ರೈಲುಗಳಿಗೆ ಮೇರು ಸಾಹಿತಿ, ಸಾಹಿತ್ಯ ಕೃತಿಗಳ ಮರು ನಾಮಕರಣ

ನವದೆಹಲಿ, ಸೆಪ್ಟೆಂಬರ್ 2: ಮೇರು ಸಾಹಿತ್ಯ ಕೃತಿಗಳ ಹೆಸರನ್ನು ಇನ್ನು ಮುಂದೆ ರೈಲುಗಳಿಗೆ ಇಡುವ ಪ್ರಸ್ತಾವವೊಂದು ಇದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಆ ಕೃತಿಯ ಜತೆಗೆ ಅದರ ರಚನಕಾರರು ಮತ್ತು ಅವರು ಯಾವ ಪ್ರದೇಶದವರೋ ಆ ವಿವರಗಳ ಸಹ ಇರಲಿವೆ.

ವಿವಿಧ ರೈಲ್ವೆ ವಲಯಗಳ ವ್ಯಾಪ್ತಿಯಲ್ಲಿ ರೈಲುಗಳಿಗೆ ಹೆಸರು ಇಡುವ ಉದ್ದೇಶದಿಂದಲೇ ಸಚಿವಾಲಯವು ಪ್ರಶಸ್ತಿ ವಿಜೇತ ಸಾಹಿತ್ಯ ಕೃತಿಗಳ ಮಾಹಿತಿ ಕಲೆ ಹಾಕಲು ಆರಂಭಿಸಿದೆ.

Railway

ಒಂದು ವೇಳೆ ನೀವು ಮೈಸೂರಿಗೆ ಹೋಗುತ್ತಿದ್ದೀರಿ ಅಂದರೆ ಕುವೆಂಪು ಅವರ ಕಾನೂರು ಹೆಗ್ಗಡಿತಿಯೋ ರಾಮಾಯಣ ದರ್ಶನಂ ಹೀಗೆ ಕೃತಿಯ ಹೆಸರು ರೈಲಿಗೆ ಇಡಬಹುದು. ಈಗಾಗಲೇ ದೇಶದಾದ್ಯಂತ ಪ್ರಶಸ್ತಿ ವಿಜೇತ ಸಾಹಿತ್ಯ ಕೃತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಈ ಆಲೋಚನೆಯು ರೈಲ್ವೆ ಸಚಿವರಾದ ಸುರೇಶ್ ಪ್ರಭು ಅವರದು. ರೈಲ್ವೆ ಎಂಬುದು ಜಾತ್ಯತೀತವಾಗಿ ದೇಶವನ್ನು ಬೆಸೆಯುವಂಥದ್ದು. ವಿವಿಧ ಸಂಸ್ಕೃತಿಗಳನ್ನು ಪ್ರತಿನಿಧಿಸುವಂತೆ ರೈಲುಗಳಿಗೆ ವಿವಿಧ ಭಾಷೆಗಳ ಮೇರು ಸಾಹಿತ್ಯ ಕೃತಿಗಳು ಹಾಗೂ ಸಾಹಿತಿಗಳು ಹೆಸರನ್ನು ಇಡುವ ಪ್ರಸ್ತಾವ ಅವರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಕೆಲವು ರೈಲುಗಳಿಗೆ ಅಂಥ ಸಾಹಿತ್ಯ ಸ್ಪರ್ಶ ಸಿಕ್ಕಿದೆ. ಉದಾಹರಣೆಗೆ ಮುಂಬೈನಿಂದ ಉತ್ತರಪ್ರದೇಶಕ್ಕೆ ತೆರಳುವ ರೈಲಿಗೆ ಮುನ್ಷಿ ಪ್ರೇಮ್ ಚಂದ್ ರ ಕೃತಿಯ ಹೆಸರನ್ನು ಇಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+