ಶೇ 50ರ ವರೆಗೆ ರೈಲು ಟಿಕೆಟ್ ದರ ಏರಿಕೆ: 6 ಸಾವಿರ ಕೋಟಿ ಹೆಚ್ಚು ಆದಾಯ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 8: ರಾಜಧಾನಿ, ಶತಾಬ್ದಿ ಹಾಗೂ ಡ್ಯುರಂಟೋ ರೈಲುಗಳಲ್ಲಿ ಪ್ರಯಾಣಿಸುವವರು ಶೇ 10ರಿಂದ 50ರಷ್ಟು ಹೆಚ್ಚಿನ ಟಿಕೆಟ್ ದರ ಕೊಡಬೇಕಾಗುತ್ತದೆ. ಸೆ.9ರಿಂದಲೇ ಈ ಏರಿಕೆ ಆಗಲಿದ್ದು, ಆ ಮೂಲಕ ಈ ಆರ್ಥಿಕ ವರ್ಷದಲ್ಲಿ 500 ಕೋಟಿ ರುಪಾಯಿ ಹೆಚ್ಚು ಆದಾಯ ಸಂಗ್ರಹಿಸುವ ಗುರಿ ರೈಲ್ವೆ ಇಲಾಖೆಯದಾಗಿದೆ.

ಮೊದಲಿಗೆ ಒಟ್ಟಾರೆ ಸೀಟಿನ ಪೈಕಿ ಶೇ 10ರಷ್ಟು ಟಿಕೆಟ್ ದರ ಈಗಿರುವಂತೆಯೇ ಇರುತ್ತದೆ. ಆ ನಂತರ ಬರ್ತ್ ಇರುವ ಸಂಖ್ಯೆಯ ಲೆಕ್ಕದಲ್ಲಿ ಶೇ 10ರಷ್ಟು ಸೀಟಿಗೆ ಶೇ 10ರ ಪ್ರಮಾಣದಲ್ಲಿ ಹೆಚ್ಚಿಸುತ್ತಾ ಹೋಗಿ, ಗರಿಷ್ಠ ಶೇ 50ಕ್ಕೆ ನಿಲ್ಲಿಸಲಾಗುತ್ತದೆ. ಈ ದರವನ್ನು ಆರಂಭದಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ. ರಾಜಧಾನಿ, ಶತಾಬ್ದಿ ಹಾಗೂ ಡ್ಯುರಂಟೋ ರೈಲುಗಳ 2ಎಸಿ, 3ಎಸಿ, ಚೇರ್ ಕಾರ್ ಗೆ ಇದು ಅನ್ವಯ ಆಗುತ್ತದೆ.[ದಸರಾಕ್ಕೆ ಗೋಲ್ಡನ್ ಚಾರಿಯಟ್ ಸಂಚಾರ, ದರ ಪಟ್ಟಿ]

Railways starts surge pricing in Rajdhani, Duronto, Shatabdi trains

ಡ್ಯುರಂಟೋ ರೈಲಿನ ಸ್ಲೀಪರ್ ಕ್ಲಾಸ್, ಫಸ್ಟ್ ಎಸಿ ಹಾಗೂ ಎಕ್ಸ್ ಕ್ಯೂಟಿವ್ ಕ್ಲಾಸ್ ಈ ದರ ಏರಿಕೆಯಿಂದ ಹೊರತಾಗಿವೆ. ಈಗಾಗಲೇ ಇವುಗಳಿಗೆ ಹೆಚ್ಚಿನ ಪ್ರಯಾಣ ದರ ಇದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟಾರೆ 42 ರಾಜಧಾನಿ, 46 ಶತಾಬ್ದಿ, 54 ಡ್ಯುರಂಟೋ ರೈಲುಗಳಿವೆ. ಪ್ರಯಾಣ ದರ ಹೆಚ್ಚಳದಿಂದಾಗಿ 500 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಈ ಆರ್ಥಿಕ ವರ್ಷದಲ್ಲಿ ಇದರಿಂದ ಆರು ಸಾವಿರ ಕೋಟಿ ಆದಾಯ ಹೆಚ್ಚಳವಾಗಿ ಒಟ್ಟಾರೆ ಆದಾಯ 51 ಸಾವಿರ ಕೋಟಿ ಆಗುತ್ತದೆ ಎಂದು ಅಂದಾಜಿಸಲಾಗಿದೆ. 'ನಾವು ಫ್ಲೆಕ್ಸಿ ಫೇರ್ ಸಿಸ್ಟಮ್ ಪರಿಚಯಿಸ್ತಿದೀವಿ. ಪ್ರಾಯೋಗಿಕವಾಗಿ ಹೇಗಿರುತ್ತದೆ ಅನ್ನೋದನ್ನ ಮೂರ್ನಾಲ್ಕು ತಿಂಗಳು ನೋಡ್ತೀವಿ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಯಶವಂತಪುರ-ಶಿವಮೊಗ್ಗ ರೈಲು ವಾರದಲ್ಲಿ 3 ದಿನ ಸಂಚಾರ]

2ಎಸಿ ಹಾಗೂ ಚೇರ್ ಕಾರ್ ಗೆ ಗರಿಷ್ಠ ಶೇ 50ರಷ್ಟು, 3ಎಸಿಗೆ ಗರಿಷ್ಠ ಶೇ 40ರಷ್ಟು ಏರಿಕೆಯಾಗುತ್ತದೆ. ರಿಸರ್ವೇಷನ್ ಚಾರ್ಜ್, ಸೂಪರ್ ಫಾಸ್ಟ್ ಚಾರ್ಜ್, ಕೇಟರಿಂಗ್ ಚಾರ್ಜ್, ಸರ್ವೀಸ್ ಟ್ಯಾಕ್ಸ್ ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಟಿಕೆಟ್ ದರ ಏರಿಕೆ ಎಷ್ಟಾಗುತ್ತದೆ ಎಂಬುದಕ್ಕೆ ಉದಾಹರಣೆ ಅಂದರೆ, ನವದೆಹಲಿ-ಮುಂಬೈ 3ಎಸಿ ಮಂಬೈ ರಾಜಧಾನಿ ಪ್ರಯಾಣ ದರದ ಬೇಸ್ ಫೇರ್ 1,628 ರು. ಇದೆ ಶೇ 10ರಷ್ಟು ಹೆಚ್ಚಳವಾದರೆ 1,791 ಆಗುತ್ತದೆ. ಗರಿಷ್ಠ ಹೆಚ್ಚಳ ಅಂದರೆ ಶೇ 50ರಷ್ಟಾದರೆ 2,279 ಆಗುತ್ತದೆ.

ಈ ಫ್ಲೆಕ್ಸಿ ಪ್ಲಾನ್ ಯೋಜನೆಯನ್ನು ವಿಮಾನಯಾನ ಸಂಸ್ಥೆಗಳು ಈಗಾಗಲೇ ಅನುಸರಿಸುತ್ತಿವೆ. ಸೆ.9 ಹಾಗೂ ನಂತರದ ಪ್ರಯಾಣಕ್ಕೆ ಈಗಾಗಲೇ ಟಿಕೆಟ್ ಖರೀದಿಸಿದವರಿಗೆ ಇದು ಅನ್ವಯ ಆಗಲ್ಲ. ಈಗಾಗಲೇ ಟಿಕೆಟ್ ಖರೀದಿಸಿದವರಿಂದ ಹೆಚ್ಚಿನ ಮೊತ್ತವನ್ನೇನೂ ವಸೂಲು ಮಾಡುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Passengers travelling by Rajdhani, Shatadbi and Duronto trains will have to pay 10 and 50 per cent more under a dynamic surge pricing system to be introduced from September 9.
Please Wait while comments are loading...