Rain Alert: ಭಾರೀ ಮಳೆ ಮುನ್ಸೂಚನೆಯಿಂದ ಈ ರಾಜ್ಯಗಳ ರೈತರಿಗೆ ಆತಂಕ ಶುರು-ಕಾರಣ ಏನು ಗೊತ್ತೇ?
Rain Alert: ದೇಶದ ಹಲವೆಡೆ ಇದೀಗ ಮಳೆರಾಯ ಮೆಲ್ಲಗೆ ಕರುಣೆ ತೋರಿದ್ದಾನೆ. ಇನ್ನುಳಿದೆಡೆ ತಾಪಮಾನ ಏರಿಕೆಯಾಗುತ್ತಲೇ ಇದೆ. ಇನ್ನು ಏಪ್ರಿಲ್ 20ರ ಒಳಗಡೆ ಹಲವು ರಾಜ್ಯಗಳಲ್ಲಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ್ಯಾವ ಜಿಲ್ಲೆಗಳಲ್ಲಿ ಯಾವಾಗ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪಂಜಾಬ್ ಮತ್ತು ಹರಿಯಾಣದಲ್ಲಿ ಏಪ್ರಿಲ್ 13-15ರ ಅವಧಿಯಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಪಶ್ಚಿಮದಲ್ಲಿ ಗಾಳಿಯು ಏಪ್ರಿಲ್ 12ರಿಂದ ವಾಯುವ್ಯ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆ 13-15 ರ ಅವಧಿಯಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ವ್ಯಾಪಕವಾಗಿ ಮಳೆಯಾಗುವ ಸಾಧ್ಯೆತೆಯಿದೆ. ಇನ್ನು ಗಾಳಿ ವೇಗವು ಗಂಟೆಗೆ 30-50 ಕಿಲೋ ಮೀಟರ್ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾದ ವಿಶೇಷ ಸಂದೇಶದಲ್ಲಿ, IMD ಏಪ್ರಿಲ್ 13 ಮತ್ತು 14ರಂದು ದೇಶದ ಹಲವೆಡೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇನ್ನು ಕೆಲವು ಸ್ಥಳಗಳಲ್ಲಿ ಏಪ್ರಿಲ್ 15ರಂದು ಕೆಲವೆಡೆ ಸಾಧಾರಣ ಮಳೆಯಾಗಲಿ ಎಂದು ತಿಳಿಸಲಾಗಿದೆ.
ಏಪ್ರಿಲ್ 13ರಂದು ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಇನ್ನು ಗೋಧಿ ಬೆಳೆ ಫಸಲಿಗೆ ಬರುವ ಹಂತದಲ್ಲಿದೆ. ಆದ್ದರಿಂದ ಗೋಧಿ ಕೊಯ್ಲು ಮಾಡುವ ಸಮಯವಾಗಿದ್ದು, ಈ ಹಂತದಲ್ಲಿ ಮಳೆ, ಹೆಚ್ಚಿನ ವೇಗದ ಗಾಳಿ ಬೀಸಿದರೆ, ಅದು ಬೆಳೆಯನ್ನು ನೆಲಸಮಗೊಳಿಸುತ್ತದೆ ಮತ್ತು ಕಟಾವು ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತದೆ ಎನ್ನುತ್ತಾರೆ ಪಂಬಾಜ್, ಹರಿಯಾಣದ ರೈತರು.
ಈಗಾಗಲೇ ಮಾರ್ಚ್ 30ರ ಹಿಂದಿನ ಆಲಿಕಲ್ಲು ಮಳೆಯಿಂದ ಮಾಲ್ವಾ ಪ್ರದೇಶದ ವಿವಿಧ ಭಾಗಗಳಲ್ಲಿ ಬೆಳೆ ನೆಲಸಮವಾಗಿದ್ದು, ಮತ್ತೆ ಇದೀಗ ಮಳೆ ಮುನ್ಸೂಚನೆ ಇರುವುದರಿಂದ ಈ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನು IMD ಮುನ್ಸೂಚನೆಯ ಪ್ರಕಾರ, ಏಪ್ರಿಲ್ 7-9 ರವರೆಗೆ ಗೋವಾದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಈ ವೇಳೆ ಯಾವುದೇ ಬದಲಾವಣೆಗಳಾಗಿಲ್ಲ, ಬದಲಿಗೆ ತಾಪಮಾನದ ಪ್ರಮಾಣ ಹೆಚ್ಚಾಗಿತ್ತು
ಗೋವಾದಲ್ಲಿ ಏಪ್ರಿಲ್ 11 ರವರೆಗೆ ಕನಿಷ್ಠ ತಾಪಮಾನ ಏರಿಳಿತ ಆಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನ ನೀಡಿದೆ. ಇನ್ನು ಪಣಜಿಯಲ್ಲಿ ಗರಿಷ್ಠ ತಾಪಮಾನ 33.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ತಿಳಿಸಿದೆ.












Click it and Unblock the Notifications