ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ, ರಾಜಸ್ಥಾನದಲ್ಲಿ ಧಾರಾಕಾರ ಮಳೆ: ಟ್ರಾಫಿಕ್ ಜಾಮ್

|
Google Oneindia Kannada News

ನವದೆಹಲಿ, ಮಾರ್ಚ್ 6: ದೆಹಲಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ದೆಹಲಿ-ಎನ್‌ಸಿಆರ್ ನಲ್ಲಿ ಶುಕ್ರವಾರ ಸಂಜೆ ಭಾರಿ ಪ್ರಮಾಣದ ಮಳೆಯಾಗಿದೆ.

ದೆಹಲಿಯ ವಿವಿಧ ಪ್ರದೇಶಗಳಲ್ಲೂ ಕೂಡ ಮಳೆಯಾಗುತ್ತಿದೆ. ಬೆಳಗ್ಗೆಯಿಂದ ಸ್ವಲ್ಪ ಮೋಡ ಸರಿದಿತ್ತು ಆದರೆ, ಸಂಜೆ ವೇಳೆಗೆ ಮತ್ತೆ ಮೋಡ ಕಳೆಗಟ್ಟಿ ವಾತಾವರಣ ಬದಲಾಗಿತ್ತು. ದೆಹಲಿಯಲ್ಲಿ ಗರಿಷ್ಠ ಉಷ್ಣಾಂಶು ಹೆಚ್ಚಾಗಿತ್ತು. ಈಗ ಮಳೆಯಾಗಿರುವ ಕಾರಣ ಮುಂದಿನ ಕೆಲ ದಿನಗಳಲ್ಲಿ ತಾಪಮಾನ ತಗ್ಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಎರಡು ದಿನ ಮಳೆ ಸಾಧ್ಯತೆಬೆಂಗಳೂರು ನಗರದಲ್ಲಿ ಎರಡು ದಿನ ಮಳೆ ಸಾಧ್ಯತೆ

ನೋಯ್ಡಾದಲ್ಲಿ ಗಂಟೆಗೆ 50 ರಿಂದ 70 ಕಿ.ಮೀನಷ್ಟು ಗಾಳಿ ಬೀಸುತ್ತಿತ್ತು. ಮಳೆಗಾಲವಿಲ್ಲದಿದ್ದರೂ ರಾಜಸ್ತಾನದಲ್ಲಿ ಕೂಡ ಮಳೆಯಾಗುತ್ತಿದೆ. ಶ್ರೀ ಗಂಗಾನಗರ, ಹನುಮಾನ್‌ಗಢ,ಜೈಪುರ, ಚೂರು,ಬಿಕಾನೇರ್‌ನಲ್ಲಿ ಮಳೆಯಾಗಿದೆ. ಕಳೆದ 24 ಗಂಟೆಗಳಿಂದ ಮಳೆಯಾಗುತ್ತಿದೆ.

Rain And Thundershowers To Lash Rajasthan And Delhi

ಗುಜರಾತಿನಲ್ಲಿ ಕಳೆದ ಒಂದು ತಿಂಗಳಿಂದ ಅತಿಯಾದ ಉಷ್ಣಾಂಶ ದಾಖಲಾಗಿತ್ತು. ಅರಬ್ಬಿ ಸಮುದ್ರದಲ್ಲಿ ಸೈಕ್ಲೋನ್ ಉದ್ಭವವಾದ ಬೆನ್ನಲ್ಲೇ ರಾಜಸ್ಥಾನ, ಗುಜರಾತಿನಲ್ಲಿ ಹೆಚ್ಚಿನ ಮಳೆಯಾಗುತ್ತಿದೆ.

English summary
The past Western Disturbances have been giving scattered rain and thundershower activities in Rajasthan And Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X