಾಕೆ ಅಂದ್ರೆ ಈ ಸಮಯಕ್ಕೆ ಭೂಮಿ ಸೂರ್ಯನಿಗೆ ಅತಿ ಸಮೀಪದಲ್ಲಿ ಸಾಗಿ ಹೋಗುತ್ತದೆ. ಮೊದಲೇ ವಾತಾವರಣದಲ್ಲಿ ಭಾರಿ ಬದಲಾವಣೆ ಎದುರಾಗಿ ಜನ ಪರದಾಡುತ್ತಿದ್ದಾರೆ, ಪರಿಸ್ಥಿತಿ ಹೀಗಿದ್ದಾಗ ಕಳೆದ ವರ್ಷ ಮಳೆಯೇ ಬೀಳದೆ ಭೀಕರ ಬರ ಎದುರಾಗಿದೆ. ಹೀಗೆ ಎಲ್ಲವೂ ಕೈಮೀರಿ ಹೋಗಿರುವಾಗಲೇ ಮಳೆರಾಯ ಒಂದಷ್ಟು ಕರುಣೆ ತೋರಿಸಿದ್ದಾನೆ. ಆದರೆ ಹೀಗೆ ಬೀಳುತ್ತಿರುವ ಮಳೆ ಎಲ್ಲೆಲ್ಲೂ ಅಲ್ಲೋಲ & ಕಲ್ಲೋಲ ಸೃಷ್ಟಿ ಮಾಡಿದ್ದು. ಹಾಗಾದರೆ, ಕರ್ನಾಟಕದಲ್ಲಿ ಮಳೆ ಬೀಳುವುದು ಯಾವಾಗ ಅಂತಾ ಗೊತ್ತೆ? ಮುಂದೆ ಓದಿ.

Rain Become Deadliest And Killed More People In This Area

ಮಳೆ ಹಾವಳಿಗೆ ಕೊಚ್ಚಿ ಹೋದ ಬದುಕು

ಪರಿಸ್ಥಿತಿ ಹೇಗಾಗಿದೆ ಅಂದ್ರೆ ಉತ್ತರ ಭಾರತದಲ್ಲಿ ಮಳೆಯ ಹಾವಳಿಗೆ ಜನರ ಬದುಕು ಪೂರ್ತಿ ಮುಳುಗಿ ಹೋಗುತ್ತಿದೆ. ಜಮ್ಮು & ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶವು ಸೇರಿ ಭಾರತದ ಶತ್ರು ಪಾಕಿಸ್ತಾನದಲ್ಲಿ ಭೀಕರ ಮಳೆ ಬೀಳುತ್ತಿದೆ. ಇದರ ಜೊತೆಗೆ ಹಿಮಪಾತ ಕೂಡ ಭಾರಿ ಪ್ರಮಾಣದಲ್ಲಿ ಆಗುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಈ ಮೂಲಕ ಮಳೆ ಹಾವಳಿಗೆ ಪ್ರಜೆಗಳ ಬದುಕು ಬೀದಿಗೆ ಬಿದ್ದಿದೆ. ಆದರೂ ಪಾಕಿಸ್ತಾನದಲ್ಲಿ ರಾಜಕಾರಣಿಗಳು ರಾಜಕೀಯ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಈವರೆಗೂ ಪಾಕಿಸ್ತಾನದ ನೆಲದಲ್ಲಿ ಭೀಕರ ಮಳೆಗೆ ಬಲಿಯಾದ ಜನರ ಸಂಖ್ಯೆ ಎಷ್ಟು?

ಭೀಕರ ಮಳೆಗೆ 40ಕ್ಕೂ ಹೆಚ್ಚು ಜನ ಬಲಿ?

ಪಾಕಿಸ್ತಾನದಲ್ಲಿ ಮಳೆ ಹೇಗೆ ಬೀಳುತ್ತಿದೆ ಎಂದರೆ, ನಿಂತ ನೆಲವೇ ಕೊಚ್ಚಿಕೊಂಡು ಹೋಗಿ ಜನರು ಪದಾಡುತ್ತಿದ್ದಾರೆ. ಜಮ್ಮು & ಕಾಶ್ಮೀರ ರೀತಿಯೇ ಪಾಕಿಸ್ತಾನದಲ್ಲಿ ಕೂಡ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಭಾರಿ ಮಳೆಯಿಂದ ಈವರೆಗೂ ಪಾಕಿಸ್ತಾನದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎನ್ನಲಾಗಿದೆ. ಇವರ ಜೊತೆ 50ಕ್ಕೂ ಹೆಚ್ಚು ಜನ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ, ಕರ್ನಾಟಕದಲ್ಲಿ ಕೂಡ ಮಳೆಯ ಮುನ್ಸೂಚನೆ ಸಿಗುತ್ತಿದೆ.

Rain Become Deadliest And Killed More People In This Area

ಕರ್ನಾಟಕದಲ್ಲಿ ಈ ವಾರ ಮಳೆ ಗ್ಯಾರಂಟಿ?

ಹವಾಮಾನ ಇಲಾಖೆ ಈ ಹಿಂದೆಯೇ ನೀಡಿದ ಮಾಹಿತಿ ಪ್ರಕಾರ, ಕನ್ನಡಿಗರ ನೆಲದಲ್ಲಿಯೂ ಭಾರಿ ಮಳೆಯ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಅಧಿಕಾರಿಗಳು ನೀಡಿದ್ದ ಮಾಹಿತಿಯಂತೆ ಈ ವಾರದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಮಳೆ ಬೀಳುವ ನಿರೀಕ್ಷೆ ಇದೆ. ಹೀಗಾಗಿ ಕನ್ನಡಿಗರು ಕೂಡ ಉತ್ತಮವಾಗಿ ಮಳೆ ಬೀಳಲಿ ದೇವರೆ ಅಂತಾನು ಕಾಯುತ್ತಿದ್ದಾರೆ. ಅವರ ಪ್ರಶ್ನೆಗೆ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗಲಿದ್ದು. ಅದರಲ್ಲೂ ಒಂದು ಸರಿಯಾದ ಮಳೆ ಕರ್ನಾಟಕಕ್ಕೆ ಬಿದ್ದರೆ, ಪರಿಸ್ಥಿತಿ ಹಿಡಿತಕ್ಕೆ ಸಿಗಲಿದೆ. ಇಲ್ಲವಾದರೆ ಬರದ ನಡುವೆ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+